ಮೈಸೂರು: 10 ಫೆಬ್ರವರಿ 2022
ನಂದಿನಿ ಮೈಸೂರು
ಬೈ ಟು ಲವ್ ಹರಿ ಸಂತೋಷ್ ಅವರ ೫ನೇ ಚಿತ್ರ
ಫೆ. 18ರಂದು ತೆರೆಕಾಣಲಿದೆ ಎಂದು ನಟ ಧನ್ವಿರ್ -ನಟಿ ಶ್ರೀಲೀಲಾ ತಿಳಿಸಿದರು.
ಲವ್ ಎಂದರೆ ಹುಡುಗ-ಹುಡುಗಿಗೆ ಮಾತ್ರ ಸೀಮಿತವಲ್ಲ. ಪ್ರೀತಿ ಅಷ್ಟಕ್ಕೆ ಸೀಮಿತ ಆಗೋದಿಲ್ಲ.
ಬೈ ಟು ಲವ್ ಚಿತ್ರಕ್ಕೆ ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಬಳಿಕ ಮೈಸೂರಿನಲ್ಲಿ ಪ್ರಮೋಷನ್ ಮಾಡುತ್ತಿದ್ದೇವೆ.
ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿ, ಮೈಸೂರಿನ ಮಾಲ್ ಗಳು, ಜನನಿಬಿಡ ಪ್ರದೇಶದಲ್ಲಿ ಪ್ರಮೊಷನ್ ಮಾಡುತ್ತೇವೆ. ಬಳಿಕ ಚಾಮರಾಜನಗರದಲ್ಲಿ ಪ್ರಮೊಷನ್ ಮಾಡಲಿದ್ದೇವೆ.ಚಿತ್ರೀಕರಣ ಬಹುತೇಕ ಬೆಂಗಳೂರಿನಲ್ಲಿ ನಡೆದಿದೆ. 55 ದಿನ ಸೆಟ್ ಹಾಕಿ ಚಿತ್ರಿಕರಿಸಲಾಗಿದೆ. ಉತ್ತಮ ಕಥೆಯಾಗಿದ್ದರಿಂದ ಬಜಾರ್ ಮಾಸ್ ಸಿನಿಮಾದ ಬಳಿಕ ಲವರ್ ಬಾಯ್ ಆಗಿ ನಟಿಸಲು ಒಪ್ಪಿದೆ. ಒಂದೊಳ್ಳೆಯ ಸಂದೇಶ ಈ ಚಿತ್ರದಲ್ಲಿದೆ ಎಂದು ಬೈ ಟು ಲವ್ ಸಿನಿಮಾ ಬಗ್ಗೆ ಮಾಧ್ಯಮದ ಜೊತೆ ಹಂಚಿಕೊಂಡರು.
ನಟಿ ಶ್ರೀಲಿಲಾ ಮಾತನಾಡಿ, ಬೈ ಟು ಲವ್ ಚಿತ್ರದಲ್ಲಿ ನಾನು ಧನ್ವಿರ್ ಜೊತೆ ನಟಿಸಿದ್ದೇನೆ. ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ. ಉತ್ತಮ ಸಂದೇಶವನ್ನೂ ಒಳಗೊಂಡಿದೆ. ಚಿತ್ರದ ಪೋಸ್ಟರ್ ನಲ್ಲಿ ಮದುವೆ ವೇಳೆ ಮಗು ಎತ್ತಿಕೊಂಡಿರುವುದೇ ಚಿತ್ರದ ಸಸ್ಪೆನ್ಸ್.ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಿರಣ್ ಇದ್ದರು.