ನಂದಿನಿ ಮೈಸೂರು
ಬ್ಯಾತಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಸಹಾಯಕಿ ದೇವಮ್ಮನವರ ನಿವೃತ್ತಿ ಕಾರ್ಯಕ್ರಮವನ್ನು ಬ್ಯಾತಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಸದರಿ ಕಾರ್ಯಕ್ರಮಕ್ಕೆ ಮೈಸೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮಂಜುಳಾ ಪಾಟೀಲ್ ರವರು ಮೇಲ್ವಿಚಾರಕರಾದ ಸುನಿತಾ ಆರ್ ಗ್ರಾಮ ಪಂಚಾಯತಿ ಸದಸ್ಯರಾದ ಶಿವಯ್ಯ ಮತ್ತು ಉಮಾ ರಾಣಿ ಹಾಗು ಮಹಾಲಿಂಗ ಸ್ವಾಮಿ ಉಪಸ್ಥಿತರಿದ್ದರು ಅಂಗನವಾಡಿ ಟೀಚರ್ ಶ್ರೀಮತಿ ಲಲಿತಾ ರವರು ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.
ಮಂಜುಳಾ ಪಾಟೀಲ್ ರವರು ನಿವೃತ್ತಿಗೊಂಡ ದೇವಮ್ಮನವರ 15 ವರ್ಷ ಸೇವೆಯನ್ನು ಸ್ಮರಿಸುತ್ತಾ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.