ಮಹಿಳೆಯರ ಅಭಿವೃದ್ಧಿ, ಬೆಳವಣಿಗಾಗಿ ಒಂದಾಗಿ ಕೈ ಜೋಡಿಸೋಣ ಎಂಬ ಶೀರ್ಷಿಕೆಯಡಿಯಲ್ಲಿ ಧಾನ್ ಫೌಂಡೇಶನ್ “ವಾಕಥಾನ್”

ನಂದಿನಿ ಮೈಸೂರು

ಮಹಿಳೆಯರ ಅಭಿವೃದ್ಧಿ, ಬೆಳವಣಿಗಾಗಿ ಒಂದಾಗಿ ಕೈ ಜೋಡಿಸೋಣ ಎಂಬ ಶೀರ್ಷಿಕೆಯಡಿಯಲ್ಲಿ
ಮೈಸೂರಿನ ಧಾನ್ ಫೌಂಡೇಶನ್ ವತಿಯಿಂದ ವಾಕಥಾನ್ 2025 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಿಎಫ್ ಟಿ ಆರ್ ಐ ಡೈರೆಕ್ಟರ್ ಶ್ರೀದೇವಿ ಅನ್ನಪೂರ್ಣ ಸಿಂಗ್,
ಸಂಚಾರ ಪೋಲಿಸ್ ನಿರೀಕ್ಷಕರಾದ ಮಮತಾ ರವರು ಹಸಿರು ನಿಶಾನೆ ಮೂಲಕ ವಾಕಥಾನ್ ಗೆ ಚಾಲನೆ ನೀಡಿದರು.

ಮೈಸೂರು ನಗರ ಪೊಲೀಸ್ ಇಲಾಖೆಯೂ ಧಾನ್ ಫೌಂಡೇಶನ್ ಜೊತೆ ಕೈ ಜೋಡಿಸಿ
ಮಹಿಳಾ ಸಬಲೀಕರಣ ಬಡತನ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಿದರು.

ಚಾಮುಂಡೇಶ್ವರಿ ಹರ್ಬನ್ ಹಾರ್ಟ್ ಪೋಸ್ಟರ್ ಬಿಡುಗಡೆ
ಚಾಮುಂಡೇಶ್ವರಿ ಹರ್ಬನ್ ಹಾರ್ಟ್ ಪೋಸ್ಟರ್ ಬಿಡುಗಡೆ

ಇತ್ತೀಚಿಗೆ ಮಹಿಳೆಯರಿಗೆ ಆಗುವ ತೊಂದರೆ ಹಾಗೂ ಸೈಬರ್ ಮೋಸದ ಕುರಿತು ಮಾತನಾಡಿದ ಅವರು
ಮನೆ ಅಕ್ಕ ಪಕ್ಕದಲ್ಲಿ ಯಾವುದೇ ತೊಂದರೆ ಇದ್ದರೇ ಪೋಲಿಸ್ ಠಾಣೆಗೆ ಮಾಹಿತಿ ನೀಡಿ.ಸಾಮಾಜಿಕ ಜಾಲತಾಣದಿಂದ ನಿಮಗೆ ಮೋಸ ಮಾಡುವ ವ್ಯಕ್ತಿಗಳು ಇದ್ದಾರೆ ಎಚ್ಚರವಾಗಿರಿ.ಮೊಬೈಲ್ ಪೋನ್ ತುಂಬ ಜಾಗೃತವಾಗಿ ಬಳಸಿ. ಅಪರಿಚಿತ ವ್ಯಕ್ತಿಗಳು ನಿಮಗೆ ತೊಂದರೆ ಕೊಡುತ್ತಿದ್ದರೇ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ ಪೊಲೀಸ್ ನಿಮ್ಮೊಟ್ಟಿಗಿದ್ದಾರೆ ಎಂದು
ಮಹಿಳೆಯರ ವಾಕಥಾನ್ ಕಾರ್ಯಕ್ರಮದಲ್ಲಿ ಅನೇಕ ಸಮಾಜಿಕ ವಿಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ನೀಡಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆರಂಭವಾದ ವಾಕಥಾನ್ ಪ್ರಮುಖ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಕರ್ನಾಟಕ ವಸ್ತು ಪ್ರದರ್ಶನ ಮೈದಾನದಲ್ಲಿ ಅಂತ್ಯಗೊಂಡಿತು.

ವಾಕಥಾನ್ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ನೂರಾರು ಸ್ವಸಹಾಯ ಸಂಘದ ಮಹಿಳೆಯರು
ವಾಕಥಾನ್ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ನೂರಾರು ಸ್ವಸಹಾಯ ಸಂಘದ ಮಹಿಳೆಯರು

ಧಾನ್ ಫೌಂಡೇಶನ್ ಮೈಸೂರು ವಲಯ ಸಂಯೋಜಕರಾದ ಶಂಕರ್ ಪ್ರಸಾದ್ ಮಾತನಾಡಿ
ಮಧುರೈ ನಲ್ಲಿ ಧಾನ್ ಫೌಂಡೇಶನ್ ಸಂಸ್ಥೆ ಸ್ಥಾಪಿಸಲಾಗಿದೆ.ವರ್ಷ ಕಳೆದಂತೆ ಮಹಿಳೆಯರ ಸಂಘ ಅಭಿವೃದ್ಧಿ ಆಗುತ್ತಾ ಹೋಯ್ತು.ಸಂಘದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು
2006 ರಿಂದ ವಾಕಥಾನ್ ಆರಂಭಿಸಿದೇವು. ಕರ್ನಾಟಕದಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ
2012 ರಿಂದ ವಾಕಥಾನ್ ಆರಂಭಿಸಿದೆವು.ಪ್ರತಿ ಎರಡು ವರ್ಷಕ್ಕೊಮ್ಮೆ ಒಂದು ಶಿರ್ಷಿಕೆ ಇಟ್ಟುಕೊಂಡು ವಾಕಥಾನ್ ನಡೆಸಲಾಗುತ್ತದೆ.ದಾನ್ ಫೌಂಡೇಶನ್
16 ರಾಜ್ಯ,35 ಸಾವಿರ ಹಳ್ಳಿ,
85 ಸಾವಿರ ಸ್ವಸಹಾಯ ಸಂಘ ಗಳಿವೆ.3.5 ಮಿಲಿಯನ್ ಕುಟುಂಬ ತಲುಪಿದ್ದೇವೆ.ಒಟ್ಟು 245 ಒಕ್ಕೂಟ.
ಮೈಸೂರಿನಲ್ಲಿ 7 ಒಕ್ಕೂಟ ಮಾಡಿದ್ದೇವೆ. ಬ್ಯಾಂಕ್ ಗಳಿಂದ ಸೌಲಭ್ಯ ಸಿಗುವ ಮಾಹಿತಿ ನೀಡುತ್ತಿದ್ದೇವೆ.
ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು.ಅದಕ್ಕೆ ಬೇಕಾದ ಸಹಾಯ ಧಾನ್ ಫೌಂಡೇಶನ್ ನಲ್ಲಿ ಪಡೆಯಬಹುದಾಗಿದೆ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಸ್ವಸಹಾಯ ಸಂಘ ನಡೆಸುವ ಮುಖ್ಯಸ್ಥರು
ಸ್ವಸಹಾಯ ಸಂಘ ನಡೆಸುವ ಮುಖ್ಯಸ್ಥರು

ಆಶಿರ್ವಾದ್ ಎಂಟರ್ಪ್ರೈಸ್ ಉದ್ಯಮಿ ಶ್ರೀನಿಧಿ ಮೂರ್ತಿ ,ಉದಯ್ ಕುಮಾರ್,ಚಂದ್ರಶೇಖರ್, ಸತೀಶ್,ಸುಖಾಂತ್,ಕಿರಣ್ ಕುಮಾರ್,ಪ್ರಮೀಳಾ,ರಾಮ್,ಮೋಹನ್ ಕುಮಾರ್,ಜಯಲಕ್ಷ್ಮಿ ಕೆ.ಎಸ್,ಭಾಗ್ಯ.ಎ.ಎಂ,ಪ್ರಭು ಶಂಕರ್ ಎಂ, ಕೃತಿಕಾ,ಸುನೀತಾ,ಒಕ್ಕೂಟದ ನಾಯಕಿಯರು,ಸಿಬ್ಬಂದಿಗಳು,ಕಳಂಜಿಯಂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮೀನಾಕ್ಷಿ. ಎಸ್ ಮಹಿಳಾ ಕಳಂಜಿಯಂ ಸ್ವಸಹಾಯ ಸಂಘ
ಮೀನಾಕ್ಷಿ. ಎಸ್ ಮಹಿಳಾ ಕಳಂಜಿಯಂ ಸ್ವಸಹಾಯ ಸಂಘ

ನಾನು ಮೀನಾಕ್ಷೀ ನಾನು ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ.ನಾನು ಮಹಿಳಾ ಕಳಂಜಿಯಂ ಸ್ವಸಹಾಯ ಸಂಘದಲ್ಲಿ ಕಳೆದ 19 ವರ್ಷದಿಂದ ಸದಸ್ಯಳಾಗಿದ್ದೇನೆ.10 ರೂಪಾಯಿ ಕಟ್ಟುವ ಮೂಲಕ ಸಂಘಕ್ಕೆ ಸೇರಿಕೊಂಡೆ.ಒಂದುವರೆ ಲಕ್ಷ ಉಳಿತಾಯ ಮಾಡಿದ್ದೇನೆ. ನನಗೆ ಭರತ್ ಹಾಗೂ ನಂದಿನಿ  ಇಬ್ಬರು ಮಕ್ಕಳಿದ್ದಾರೆ.ಅವರ ವಿಧ್ಯಾಭ್ಯಾಸಕ್ಕೆ ಸಂಘದಿಂದ ಸ್ಕಾಲರ್ ಶೀಪ್ ಸಿಕ್ಕಿತ್ತು.ಇದೀಗಾ ಇಬ್ಬರು ಮಕ್ಕಳು ಓದಿ ಇಂದು ಸ್ವಂತ ಕೆಲಸ ಮಾಡುತ್ತಿದ್ದಾರೆ.ಅದಲ್ಲದೇ ಸಂಘದಿಂದ 3 ಲಕ್ಷ ರೂ ಸಾಲ ಪಡೆದು ಮನೆ ಭೋಗ್ಯಕ್ಕೆ ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ.ದಾನ್ ಫೌಂಡೇಶನ್ ಸಂಸ್ಥೆ ಕಷ್ಟ ಕಾಲದಲ್ಲಿ ನಮ್ಮ ಸಹಾಯಕ್ಕೆ ಬಂದಿದೆ ಎಂದು ಖುಷಿ ಹಂಚಿಕೊಂಡರು.

Leave a Reply

Your email address will not be published. Required fields are marked *