ನಂದಿನಿ ಮೈಸೂರು
ರೋಟರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ
ರೋಟರಿ ಹೆರಿಟೇಜ್ ಕ್ಲಬ್ ತಂಡದ ಆಟಗಾರರ
ಉತ್ತಮ ಪ್ರದರ್ಶನದೊಂದಿಗೆ ಜಯಭೇರಿ
ಮೈಸೂರು: ಫೆ.೧೬ರ ಭಾನುವಾರದಂದು ಪುತ್ತೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ ೩೧೮೧ರ ರೋಟರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ
ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ತಂಡ ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಜಯಭೇರಿ ಬಾರಿಸಿದೆ.
ರಾಯಲ್ ಚಾಲೆಂಜರ್ಸ್ ಮೈಸೂರು ಹೆಸರಲ್ಲಿ ರೋಟರಿ ಕ್ಲಬ್ ಆಫ್ ಹೆರಿಟೇಜ್ ನ ಮೈಸೂರು ತಂಡದ (ಕ್ಲಬ್ ನ) ಸದಸ್ಯರುಗಳಾದ ಮತ್ತು ಕ್ರಿಕೆಟ್ ಆಟಗಾರರಾದ ರೊ.ನವೀನ್ ಚಂದ್ (ತಂಡದ ನಾಯಕರು), ರೊ.ವಿನಯ್ ಕುಮಾರ್, ರೊ.ಬಾಲಸುಬ್ರಹ್ಮಣ್ಯ, ರೊ.ರಮೇಶ್, ರೊ.ಸುನಿಲ್, ರೊ.ಅಶೋಕ್ ಮತ್ತು ಇತರೆ ರೋಟರಿ ಕ್ಲಬ್ ನ ಕ್ರಿಕೆಟ್ ಆಟಗಾರರಾದ ರೊ.ದಿವಿನ್ ವರ್ಮ, ರೊ.ನಿರಂಜನ್, ರೊ.ವಿಕಾಸ್, ರೊ.ಸುಕುಮಾರ್, ರೊ.ಸಚಿನ್,ರೊ.ಸುರೇಶ್ ಮತ್ತು ರೊ.ಸುಭಾಷ್ ರೈ ಇವರೆಲ್ಲರೂ ಪಂದ್ಯಾವಳಿಯಲ್ಲಿ ಭಾಗವಹಿಸಿ ಈ ಬಾರಿಯ ಆರ್.ಪಿ.ಎಲ್ ಕಪ್ ಅನ್ನು ಭರ್ಜರಿ ಜಯದೊಂದಿಗೆ ಮುಡಿಗೇರಿಸಿಕೊಂಡರು.
ರೋಟರಿ ಮೈಸೂರು ಉತ್ತರದ ಸದಸ್ಯರು ಮತ್ತು ೨೦೨೫-೨೬ನೇ ಸಾಲಿನ ನಿಯೋಜಿತ ಸಹಾಯಕ ಗವರ್ನರ್ ರೊ.ಜಗದೀಶ್ ರವರು ರಾಯಲ್ ಚಾಲೆಂಜರ್ಸ್ ಮೈಸೂರು ತಂಡದ ಮಾಲೀಕರಾಗಿ ಮತ್ತು ರೋಟರಿ ಕ್ಲಬ್ ಆಫ್ ಹೆರಿಟೀಜ್ ನ ಅಧ್ಯಕ್ಷರಾದ ರಾಜೇಶ್.ಆರ್ ರವರ ಮಾರ್ಗದರ್ಶನದಲ್ಲಿ ತಂಡದ ಆಟಗಾರರಿಗೆ ಸ್ಫೂರ್ತಿ ತುಂಬಿ ಜಯಭೇರಿ ಭಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.
ಇದೇ ವೇಳೆ ರೋಟರಿ ಹೆರಿಟೇಜ್ ಕ್ಲಬ್ ಮತ್ತು ರೋಟರಿ ಉತ್ತರ ಕ್ಲಬ್ ನ ಸರ್ವ ಸದಸ್ಯರು, ಆಟಗಾರರಿಗೆ ಮತ್ತು ಪಂದ್ಯಾವಳಿಯ ಆಯೋಜಕರಿಗೆ ಅಭಿನಂದನೆಗಳ ಮಹಾಪೂರದೊಂದಿಗೆ ಶುಭ ಹಾರೈಸಲಾಯಿತು.
ಈ ಪಂದ್ಯಾವಳಿಯನ್ನು ರೋಟರಿ ಜಿಲ್ಲೆ ೩೧೮೧ರ ಜಿಲ್ಲಾ ಗವರ್ನರ್ ಆದ ರೊ.ವಿಕ್ರಮದತ್ತ ರವರು ಪಂದ್ಯಾವಳಿಯನ್ನು ಉದ್ಘಾಟಿಸಿದರು.ಮತ್ತು ೨೦೨೭-೨೮ನೇ ಸಾಲಿನ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿರುವ ರೊ.ಯಶಸ್ವಿ ಸೋಮಶೇಖರ್ ರವರು ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.