ಚಳಿಗಾಲದಲ್ಲಿ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ದೇಶಾದ್ಯಂತ ಜಾಗೃತಿ ಅಭಿಯಾನ ಆರಂಭಿಸಿದ ಡಾಬರ್ ಚ್ಯವನ್‌ಪ್ರಾಶ್‌

ನಂದಿನಿ ಮನುಪ್ರಸಾದ್ ನಾಯಕ್

*ಈ ಚಳಿಗಾಲದಲ್ಲಿ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ದೇಶಾದ್ಯಂತ ಜಾಗೃತಿ ಅಭಿಯಾನ ಆರಂಭಿಸಿದ ಡಾಬರ್ ಚ್ಯವನ್‌ಪ್ರಾಶ್‌*

*ಮೈಸೂರು, 31 ಡಿಸೆಂಬರ್ 2025:* ಭಾರತದಲ್ಲಿ ಚಳಿಗಾಲದಲ್ಲಿ ಶೀತ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳಂತಹ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ರೋಗನಿರೋಧಕ ಶಕ್ತಿ ಕಡಿಮೆಯಿರುವುದು ಅದಕ್ಕೆ ಮುಖ್ಯ ಕಾರಣ. ಚ್ಯವನ್‌ಪ್ರಾಶ್ ಸುಮಾರು 3000 ವರ್ಷಗಳಷ್ಟು ಹಳೆಯದಾದ ಮತ್ತು ಪ್ರಸಿದ್ಧವಾದ ಆಯುರ್ವೇದ ಔಷಧಿಯಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೈನಂದಿನ ಸೋಂಕುಗಳ ವಿರುದ್ಧ ರಕ್ಷಣೆ ನೀಡಲು ಸಹಾಯ ಮಾಡುತ್ತದೆ.

ಡಾಬರ್ ಚ್ಯವನ್‌ಪ್ರಾಶ್ ಅನೇಕ ‘ರಸಾಯನ’ ಗಿಡಮೂಲಿಕೆಗಳನ್ನು ಒಳಗೊಂಡಿದ್ದು, ತನ್ನ ರೋಗನಿರೋಧಕ ಶಕ್ತಿಯ ಗುಣಗಳಿಂದ ವಿವಿಧ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಮುಂದಿನ ಪೀಳಿಗೆಯ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಮತ್ತು ದೇಶಾದ್ಯಂತ ಇರುವ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಡಾಬರ್ ಚ್ಯವನ್‌ಪ್ರಾಶ್ ಇಂದು ಬೃಹತ್ ಜಾಗೃತಿ ಅಭಿಯಾನವನ್ನು ಘೋಷಿಸಿದೆ. ಈ ಯೋಜನೆಯ ಅಡಿಯಲ್ಲಿ, ಡಾಬರ್ ಚ್ಯವನ್‌ಪ್ರಾಶ್ ಪ್ರಸಿದ್ಧ ವೈದ್ಯರೊಂದಿಗೆ ಸೇರಿ ರೋಗನಿರೋಧಕ ಶಕ್ತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಿದೆ. ಬದಲಾಗುತ್ತಿರುವ ಹವಾಮಾನ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಬಲವಾದ ರೋಗನಿರೋಧಕ ವ್ಯವಸ್ಥೆಯ ಅಗತ್ಯತೆಯ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು.

ಈ ಅಭಿಯಾನಕ್ಕೆ ಇಂದು ಮೈಸೂರಿನ ಪ್ರಿನ್ಸಿಲಿ ಹೈಯರ್ ಪ್ರೈಮರಿ ಸ್ಕೂಲ್‌ನ 250ಕ್ಕೂ ಹೆಚ್ಚು ಮಕ್ಕಳಿಗೆ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ಚಾಲನೆ ನೀಡಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಡಾಬರ್ ಇಂಡಿಯಾ ಲಿಮಿಟೆಡ್‌ನ ದಿನೇಶ್ ಕುಮಾರ್ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಸ್ವಚ್ಛತೆ ಮತ್ತು ಪೌಷ್ಟಿಕ ಆಹಾರದ ಮೂಲಕ ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿಕೊಡಲಾಯಿತು.
ಈ ಕುರಿತು ಮಾತನಾಡಿದ ಡಾಬರ್ ಇಂಡಿಯಾ ಲಿಮಿಟೆಡ್ ನ ಹೆಲ್ತ್‌ಕೇರ್ ನಿರ್ದೇಶಕರಾದ ಶ್ರೀರಾಮ್ ಪದ್ಮನಾಭನ್ ಅವರು, “ಡಾಬರ್ ಚ್ಯವನ್‌ಪ್ರಾಶ್ ಕಳೆದ 100 ವರ್ಷಗಳಿಂದ ಪ್ರತಿಯೊಬ್ಬ ಭಾರತೀಯನೂ ಬಲವಾದ ರೋಗನಿರೋಧಕ ಶಕ್ತಿ ಪಡೆಯುವಂತೆ ಮಾಡಲು ಶ್ರಮಿಸುತ್ತಿದೆ. ಪ್ರತಿವರ್ಷ ಚಳಿಗೆ ಅನೇಕ ಜೀವಗಳು ಬಲಿಯಾಗುತ್ತಿರುವುದು ಬಹಳ ಕಳವಳಕಾರಿ ಸಂಗತಿಯಾಗಿದೆ. ಈ ಅಭಿಯಾನದ ಮೂಲಕ ನಾವು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ರೋಗನಿರೋಧಕ ಶಕ್ತಿಯ ಮಹತ್ವವನ್ನು ತಿಳಿಸುವುದರ ಜೊತೆಗೆ ಅವರಿಗೆ ಚ್ಯವನ್‌ಪ್ರಾಶ್ ವಿತರಿಸಿ ರಕ್ಷಣೆ ನೀಡಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದರು.

ಡಾ. ಸುಮಿತ್ ಅವರು ಮಾತನಾಡಿ, “ಋತುಮಾನ ಬದಲಾಗುವ ಸಮಯದಲ್ಲಿ ತಾಪಮಾನದ ವ್ಯತ್ಯಾಸದಿಂದಾಗಿ ಕೆಮ್ಮು, ಶೀತ ಮತ್ತು ಜ್ವರ ಕಾಣಿಸಿಕೊಳ್ಳುತ್ತವೆ. ಇಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ” ಎಂದು ಹೇಳಿದರು.

ಈ ಅಭಿಯಾನದ ಅಡಿಯಲ್ಲಿ, ಡಾಬರ್ ಚ್ಯವನ್‌ಪ್ರಾಶ್ ಭಾರತದ 21 ನಗರಗಳ ಪ್ರಮುಖ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ. ಮೈಸೂರು ಸೇರಿದಂತೆ ಹೈದರಾಬಾದ್, ಮುಂಬೈ, ಆಗ್ರಾ, ವಾರಣಾಸಿ, ಕಾನ್ಪುರ, ಭೋಪಾಲ್, ಲಕ್ನೋ, ಉದಯಪುರ, ಜೈಪುರ, ಭುವನೇಶ್ವರ, ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ಇಂದೋರ್, ರಾಯ್‌ಪುರ, ಪುಣೆ, ಔರಂಗಾಬಾದ್, ನಾಗ್ಪುರ, ಗ್ವಾಲಿಯರ್ ಮತ್ತು ಚಂಡೀಗಢಗಳಲ್ಲಿ ಈ ಅಭಿಯಾನ ನಡೆಯಲಿದೆ.

Leave a Reply

Your email address will not be published. Required fields are marked *