ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಬಾರಿ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಪ್ರಕ್ರಿಯೆ ಯಶಸ್ವಿ

ನಂದಿನಿ ಮೈಸೂರು 

ಮೈಸೂರಿನ ಬೋಗಾದಿಯಲ್ಲಿರುವ ಪ್ರತಿಷ್ಠಿತ ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಬಾರಿ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿಸಲಾಗಿದೆ.

ಬೆಂಗಳೂರನ್ನು ಹೊರತುಪಡಿಸಿ ಇಡೀ ಕರ್ನಾಟಕದಲ್ಲಿ ಮೈಸೂರಿನ ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ಮೈಟ್ರಾಕ್ಲಿಪ್ ವಾಲ್ವ್ ರಿಪೇರಿ ಕಾರ್ಯ ವಿಧಾನ ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಅವಾಂಟ್ ಬಿ ಕೆ ಜಿ ಆಸ್ಪತ್ರೆಯ ಮುಖ್ಯ ಇಂಟರ್ವೇನ್ಷನಲ್ ಕಾರ್ಡಿಯಾಲಜಿಸ್ಟ್ ಆಗಿರುವ ಡಾ..ರಾಜಗೋಪಾಲ್ ಜಂಬುನಾಥನ್.

ತಾಂಜನಿಯಾ ಮೂಲದ 59 ವರ್ಷದ ವ್ಯಕ್ತಿಗೆ ಮೊದಲ ಮೈಟ್ರಾಕ್ಲಿಪ್ ವಾಲ್ವ್ ಅಳವಡಿಸುವಲ್ಲಿ ಯಶಸ್ವಿಯಾಗಿರುವ ರಾಜಗೋಪಾಲ್ ನೇತೃತ್ವದ ವೈದ್ಯರ ತಂಡ…

ಈ ಮೂಲಕ ಮಹತ್ವದ ಸಾಧನೆಗೈದಿರುವ ಅವಾಂಟ್ ಬಿ ಕೆ ಜಿ ಆಸ್ಪತ್ರೆ ಈ ಕುರಿತು ಡಾ ಬಾಲಕೃಷ್ಣಗೌಡ
ಡಾ ಜೆ ರಾಜಗೋಪಾಲನ್. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿನೀಡಿದರು.

ಮೈಟ್ರಕ್ರಿಪ್ ರಿಗರ್ಟಿಸ್ಟೇಷನ್ ಮೈಟ್ರಾಲ್ ಕವಾಟದ ಸೋರಿಕೆಯಿಂದ ನಿರೂಪಿಸಲ್ಪಟ್ಟ ಸ್ಥಿತಿಯು ಹೃದಯ ವೈಫಲ್ಯದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಸಾಂಪ್ರದಾಯಿಕವಾಗಿ ಈ ಸ್ಥಿತಿಯನ್ನು ತೆರೆದ ಹೃದಯ ಶಸ್ತ್ರಚಿಕಿಸಿಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ ಇದು ಗಮನಹರ ಅಪಾಯಗಳನ್ನು ಉಂಟುಮಾಡುತ್ತವೆ..

ವಿಶೇಷವಾಗಿ ದುರ್ಬಲ ಹೃದಯ ಹೊಂದಿರುವ ರೋಗಿಗಳಿಗೆ ಮೈಟ್ರಕ್ ಕ್ಲಿಪ್ ತೊಡೆ ಸಂದು ಸಣ್ಣ ಪಂಚರ್ ಮೂಲಕ ಕವಾಟವನ್ನು ದುರಸಿ ಮಾಡುವ ಮೂಲಕ ಕನಿಷ್ಠ ಆಕ್ರಮಣ ಕರಿ ಪರಿಯಾಯವನ್ನು ನೀಡುತ್ತದೆ ಚೇತರಿಕೆ ಸಮಯ ಮತ್ತು ತುಡುಕುಗಳ ಅಪಾಯವನ್ನು ಗಮನಹವಾಗಿ ಕಡಿಮೆ ಮಾಡುತ್ತದೆ..
ಅ ವಾಂಟ್ ಬಿಕೆಜಿ ಆಸ್ಪತ್ರೆಯೂ ಕರ್ನಾಟಕದಲ್ಲಿ ಕನಿಷ್ಠ ಆಕ್ರಮಣಕಾರಿ ವಿಧಾನವನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆ ಇಲ್ಲದೆ ಈ ಚಿಕಿತ್ಸೆಯನ್ನು ನಿರ್ವಹಿಸಲು ತಂತ್ರಜ್ಞಾನ ಮತ್ತು ಪರಿಣಿತಿಯೊಂದಿಗೆ ಖ್ಯಾತ ವೈದ್ಯರ ತಂಡವನ್ನು ಹೊಂದಿರುವ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಒಂದಾಗಿದೆ..

ನಂತರ ಮಾತನಾಡಿದ…
ಡಾಕ್ಟರ್ ರಾಜಗೋಪಾಲ್ ಜಂಬುನಾಥನ್..
ಮೈಟ್ರಾಲ್ ವಾಲ್ ರಿಗರ್ಗಿ ಟೇಷನ್ ನಿಂದ ಮತ್ತು ಹೃದಯ ಘಾತದಿಂದ ಬಳಲುತ್ತಿರುವ ರೋಗಿಗಳಿಗೆ ಈ ಅದ್ಭುತ ಕಾರ್ಯ ವಿಧಾನವು ಕ್ರಾಂತಿಕಾರಿ ಸಾಧನವಾಗಿದೆ ಮೈಟ್ರ ಕ್ಲಿಪ್ ತೆರೆದ ಹೃದಯ ಶಸ್ತ್ರಚಿಕಿಸೆಯ ಅಗತ್ಯವಿಲ್ಲದೆ ಕವಾಟದ ಸೋರಿಕೆಯನ್ನು ಪರಿಣಾಮಕರವಾಗಿ ಮುಚ್ಚಲ್ಲೂ ಸಾಧ್ಯವಾಗುತ್ತದೆ…
ಮತ್ತು ರೋಗಿಯ ಫಲಿತಾಂಶಗಳು ಮತ್ತು ಚೇತರಿಕೆ ಸಮಯವನ್ನು ಹೆಚ್ಚಿನ ಮಟ್ಟಿಗೆ ಸುಧಾರಿಸುತ್ತದೆ ಈ ಸುಧಾರಿತ ತಂತ್ರಜ್ಞಾನದಲ್ಲಿ ಬೆಂಗಳೂರು ಮತ್ತು ಚೆನ್ನೈ ಹೊರತುಪಡಿಸಿ ಮೈಸೂರಿನಲ್ಲಿ ಮೊದಲಿಗರಾಗಿರುವುದಕ್ಕೆ ನಾವು ಎಮ್ಮೆ ಪಡುತ್ತೇವೆ ಎಂದರು..

ಈ ಪತ್ರಿಕೆ ಗೋಷ್ಟಿಯಲ್ಲಿ ಡಾ. ಲೋಕೇಶ್ , ಸಿಓ ಎ ವಿ ರಾಮಪ್ರಸಾದ್, ಹಾಗೂ ಆಸ್ಪತ್ರೆಯ ಸಂಪರ್ಕ ಅಧಿಕಾರಿ ನೀಲು ಶರ್ಮಾ ಭಾಗವಹಿಸಿದ್ದರು…

Leave a Reply

Your email address will not be published. Required fields are marked *