ಮೈಸೂರು:18 ಫೆಬ್ರವರಿ 2022
ನಂದಿನಿ ಮೈಸೂರು
‘ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ’ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸಂಬಂಧಿಸಿದಂತೆ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದವರ ವರ್ತನೆ ತೀವ್ರ ಖಂಡನೀಯ‘ ಎಂದು ಬಿಜೆಪಿ ಮೈಸೂರು ನಗರ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು ಹೇಳಿದರು.
ಪತ್ರಿಕೆ ಹೇಳಿಕೆ ನೀಡಿದ ಅವರು ‘ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಮುಂದಿನ ನೂರಾರು ವರ್ಷಗಳಲ್ಲಿ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸಬಹುದು ಎಂದು ಹೇಳಿರಬಹುದು. ಅವರು ರಾಷ್ಟ್ರ ಧ್ವಜವನ್ನು ತೆಗೆಯುತ್ತೇವೆಂದು ಹೇಳಿಲ್ಲ. ಈ ಹೇಳಿಕೆಯನ್ನೇ ಪ್ರಮಾದವೆಂಬಂತೆ ಕಾಂಗ್ರೆಸ್ ನಾಯಕರು ಬಿಂಬಿಸುವುದು ಸರಿಯಲ್ಲ’ ಎಂದರು.
ಹಾಗೇಯೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಸದನದ ಒಳಗೆ ಗೂಂಡಾ ವರ್ತನೆಯನ್ನು ಖಂಡಿಸುತ್ತೇನೆ ಮತ್ತು ಸದನದಲ್ಲಿ ಕಲಾಪ ನಡೆಯಲು ಅಡ್ಡಿಪಡಿಸಿ,ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ನ ಸದಸ್ಯರು ಕರ್ನಾಟಕ ಜನರ ಕ್ಷಮೆ ಯಾಚಿಸಬೇಕು,ಸದನದ ಒಳಗೆ ರಾಷ್ಟ್ರಧ್ವಜ ದುರ್ಬಳಕೆ ಮಾಡಿರುವ ಸದಸ್ಯರ ಮೇಲೆ ಕಾನೂನು ರೀತಿಯ ಕ್ರಮ ತೆಗೆದು ಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಮೊರ್ಚಾದ ಮೈಸೂರು ನಗರ ಅಧ್ಯಕ್ಷರಾದ ಜೋಗಿಮಂಜು ಒತ್ತಾಯಿಸಿದರು.