ಮೈಸೂರು:18 ಮೇ 2022
ನಂದಿನಿ ಮೈಸೂರು
ನೂತನವಾಗಿ ಮೇಲ್ದರ್ಜೆಗೇರಿಸಿ ರಚಿಸಿರುವ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಪೌರ ಕಾರ್ಮಿಕರನ್ನು ಜನಸಂಖ್ಯೆಯ ಅನುಗುಣವಾಗಿ ವಿಲೀನಗೊಳಿಸಿ ಪೌರ ಸೇವಾ
ನೌಕರರಾಗಿ ಖಾಯಂ ಮಾಡಿಕೊಡುವ ಸಭೆಯನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮಾತನಾಡಿ
ಮೈಸೂರು ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳನ್ನು ಜನಸಂಖ್ಯೆಯ ಆಧಾರದ ಮೇಲೆ ಮೇಲ್ದರ್ಜೆಗೇರಿಸಿರುವ , ಹೂಟಗಳ್ಳಿ,ಶ್ರೀರಾಂಪುರ ಪಟ್ಟಣ ಪಂಚಾಯಿತಿ , ಕಡಕೊಳ ರಮ್ಮನಹಳ್ಳಿ, ಪಟ್ಟಣ ಪಂಚಾಯಿತಿ 2011 ರಂದು ಮೇಲ್ಮರ್ಜೆಗೇರಿಸಿರುವುದು ಸರಿಯಷ್ಟೇ. ಇದುವರೆವಿಗೂ ಪೌರ ಕಾರ್ಮಿಕರನ್ನು ಪೌರ ಸೇವಾ ನೌಕರರೆಂದು ವಿಲೀನಗೊಳಿಸಿದೆ . ಇವರಿಗೆ ಗ್ರಾಮ ಪಂಚಾಯಿತಿಯಲ್ಲಿ ನೀಡುತ್ತಿರುವ ವೇತನವನ್ನೇ ನೀಡುತ್ತಿರುತ್ತಾರೆ ಸ್ವಚ್ಚತಾ ಕೆಲಸವನ್ನು ಮುನಿಸಿಫಲ್ ಕಾಯ್ದೆ ಪ್ರಕಾರ ಸ್ವಚ್ಛತಾ ಕೆಲಸವನ್ನು ಮಾಡಿಸಿಕೊಳ್ಳುತ್ತಿರುತ್ತಾರೆ ಹಾಗೂ ಈ ಪೌರ ಕಾರ್ಮಿಕರಿಗೆ ಅನಾರೋಗ್ಯ ಮತ್ತು ಇನ್ನಿತರ ಯಾವುದೇ ತೊಂದರೆಗಳಾದರೆ ಯಾವುದೇ ಸರ್ಕಾರದ ಸೌಲಭ್ಯಗಳನ್ನು ನೀಡುತ್ತಿರುವುದಿಲ್ಲ . ಸರ್ಕಾರದ ನಿಯಮದಂತೆ , ಜನಸಂಖ್ಯೆಯ ಆಧಾರದ ಮೇಲೆ ಅಂದರೆ , 2011 ರ ಜನಗಣತಿಯನ್ನು ಪರಿಗಣಿಸದೆ . ಪ್ರಸ್ತುತ 2021 ರ ಜನಗಣತಿಯನ್ನು ಪರಿಗಣಿಸಿ , ಜನಸಂಖ್ಯೆಯ ಆಧಾರದ ಮೇಲೆ ಅಂದರೆ , 100 ಜನಸಂಖ್ಯೆಗೆ ಒಬ್ಬ ಪರ ಕಾರ್ಮಿಕನಂತೆ , ಪೌರ ಸೇವಾ ನೌಕರರಾಗಿ ವಿಲೀನಗೊಳಿಸಿ ನೇಮಕ ಮಾಡಿಕೊಡಬೇಕಾಗಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಮಂಚಯ್ಯ,ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್,ರಾಜ್ಯ ಉಪಾಧ್ಯಕ್ಷ ಜಿ.ಎನ್.ಚಾಮ,ಚಿನ್ನಪ್ಪ,ಗೋಪಾಲ್, ಸ್ವಾಮಿನಾಥನ್, ಕಿರಣ್,ಮೂರ್ತಿ ಸೇರಿದಂತೆ ಸಂಘದ ಸದಸ್ಯರು ಭಾಗಿಯಾಗಿದ್ದರು.