ನಂದಿನಿ ಮನುಪ್ರಸಾದ್ ನಾಯಕ್
ಮೈಸೂರು: ಮೈಸೂರು ಜಿಲ್ಲಾ ಚಿನ್ನಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘ ಆಯೋಜಿಸದ್ದ ವಿಶ್ವಬ್ರಹ್ಮ ಕ್ರಿಕೆಟ್ ಟೂರ್ನಿಮೆಂಟ್ ೨೦೨೫ರ ವಿಜೇತರಾಗಿ ಉಡುಪಿಯ ಗುರುಗಣೇಶ್ ತಂಡವು ೭೨ ರನ್‌ಗಳ ಅಂತರದಲ್ಲಿ ಎಂಆರ್‌ಸಿ ತಂಡವನ್ನು ಕಟ್ಟಿ ಹಾಕಿ ಜಯಭೇರಿ ಭಾರಿಸಿತು.

ನಗರದ ಮೈಸೂರು ವಿವಿಯ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಮೆಂಟ್ ಆಯೋಜಿಸಲಾಗಿದ್ದು, ಸತತ ಮೂರು ದಿನಗಳು ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂತಿಮ ಹಂತದಲ್ಲಿ ಉಡುಪಿಯ ಗುರುಗಣೇಶ್ ತಂಡವು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ೬ ಓವರ್‌ಗಳಲ್ಲಿ ೬ ವಿಕೆಟ್ ಉದರಿ ನಷ್ಟಕ್ಕೆ ೯೦ರನ್ ಕಲೆಹಾಕಿತ್ತು. ಬಳಿಕ ಚೇಸಿಂಗ್ ಮಾಡಿದ ಮೈಸೂರು ರಾಯಲ್ ಚಾಲೆಂಜರ್ಸ್(ಎಂಆರ್‌ಸಿ) ತಂಡವು ೬ ಓವರ್‌ಗಳಲ್ಲಿ ೪ ವಿಕೆಟ್ ಉದರಿ ನಷ್ಟಕ್ಕೆ ಕೇವಲ ೧೮ ರನ್‌ಗಳಿಸಿ ಎರಡನೇ ಸ್ಥಾನಕ್ಕೆ ಜಿಗಿಯಿತು. ಗುರುಗಣೇಶ್ ತಂಡದ ಸಾಗರ್ ಬೆಸ್ಟ್ ಬೋಲರ್ ಹೆಗ್ಗಳಿಕೆ ಪಾತ್ರವಾಗಿ, ಪ್ರಥಮ ಸ್ಥಾನಗಳಿಸಿ ಟ್ರೋಫಿ ಹಾಗೂ ೩೦ ಸಾವಿರ ರೂ. ನಗದು ಬಹುಮಾನ ತನ್ನಾಗಿಸಿಕೊಂಡಿತು. ಎರಡನೇ ಸ್ಥಾನ ಪಡೆದ ಎಂಆರ್‌ಸಿ ತಂಡವು ಟ್ರೋಫಿ ಹಾಗೂ ೨೦ ಸಾವಿರ ರೂ. ನಗದು ತನ್ನದಾಗಿಸಿಕೊಂಡರೆ, ತಂಡ ಆಟಗಾರ ಅಕ್ಷಯ್ ಕುಮಾರ್ ಬೆಸ್ಟ್ ಬ್ಯಾಟ್ಸಮನ್ ಹೊರಹೊಮ್ಮಿದರು. ಮೂರನೇ ಸ್ಥಾನವನ್ನು ಮೈಸೂರು ಸೂಪರ್ ಕಿಂಗ್ ಪಡೆದುಕೊಂಡು ಸಮಧಾನಕರ ಟ್ರೋಫಿ ತಮ್ಮದಾಗಿಸಿಕೊಂಡರು.
ಸಹಾಯಕ ಆರಕ್ಷಕ ಉಪನಿರೀಕ್ಷಕ ಎಂ.ಎಸ್ ಉಮಾಪತಿ, ಗೆಜ್ಜಗಳ್ಳಿ ನಿಕಟಪೂರ್ವ ಎಂ ಮಹೇಶ್, ಬೆಂಗಳೂರು ಚಿನ್ನ ಮತ್ತು ಬೆಳ್ಳಿ ಆಭರಣಗಳ ತಯಾರಿಕರ ನಿಗಮ ಅಧ್ಯಕ್ಷ ವಿಶ್ವನಾಥ್ ಆಚಾರ್ಯ, ಡಾ.ಬಿ.ಎಂ ಉಮೇಶ್ ಕುಮಾರ್, ಮೈಸೂರು ಜಿಲ್ಲಾ ಚಿನ್ನಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಗೋಲ್ಡನ್ ಟಿ.ಸುರೇಶ್, ಗೌರವಾಧ್ಯಕ್ಷ ರವಿಪ್ರಕಾಶ್, ಕಾರ್ಯಾಧ್ಯಕ್ಷ ರಾಘವೇಂದ್ರ ಶೇಠ್, ಕಾರ್ಯದರ್ಶಿ ಶಶಿಧರಾಚಾರ್ಯ, ಕ್ರೀಡಾ ಕಾರ್ಯದರ್ಶಿ ನಾಗರಾಜ ಆಚಾರ್ಯ ಉಪಸ್ಥಿತರಿದ್ದರು.