ಕಾವೇರಿ ಆಸ್ಪತ್ರೆಯ ವೈದ್ಯರ ಚಿಕಿತ್ಸೆಯಿಂದ ಸ್ಟೇಜ್ 3 ಗೆದ್ದ 65 ವರ್ಷದ ರೋಗಿಯ ಸಾಹಸ

ನಂದಿನಿ ಮೈಸೂರು

ಸ್ಟೇಜ್ 3 ಗೆದ್ದ 65 ವರ್ಷದ ರೋಗಿಯ ಸಾಹಸ

ಮೈಸೂರು: 65 ವರ್ಷದ ರೋಗಿ xyz, 6 ತಿಂಗಳಿನಿಂದ ಹೊಟ್ಟೆ ನೋವು, ತೂಕ ಇಳಿದಿರುವುದು, ಹಸಿವಿನ ಕೊರತೆ ಮತ್ತು ದೈನಂದಿನ ಕೆಲಸಕೈಗೊಳ್ಳಲು ತೊಂದರೆ ಅನುಭವಿಸುತ್ತಿದ್ದ ಕಾರಣ, ಮೈಸೂರಿನ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯ ಯುರೋಲಾಜಿ ಹೊರರೋಗಿಗಳ ವಿಭಾಗಕ್ಕೆ ಭೇಟಿಯಾದರು.

ತಪಾಸಣೆ ವೇಳೆ ಅವರ ಹೊಟ್ಟೆಯ ಭಾಗದಲ್ಲಿ ಗಂಟು, ಶಕ್ತಿ ಹೀನತೆ, ಮತ್ತು ಬಲಗಾಲಿನ ಉಬ್ಬುವಿಕೆ ಪತ್ತೆಯಾಯಿತು.

CECT ತಪಾಸಣೆ ಯಲ್ಲಿ ಅವರ ಬಲಮೂತ್ರಪಿಂಡದಲ್ಲಿ ಕ್ಯಾನ್ಸರ್ ಕೋಶಗಳಿದ್ದು,tumour thrombus ( ರಕ್ತನಾಳ ಗಡ್ಡೆ) ಬಲಮೂತ್ರಪಿಂಡದ ಗೆಡ್ಡೆ ಇಂದ, IVC thrombosis (Inferior Vena Cava) ವರೆಗೆ ವಿಸ್ತರಿಸಿರುವುದಾಗಿ ದೃಢಪಡಿಸಲಾಯಿತು.

ಹೆಚ್ಚಿನ ದೃಶ್ಯ ತಪಾಸಣೆ ನಡೆಸಿದಾಗ ಶರೀರದಲ್ಲಿ ಇತರ ಜಾಗಗಳಿಗೆ ಮೂರನೆಯ ಹಂತದ ಕ್ಯಾನ್ಸರ್ ಹರಡಿಲ್ಲ ಎಂಬುದು ದೃಢವಾಯಿತು.

ECOG 3 ಸ್ಥಿತಿಯಲ್ಲಿ (ಸ್ವತಃ ಶೇ 40% ಕೆಲಸ ಮಾಡಬಹುದಾದ ಸ್ಥಿತಿಯಲ್ಲಿದ್ದು) ಇರುವ ರೋಗಿಗೆ, ಹಿಮೋಗ್ಲೋಬಿನ್ ಕೇವಲ 7 ಮಟ್ಟದಲ್ಲಿ ಇತ್ತು, ಇದನ್ನು ತುರ್ತು ರಕ್ತಪೂರೈಕೆ ಮೂಲಕ ತಕ್ಷಣವಾಗಿ ಶ್ರದ್ಧಿಸಲಾಯಿತು.

ಈ ರೀತಿ ಇರುವ ಬಲಮೂತ್ರಪಿಂಡದ ಕ್ಯಾನ್ಸರ್ಗೆ ತುರ್ತು ಶಸ್ತ್ರಚಿಕಿತ್ಸೆ, ಬಲದ ಮೂತ್ರಪಿಂಡದ ಸಂಪೂರ್ಣ ತೆಗೆದುಹಾಕುವ ರೈಡಿಕಲ್ ನಫ್ರೆಕ್ಟಮಿ ಮತ್ತು IVC thrombectomy ಶಸ್ತ್ರಚಿಕಿತ್ಸೆ ನಡೆಯಬೇಕೆಂದು ತಜ್ಞರು ವಿವರಿಸಿದರು.

ಶಸ್ತ್ರಚಿಕಿತ್ಸೆಯ ಜಟಿಲತೆಯ ಬಗ್ಗೆ ಕುಟುಂಬದವರಿಗೆ ಸಂಪೂರ್ಣ ಮಾಹಿತಿ ನೀಡಿಲಾಗಿದ್ದು, ಅವರ ಒಪ್ಪಿಗೆ ಮೇರೆಗೆ ಶಸ್ತ್ರಚಿಕಿತ್ಸೆ (ರೈಡಿಕಲ್ ನಫ್ರೆಕ್ಟಮಿ ಮತ್ತು IVC thrombectomy) ನಡೆಸಲಾಯಿತು.

ಆಪರೇಷನ್ ಯಶಸ್ವಿಯಾಗಿ ಮುಗಿದ ನಂತರ, ರೋಗಿಯನ್ನು ಆರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇವರು ಈಗ ಮನೆಯಲ್ಲಿದ್ದು, ಅಡ್ಜುವೆಂಟ್ ಥೆರಪಿಯಡಿ ಔಷಧೋಪಚಾರ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *