ಸರಗೂರು:25 ಮಾರ್ಚ್ 2022
ಇಂದು ಸ್ವಾಮಿ ವಿವೇಕಾನಂದ ಸಂಸ್ಥೆ ಹಾಗೂ ಎಲ್ ಆಂಡ್ ಟಿ ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ ಗಿರಿಜನರಿಗೆ ಬೋಟ್ ಮತ್ತು ಸೇಫ್ಟೀ ಜಾಕೇಟ್ ಗಳನ್ನು ವಿತರಿಸಲಾಯಿತು.
![](https://bharathnewstv.in/wp-content/uploads/2025/01/OPENING-TODAY.jpg)
ಮೀನುಗಾರಿಕೆ ತರಬೇತಿ ಪಡೆದ ಒಟ್ಟು 30 ಫಲಾನುಭವಿಗಳಿಗೆ 11 ಸೇಟ್ ಬೋಟ್, ನೆಟ್ ಪೇಡೆಲ್, ಸೇಫ್ಟಿ ಜಾಕೇಟ್ ಗಳನ್ನು ವಿತರಿಸಲಾಯಿತು.
ತಾಲೂಕಿನ ಪ್ರಮುಖ ಎಂ.ಜಿ. ಹಳ್ಳಿ, ಹುಣಸೆಕುಪ್ಪೆ, ದಮ್ಮನಕಟ್ಟೆಯ ಹಾಡಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ನೀಡಲಾಯಿತು.
ಬಳಿಕ ಗ್ರಾಮ ಪಂಚಾಯ್ತಿ ಸದಸ್ಯ ಸುಬ್ರಹ್ಮಣ್ಯ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದ ಸಂಸ್ಥೆಯು ಗಿರಿಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಏಕೈಕ ಸಂಸ್ಥೆಯಾಗಿದೆ.
ಸರ್ಕಾರ ಮಾಡಬೇಕಾದಂತಹ ಕಾರ್ಯಗಳನ್ನು ವಿವೇಕಾನಂದ ಸಂಸ್ಥೆಯು ಮಾಡುತ್ತಿರುವುದು ತಾಲೂಕಿನ ಜನತೆಗೆ ಸಂತಸ ತಂದಿದೆ.
ಸತತ 38 ವರ್ಷಗಳಿಂದಲೂ ತಾಲೂಕಿನ ಗಿರಿಜನರ ಅಭಿವೃದ್ಧಿ ಒಳಗೊಂಡಂತೆ, ಗಿರಿಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಬಹಳ ವಿಶೇಷ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದ ಸಂಸ್ಥೆಯಿಂದ ನಡೆಯುವ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಸ್ವಾಮಿ ವಿವೇಕಾನಂದ ಸಂಸ್ಥೆಯು ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಆಶಿಸಿದರು.
ಇದೇ ವೇಳೆ ಮೀನುಗಾರಿಕೆ ಇಲಾಖೆಯ ಸಹಾಯಕ ಪಾಲಕರಾದ ಮಂಜು, ಗ್ರಾ.ಪಂ. ಸದಸ್ಯ ನಂರಾಜ್, ಸ್ವಾಮಿ ವಿವೇಕಾನಂದ ಸಂಸ್ಥೆಯ ಸಿಬ್ಬಂದಿಗಳಾದ ರಾಮ್ ಪ್ರಸಾದ್, ಪಿ.ಡಿ.ನಾಯಕ್, ಸುರೇಶ್, ನಾಗೇಶ್, ಹಾಡಿಯ ಮುಖಂಡರಾದ ಜಗದೀಶ್, ಮಾದೇವ ಹಾಗೂ ಇನ್ನಿತರರು ಇದ್ದರು.
ಸಂಜಯ್ ಕೆ.ಬೆಳತೂರು ಜೊತೆ ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು