ಮೈಸೂರು:29 ಸೆಪ್ಟೆಂಬರ್ 2021
ಕಬ್ಬು ಬೆಳೆಗಾರರ ರೈತರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಲಾಯಿತು.
ರೈತ ಮುಖಂಡ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ಕೃಷಿ ಮೇಲಿನ ಸಾಲ, ಅಭಿವೃದ್ಧಿ ಸಾಲ ಹಾಗೂ ಭೂಮಿ ಮೇಲಿನ ಸಾಲ ಹೆಚ್ಚಿಗೆ ಮಾಡಬೇಕು.ಈಗ ಎಲ್ಲಾ ಉದ್ಯಮದಾರರಿಗೂ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಾಲ ನೀಡುತ್ತಿದ್ದಾರೆ. ಆದರೆ, ರೈತರಿಗೆ ಮಾತ್ರ ಕಳೆದ ೩೦ ವರ್ಷಗಳಿಂದಲೂ ಸೀಮಿತ ಸಾಲ ಮಾತ್ರ ನೀಡಲಾಗುತ್ತಿದೆ. ಹೀಗಾಗಿ ನೂತನ ಕಾಯಿದೆ ಜಾರಿಗೊಳಿಸುವ ಮೂಲಕ ಬ್ಯಾಂಕ್ ಗಳು ಹೆಚ್ಚಿನ ಸಾಲ ನೀಡಬೇಕೆಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ಮಾತನಾಡಿ, ರೈತರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಡ್ಡಾಯವಾಗಿ ಭಾಗವಹಿಸಬೇಕು.ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯಬೇಕೆಂಬುದು ನಮ್ಮ ಒತ್ತಾಯ ಅವರಿಲ್ಲದಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಜಿಲ್ಲಾಡಳಿತ ಮಾಡಬೇಕು. ಗ್ರಾಮೀಣ ಭಾಗದ ರೈತ ಕುಟುಂಬದ ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಶೂನ್ಯ ಖಾತೆ ತೆರೆಯಲು ಅನೂಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ
೨೦೦೮ ರಿಂದ ೨೦೧೫ ರವರೆಗಿನ ಬೆಳೆ ಸಾಲ ಮನ್ನಾ ಮಾಡಿದರು. ಆದರೆ ಬ್ಯಾಂಕಿನಲ್ಲಿ
ಸಾಲ ಪಡೆಯಲು ಮಧ್ಯವರ್ತಿಗಳು ಅಗತ್ಯವಾಗಿ ಬೇಕಿದೆ. ಆದರೆ ಬೆಳೆ ಸಾಲ ಮನ್ನಾ ಮಾಡಲು
ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಹೇಳಿದರು.