ನಂದಿನಿ ಮನುಪ್ರಸಾದ್ ನಾಯಕ್
ದಸರಾ ವಿಶೇಷ ಸ್ಟೋರಿ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಆನೆಗಳ ಪರಿಚಯ ಓದೋಣ ಬನ್ನಿ
– ಅಭಿಮನ್ಯು
ಹೆಸರು : ಅಭಿಮನ್ಯು
ಅಂಗ : ಗಂಡು
ವಯಸ್ಸು : 59 ವರ್ಷಗಳು
ಆನೆ ಶಿಬಿರ : ಮತ್ತಿಗೋಡು ಆನೆ ಶಿಬಿರ
ಮಾವುತ : ವಸಂತ ಜೆ.ಎಸ್.
ಕವಾಡಿ : ರಾಜು ಜೆ.ಕೆ
ಶರೀರದ ಎತ್ತರ: 2.72 ಮೀಟರ್
ಶರೀರದ ಉದ್ದ : 3.51ಮೀಟರ್
ಅಂದಾಜು ತೂಕ : 4920 ಕೆ.ಜಿ.
ಗುಣ ಲಕ್ಷಣಗಳು : ಈ ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, ವಿಶೇಷ ಗುಣವೆಂದರೆ ಕಾಡಾನೆಗಳನ್ನು ಸೆರೆಹಿಡಿಯುವ, ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಹಿಂದೆ 140ರಿಂದ 150 ಕಾಡಾನೆಗಳನ್ನು ಮತ್ತು 40 ರಿಂದ 50 ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತದೆ ಮತ್ತು ಕಳೆದ 5 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸುತ್ತಿದೆ.
– ಧನಂಜಯ
ಹೆಸರು: ಧನಂಜಯ
ಅಂಗ: ಗಂಡು
ವಯಸ್ಸು: 45 ವರ್ಷ
ಆನೆ ಶಿಬಿರ: ದುಬಾರೆ
ಮಾವುತ: ಭಾಸ್ಕರ್ ಜೆ.ಸಿ.
ಕವಾಡಿ: ರಾಜಣ್ಣ ಜೆ.ಎಸ್.
ಶರೀರದ ಎತ್ತರ: 2.80 ಮೀಟರ್
ಶರೀರದ ಉದ್ದ 3.84 ಮೀಟರ್
ಅಂದಾಜು ತೂಕ: 4050 ಕೆಜಿ
ಗುಣ ಲಕ್ಷಣಗಳು: ಈ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ವಲಯದ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಯಿತು. ಕಾಡಾನೆ ಮತ್ತು ಹುಲಿಗಳನ್ನು ಸೆರಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. ಕಳೆದ 7 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.
– ಭೀಮ
ಹೆಸರು : ಭೀಮ
ಅಂಗ : ಗಂಡು
ವಯಸ್ಸು : 25 ವರ್ಷ
ಆನೆ ಶಿಬಿರ : ಮತ್ತಿಗೋಡು
ಮಾವುತ : ಗುಂಡು
ಕವಾಡಿ : ನಂಜುಂಡಸ್ವಾಮಿ
ಶರೀರದ ಎತ್ತರ: 2.85 ಮೀಟರ್
ಶರೀರದ ಉದ್ದ : 3.05ಮೀಟರ್
ಅಂದಾಜು ತೂಕ : 5300 ಕೆ.ಜಿ.
ಗುಣ ಲಕ್ಷಣಗಳು: ಈ ಆನೆಯು ಕಾಡಾನೆ ಮತ್ತು ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. 2017ನೇ ಸಾಲಿನ ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ ಹಾಗೂ 2022ನೇ ಸಾಲಿನಲ್ಲಿ ಪಟ್ಟದಾನೆ ಹಾಗೂ ಸಾಲಾನೆಯಾಗಿ ಭಾಗಿಯಾಗಿದ್ದು, ಈ ಬಾರಿಯು ಸಹ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
– ಕಂಜನ್
ಹೆಸರು : ಕಂಜನ್
ಅಂಗ : ಗಂಡು
ವಯಸ್ಸು : 26 ವರ್ಷ
ಆನೆ ಶಿಬಿರ : ದುಬಾರೆ
ಮಾವುತ : ಜೆ.ಡಿ.ವಿಜಯ
ಕವಾಡಿ : ಕಿರಣ
ಶರೀರದ ಎತ್ತರ: 2.89 ಮೀಟರ್
ಅಂದಾಜು ತೂಕ : 3900 ಕೆ.ಜಿ.
ಗುಣ ಲಕ್ಷಣಗಳು: ಈ ಆನೆಯನ್ನು 2014ರಲ್ಲಿ ಹಾಸನ ಜಿಲ್ಲೆ ಯಳಸೂರು ಬಳಿ ಸೆರೆಹಿಡಿಯಲಾಗಿದ್ದು, ಪ್ರಸ್ತುತ ಆರೋಗ್ಯವಾಗಿದ್ದು, ಕಳೆದ 2 ಸಾಲುಗಳಲ್ಲಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಖಾರಿಯು ಸಹ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
– ಏಕಲವ್ಯ
ಹೆಸರು: ಏಕಲವ್ಯ
ಅಂಗ: ಗಂಡು
ವಯಸ್ಸು: 40 ವರ್ಷ
ಆನೆ ಶಿಬಿರ: ಮತ್ತಿಗೋಡು
ಮಾವುತ: ಇದಾಯತ್
ಕವಾಡಿ: ಸೃಜನ್
ಶರೀರದ ಎತ್ತರ: 2.88 ಮೀಟರ್
ಅಂದಾಜು ತೂಕ: 5150 ಕೆ.ಜಿ.
ಗುಣ ಲಕ್ಷಣಗಳು: ಈ ಆನೆಯು ಆರೋಗ್ಯವಾಗಿದ್ದು, ವಾಹನ ಹಾಗೂ ಪಟಾಕಿಗಳ ಶಬ್ದಕ್ಕೆ ಅಂಜುವುದಿಲ್ಲ. ಎರಡನೇ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
– ಪ್ರಶಾಂತ
ಹೆಸರು: ಪ್ರಶಾಂತ
ಅಂಗ: ಗಂಡು
ವಯಸ್ಸು: 53 ವರ್ಷ
ಆನೆ ಶಿಬಿರ: ದುಬಾರೆ
ಮಾವುತ: ಚಿನ್ನಪ್ಪ
ಕವಾಡಿ: ಚಂದ್ರ
ಶರೀರದ ಎತ್ತರ: 2.61 ಮೀಟರ್
ಶರೀರದ ಉದ್ದ: 3.46 ಮೀಟರ್
ಅಂದಾಜು ತೂಕ: 4650 ಕೆ.ಜಿ
ಗುಣ ಲಕ್ಷಣಗಳು: ಈ ಆನೆಯನ್ನು 1993ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, ಈ ಆನೆಯು ಬಲಿಷ್ಟ ಆನೆಯಾಗಿದ್ದು 15 ವರ್ಷಗಳಿಂದಲೂ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
– ಕಾವೇರಿ
ಹೆಸರು: ಕಾವೇರಿ
ಅಂಗ: ಹೆಣ್ಣು
ವಯಸ್ಸು: 45 ವರ್ಷ
ಆನೆ ಶಿಬಿರ: ದುಬಾರೆ
ಮಾವುತ: ಜೆ.ಡಿ.ದೋಬಿ
ಕವಾಡಿ: ಸಂಜನ್
ಶರೀರದ ಎತ್ತರ: 2.50 ಮೀಟರ್
ಶರೀರದ ಉದ್ದ: 3.32 ಮೀಟರ್
ಅಂದಾಜು ತೂಕ: 3500 ಕೆ.ಜಿ
ಗುಣ ಲಕ್ಷಣಗಳು: ಈ ಆನೆಯನ್ನು ಫೆಬ್ರವರಿ 2009ರಂದು ಸೋಮವಾರಪೇಟೆ ಅಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಸದರಿ ಆನೆಯು ಈ ಹಿಂದೆ ಅನೇಕ ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, ಪ್ರಸ್ತುತ ಸಾಲಿನಲ್ಲಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವುದಕ್ಕಾಗಿ ಆಯ್ಕೆ ಮಾಡಲಾಗಿದೆ.
– ಮಹೇಂದ್ರ
ಹೆಸರು: ಮಹೇಂದ್ರ
ಅಂಗ: ಗಂಡು
ವಯಸ್ಸು: 43 ವರ್ಷ
ಆನೆ ಶಿಬಿರ: ಬಳ್ಳೆ
ಮಾವುತ: ರಾಜಣ್ಣ
ಕವಾಡಿ: ಮಲ್ಲಿಕಾರ್ಜುನ
ಶರೀರದ ಎತ್ತರ: 2.75 ಮೀಟರ್
ಶರೀರದ ಉದ್ದ: 3.25 ಮೀಟರ್
ಅಂದಾಜು ತೂಕ: 4850 ಕೆ.ಜಿ
ಗುಣ ಲಕ್ಷಣಗಳು: ಈ ಆನೆ 2022-23ರ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, ಶ್ರೀರಂಗಪಟ್ಟಣದ ಗ್ರಾಮೀಣ ದಸರಾ ಮಹೋತ್ಸವದಲ್ಲಿ ಮರದ ಅಂಬಾರಿಯನ್ನು ಹೊತ್ತಿದೆ. ವಿವಿಧ ಗ್ರಾಮೀಣ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ. ಈ ಆನೆಯು ಕಾಡಾನೆ ಮತ್ತು ಹುಲಿಗಳನ್ನು ಸೆರಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಈ ಬಾರಿಯೂ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
– ಲಕ್ಷ್ಮಿ
ಹೆಸರು: ಲಕ್ಷ್ಮಿ
ಅಂಗ: ಹೆಣ್ಣು
ವಯಸ್ಸು: 54 ವರ್ಷ
ಆನೆ ಶಿಬಿರ: ಬಳ್ಳೆ
ಮಾವುತ: ಸಣ್ಣಪ್ಪ
ಕವಾಡಿ: ಮಂಜು
ಶರೀರದ ಎತ್ತರ: 2.52 ಮೀಟರ್
ಶರೀರದ ಉದ್ದ: 3.02ಮೀಟರ್
ಅಂದಾಜು ತೂಕ: 3050 ಕೆ.ಜಿ
ಗುಣ ಲಕ್ಷಣಗಳು: ಈ ಅನೆಯು ಸರ್ಕಸ್ ಆನೆಯಾಗಿದ್ದು, 2015ರಲ್ಲಿ ಇಲಾಖಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಆರೋಗ್ಯವಾಗಿದ್ದು, ವಾಹನ ಹಾಗೂ ಪಟಾಕಿಗಳ ಶಬ್ಧಗಳಿಗೆ ಅಂಜುವುದಿಲ್ಲ. ಎರಡನೇ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.