ನಂದಿನಿ ಮನುಪ್ರಸಾದ್ ನಾಯಕ್
ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪೂರ್ವಭಾವಿಯಾಗಿ ಬೆಂಕಿರಹಿತ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕುಟುಂಬದ ಎಲ್ಲಾ ಸದಸ್ಯರನ್ನು ಬೆಸೆಯುವ ಕೋಣೆ ಅಡುಗೆಮನೆ ಅವಳ ಪ್ರೀತಿಯ ಹೆಗ್ಗುರುತು ಎಂದು ಎಸ್ ಡಿ ಎಂ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿನೋದ ಅಭಿಪ್ರಾಯಪಟ್ಟರು.

ನಗರದ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮುಂಚಿತವಾಗಿ ನಡೆಸಿದ ಬೆಂಕಿರಹಿತ ಅಡುಗೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ 25 ಕ್ಕೂ ಹೆಚ್ಚು ಮಹಿಳೆಯರು ಸುಮಾರು 40 ರೀತಿಯ ವೈವಿದ್ಯಮಯ ಅಡುಗೆ ತಯಾರಿಸಿ ಎಲ್ಲರ ಗಮನ ಸೆಳೆದರು. ಅಲ್ಲಿ ಸೇರಿದ್ದ ಸಂಘದ ಮಹಿಳೆಯರನ್ನುದ್ದೇಶಿಸಿ ಪ್ರಸ್ತುತ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ , ಆರ್ಥಿಕ ಭದ್ರತೆ ಸಿಗುತ್ತಿದೆ ಆದರೂ ಅಡುಗೆ ಮನೆಯಲ್ಲಿ ರುಚಿ ಶುಚಿಯಾದ ತಿಂಡಿ ಹೊಸ ತರದ ಅಡುಗೆಗಳನ್ನು ಮಾಡುತ್ತಾ ಹೆಚ್ಚು ಆರೋಗ್ಯಕರ ತಿಂಡಿಗಳ ಬಗ್ಗೆ ಒಲವು ತೋರುತ್ತಿದ್ದಾಳೆ. ಆದರೂ ಹೊರಗಡೆ ನಮಗೆ ಆರ್ಡರ್ ಮಾಡಿದರೆ ಯಾವ ಕಷ್ಟವೂ ಇಲ್ಲದೆ ಕೆಲವೇ ಕ್ಷಣಗಳಲ್ಲಿ ಮನೆಗೆ ಬರುತ್ತದೆ ಎಂದು ಈಗಿನವರು ಆಲೋಚಿಸುವುದು ಆತಂಕಕಾರಿಯಾದ ವಿಷಯವಾಗಿದೆ, ಮಹಿಳೆಗೆ ಅಡುಗೆ ಮನೆ ಅವಳ ಪ್ರೀತಿಯ ಹೆಗ್ಗುರುತು ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ಬೆಸೆಯುವ ಕೋಣೆ. ಹಾಗಾಗಿ ಹೆಣ್ಣುಮಕ್ಕಳು ಏನೇ ಸಾಧನೆ ಮಾಡಿದರೂ ಅಡುಗೆ ಮನೆಯನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು. ತೀರ್ಪುಗಾರರಾಗಿ ಶ್ರೀ ವಿದ್ವಾನ್ ರಘು ಮತ್ತು ಡಾ.ವಿನೋದ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಅಧ್ಯಕ್ಷರಾದ ಶ್ರೀಮತಿ ಶೋಭ ಜೆ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ರಾಣಿ ಮಹೇಶ್, ಪದಾಧಿಕಾರಿಗಳಾದ ಸುನಂದ, ಯೋಗಾವತಿ, ಸೀತಮ್ಮ, ಶೋಭ ಧನಂಜಯ್, ಅನಿತ, ವಿಜಯಲಕ್ಷ್ಮಿ, ಲಾವಣ್ಯ , ಚಂದ್ರಕಲ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸ್ಪರ್ಧೆಯ ನಂತರ ಸದಸ್ಯರಿಗೆ ವಿವಿಧ ಆಟಗಳನ್ನು ಆಯೋಜಿಸಲಾಗಿತ್ತು. ಇಂದು ವಿಜೇತರಾದವರಿಗೆ ಮಹಿಳಾ ದಿನಾಚರಣೆಯಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು