ನಂದಿನಿ ಮೈಸೂರು
ಅನ್ನದಾತರ ವಿಚಾರದಲ್ಲಿ ಸರ್ಕಾರ ಮಮತೆಯ ತಾಯಿಯಂತೆ ವರ್ತಿಸಲಿ,
ಮಲತಾಯಿ ಧೋರಣೆ ನಿಲ್ಲಿಸಲಿದೇಶದ ಪ್ರಜೆಗಳಿಗೆ ಸ್ವಾತಂತ್ರೋತ್ಸವದಂತೆ
ಮಣ್ಣಿನ ಮಕ್ಕಳಾದ ರೈತರಿಗೆ ರೈತೋತ್ಸವ ದಿನ ಪ್ರಾರಂಭಿಸಲಿಭೂಮಿಪುತ್ರ ಸಿ.ಚಂದನ್ ಗೌಡ ಒತ್ತಾಯ
ಮೈಸೂರು:- ಸಾಮಾಜಿಕ,ಶೈಕ್ಷಣಿಕ,ವೈದ್ಯಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿನ ಮಹನೀಯರ ಜಯಂತಿ ಆಚರಣೆಯಂತೆ, ಜಗತ್ತಿನ ಮಂದಿಯ ಹಸಿದ ತುತ್ತಿನ ಚೀಲ ತುಂಬಿಸುವ ನಮ್ಮೆಲ್ಲರ ಅನ್ನದಾತನ ಜಯಂತಿಯನ್ನು ರೈತೋತ್ಸವದ ಶೀರ್ಷಿಕೆಯಡಿ ನಿತ್ಯೋತ್ಸವದ ಆಚರಣೆಗೆ ಸರ್ಕಾರ ಮುಂದಾಗಬೇಕೆಂದು ಕರ್ನಾಟಕ ರೈತ ಕಲ್ಯಾಣ ಸಂಘದ ಸಂಸ್ಥಾಪಕ,ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಆಶಿಸಿದ್ದಾರೆ.
ಶನಿವಾರ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರೈತ ದಿನಾಚರಣೆಯಂದು ಸರ್ಕಾರಿ ರಜೆ ಘೋಷಿಸಿ, ಪ್ರತಿ ತಾಲೂಕು,ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರ ಸ್ಮರಿಸುವ ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರ ಮುಂದಾಗಬೇಕೆಂದು ಕೋರಿದರು.
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸುವ ಇತಿಹಾಸ ಪುರುಷರ, ದಾರ್ಶನಿಕರ, ಮಹಾತ್ಮರ ಜಯಂತಿಗಳಂತೆ ಹಾಗೂ ಕಾರ್ಮಿಕರ ದಿನಾಚರಣೆಯಂತೆ ರೈತರ ಮಹತ್ವವನ್ನು ಕೂಡ ಅರಿತು ಸರ್ಕಾರ ಕೂಡಲೇ ಈ ಅಮೃತ ಭೂಮಿಯ ರೈತರ ಬದುಕಿನಲ್ಲಿಯೂ ರೈತ್ಯೋತ್ಸವದ ಮುಖಾಂತರ ನಿತ್ಯೋತ್ಸವ ಆಗಲಿ ಎಂಬ ಮಹತ್ವಕಾಂಕ್ಷೆಯ ನಿರ್ಧಾರವನ್ನು ಪರಿಗಣಿಸಿ ರೈತರ ಬದುಕಿನಲ್ಲಿ ಒಂದು ಹೊಸ ಬೆಳಕನ್ನು ಸ್ವತಂತ್ರ ಭಾರತದ 78ನೇಯ ವರ್ಷದಲ್ಲಾದರೂ ಕೂಡ ಜಾರಿಗೆ ತರಲಿ ಎಂದು ಮನವಿ ಮಾಡಿದರು.
ರೈತರ ತ್ಯಾಗ, ಶ್ರಮ ಮತ್ತು ಸಮರ್ಪಣೆಯನ್ನು ಗೌರವಿಸಿ, ಈ ದೇಶದ ಆತ್ಮ ರೈತ. ಆತ್ಮವಿಲ್ಲದೆ ಬದುಕು ಸಾಧ್ಯವೇ ಇಲ್ಲ ಎಂಬ ಸತ್ಯವನ್ನ ಅರಿತು ಕೇವಲ ಧಾರ್ಮಿಕ ಸಾಂಸ್ಕೃತಿಕ ಆಚರಣೆಗಳಿಗೆ ಸೀಮಿತವಾಗದಂತೆ ಈ ಮಣ್ಣಿನ ಮಹತ್ವವನ್ನು ಎತ್ತಿ ಹಿಡಿಯುವಂತಹ, ಈ ಮಣ್ಣನ್ನ ಶ್ರೀಮಂತ ಗೊಳಿಸುವ ಕಲೆ ಮತ್ತು ಸಕಲ ಜೀವರಾಶಿಗಳ ಹೊಟ್ಟೆಯನ್ನು ತುಂಬಿಸುವಂತಹ ಅನ್ನದಾತನ ಮಹತ್ವವನ್ನ ಜಗತ್ತಿಗೆ ತಿಳಿಸಿ ಹೇಳುವಂತಹ ವ್ಯವಸ್ಥೆಯಲ್ಲಿ
ರೈತರನ್ನು ಸ್ಮರಿಸುವ ಹಾಗೂ ರಾಜ್ಯದ ಎಲ್ಲಾ ಶೈಕ್ಷಣಿಕ ವ್ಯವಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ- ಕಾಲೇಜುಗಳ ಪಠ್ಯಪುಸ್ತಕಗಳಲ್ಲೂ ಕೂಡ ರೈತರ ಮತ್ತು ಕೃಷಿ ಮಹತ್ವ ಸಾರುವ ವಿಚಾರ ಧಾರೆಗಳನ್ನು ಪ್ರಸ್ತುತಪಡಿಸಿ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡುವ ಕ್ಷೇತ್ರವನ್ನಾಗಿ ಪರಿವರ್ತನೆ ಮಾಡಬೇಕೆಂಬ ಮಹತ್ವಕಾಂಕ್ಷೆಯನ್ನ ಸರ್ಕಾರ ಪರಿಗಣಿಸಬೇಕೆಂದು ರೈತ ಕಲ್ಯಾಣ ಅಗ್ರಹಿಸುತ್ತದೆ ಎಂದರು.
ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬ ಅರ್ಥಪೂರ್ಣವಾದ ಸಂದೇಶವನ್ನು ಇಂದಿನ ಮಕ್ಕಳು ಸೇರಿದಂತೆ ಜಗತ್ತಿನ ಮನುಕುಲಕ್ಕೆ ತಿಳಿಸಿ ಹೇಳಿಸುವಂತಹ ವ್ಯವಸ್ಥೆ ಜಾರಿಗೆ ಬರಲಿ ಎಂದು ಇದೇ ವೇಳೆ ಸರ್ಕಾರವನ್ನು ಚಂದನ್ ಗೌಡ ಒತ್ತಾಯಿಸಿದರು.
23ಕ್ಲೆ ರೈತರ ಹಬ್ಬ
ವಿಶ್ವ ರೈತ ದಿನದ ಅಂಗವಾಗಿ ಕರ್ನಾಟಕ ರೈತ ಕಲ್ಯಾಣ ವತಿಯಿಂದ ಡಿಸೆಂಬರ್ 23 ರ ಸೋಮವಾರದಂದು ವನಸಿರಿ ನಾಡು ಎಚ್.ಡಿ.ಕೋಟೆ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ‘ರೈತ ಹಬ್ಬ’ ಕಾರ್ಯಕ್ರಮ ನಡೆಯಲಿದೆ ಎಂದು ಚಂದನ್ ಗೌಡ ಅವರು ಇದೇ ವೇಳೆ ತಿಳಿಸಿದರು.
ಶಾಸಕ ಅನಿಲ್ ಚಿಕ್ಕಮಾದು, ಸಂಸದ ಸುನೀಲ್ ಬೋಸ್, ಜಿಲ್ಲಾಧಿಕಾರಿ ಲಕ್ಚ್ಮಿಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರುಗಳು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರುತ್ತಾರೆ ಎಂದ ಅವರು, ಕಾರ್ಯಕ್ರಮಕ್ಕೂ ಮುನ್ನ ಅಂದು ಬೆಳಗ್ಗೆ 10 ಗಂಟೆಗೆ
ಕೃಷಿ ಸಂಸ್ಕೃತಿ, ರೈತ ಪರಂಪರೆಯನ್ನು ಜಗತ್ತಿಗೆ ಸಾರುವ ಜಾನಪದ ಕಲಾತಂಡಗಳೊಂದಿಗೆ ವಿಶೇಷವಾಗಿ ಚಿಕ್ಕರಸಿನಕೆರೆ ಬಸವಣ್ಣನ ಮೆರವಣಿಗೆ ಸಹ ನಡೆಯಲಿದೆ ಎಂದು ವಿವರಿಸಿದರು.
ಸಾಂಪ್ರದಾಯಿಕ ಕೃಷಿಯಲ್ಲಿ ಸಾಧನೆಗೈದು ಜೈವಿಕ ಕೃಷಿಗೆ ಒತ್ತು ನೀಡಿರುವ ಹಲವು ರೈತ ಸಾಧಕರಿಗೆ ಇದೇ ವೇಳೆ ಗೌರವಿಸಿ ಅಭಿನಂದಿಸಲಾಗುವು ಎಂದರು.