*ಮುಂಬರುವ ಈ ಲೋಕಸಭಾ ಚುನಾವಣೆಯು,ಯುವಜನರ ಉಜ್ವಲ ಭವಿಷ್ಯ ಮತ್ತು ಭವ್ಯ ಭಾರತದ ನಿರ್ಮಾಣಕ್ಕಾಗಿ:ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ*
ಮಹಾರಾಷ್ಟ್ರ: ಮಹಾರಾಷ್ಟ್ರದ ಜಲಗಾಂವ್ನಲ್ಲಿ ನಡೆದ ಯುವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ, ಮುಂಬರುವ ಲೋಕಸಭೆ ಚುನಾವಣೆಯು ಯುವಜನರ ಉಜ್ವಲ ಭವಿಷ್ಯಕ್ಕಾಗಿ ಮತ್ತು ಭವ್ಯ ಭಾರತದ ನಿರ್ಮಾಣಕ್ಕಾಗಿ ಎಂದು ಸ್ಪಷ್ಟಪಡಿಸಿದರು. ಬಿಜೆಪಿಗೆ ಮತ ಹಾಕುವುದೆಂದರೆ ಯುವಕರ ಉಜ್ವಲ ಭವಿಷ್ಯಕ್ಕಾಗಿ, ಭವ್ಯ ಭಾರತದ ನಿರ್ಮಾಣಕ್ಕಾಗಿ ಮತ್ತು ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವುದಕ್ಕಾಗಿ ಮತ ಹಾಕಿದಂತೆ ಎಂದು ಭಾರತೀಯ ಜನತಾ ಪಕ್ಷದ ವರಿಷ್ಠ ನಾಯಕ ಶಾ ಹೇಳಿದರು.
ನಾವು ಸೂಕ್ಷ್ಮವಾಗಿ ಗಮನಿಸಿದರೆ, ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರವು ಯುವಕರಿಗಾಗಿ ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ. ಬಾಹ್ಯಾಕಾಶದಿಂದ ಹಿಡಿದು ಸೆಮಿಕಂಡಕ್ಟರ್ಗಳವರೆಗೆ, ಡಿಜಿಟಲ್ನಿಂದ ಹಿಡಿದು ಡ್ರೋನ್ಗಳವರೆಗೆ, AI ನಿಂದ ಲಸಿಕೆಗಳವರೆಗೆ ಮತ್ತು 5G ಇಂದ ಫಿನ್ಟೆಕ್ವರೆಗೆ ಅಭೂತಪೂರ್ವ ಕಾರ್ಯಗಳನ್ನು ಕೈಗೊಂಡಿದೆ. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನು ನಿರ್ಮಿಸುವುದು, 2035 ರ ವೇಳೆಗೆ ಬಾಹ್ಯಾಕಾಶ ನಿಲ್ದಾಣಗಳನ್ನು ಸ್ಥಾಪಿಸುವುದು, 2036 ರಲ್ಲಿ ಒಲಿಂಪಿಕ್ಸ್ ಆಯೋಜಿಸುವುದು ಮತ್ತು 2040 ರ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಚಂದ್ರನಿಗೆ ಕಳುಹಿಸುವುದು, ಇವೆಲ್ಲಾ ಪೂರ್ಣಗೊಳ್ಳಬೇಕಿದೆ, ಕಾರಣ ಇವು ‘ಮೋದಿ ಗ್ಯಾರಂಟಿ’ಗಳಾಗಿವೆ.
2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಚುನಾವಣಾ ಚಟುವಟಿಕೆಗಳೂ ಹೆಚ್ಚುತ್ತಿವೆ. ಮೋದಿಯವರ ನಾಯಕತ್ವ ಮತ್ತು ಬಿಜೆಪಿ ಗೆಲುವಿನ ಸಂದೇಶವನ್ನು ಮತ್ತೊಮ್ಮೆ ಸಾರಲು ಶಾ ಸಜ್ಜಾಗಿದ್ದಾರೆ. ಭಾರತದ ರಾಜಕೀಯ ಚಾಣಕ್ಯ ಶಾ ಚುನಾವಣೆಗೆ ತಯಾರಿ ನಡೆಸಿದರೆ, ವಿರೋಧ ಪಕ್ಷದವರೂ ಅವರ ಅಭಿಮಾನಿಗಳಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ನಂತರ, ಚುನಾವಣಾ ರ್ಯಾಲಿಗಳಿಗೆ ಲಕ್ಷಾಂತರ ಜನರನ್ನು ಆಕರ್ಷಿಸುವ ಏಕೈಕ ನಾಯಕನೆಂದರೆ ಅದು ಅಮಿತ್ ಶಾ. ಕಳೆದ 10 ವರ್ಷಗಳಲ್ಲಿ, ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ದೇಶವು ಅಭೂತಪೂರ್ವ ಪ್ರಗತಿ ಮತ್ತು ಸಮೃದ್ಧಿಯಡೆಗೆ ಪ್ರಯಾಣವನ್ನು ಮಾಡಿದೆ.
ಭಾರತಕ್ಕೆ ಹೊಸ ಗುರುತನ್ನು ನೀಡಿದ ಮೋದಿ-ಶಾ ಜೋಡಿಯ ವಿರುದ್ಧ ‘ಅಹಂಕಾರದ ಘಟಬಂಧನ’ದ ನಾಟಕಗಳಿಗೆ ಜಗತ್ತು ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವ ಇಲ್ಲದ ಒಕ್ಕೂಟ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಸಾಧ್ಯವೇ ಇಲ್ಲ. ಈ ಮೈತ್ರಿಯ ಏಕೈಕ ಗುರಿಯೆಂದರೆ ಸೋನಿಯಾ ಗಾಂಧಿಯವರು ತಮ್ಮ ಮಗ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು, ಶರದ್ ಪವಾರ್ ಅವರು ತಮ್ಮ ಮಗಳನ್ನು ಮುಖ್ಯಮಂತ್ರಿ ಮಾಡುವುದು, ಉದ್ಧವ್ ಠಾಕ್ರೆ ತಮ್ಮ ಮಗ ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿ ಮಾಡುವುದು, ಮಮತಾ ಬ್ಯಾನರ್ಜಿ ಅವರ ಸೋದರಳಿಯರನ್ನು ಮುಖ್ಯಮಂತ್ರಿ ಮಾಡುವುದು ಮತ್ತು ಸ್ಟಾಲಿನ್ ಅವರು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡುವುದಾಗಿದೆ. ತಮ್ಮ ಕುಟುಂಬವನ್ನು ಹೊರತು ಪಡಿಸಿ ದೇಶದ ಜನರಿಗೆ ಏನನ್ನೂ ಉಳಿಸಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಈ ಸನ್ನಿವೇಶದಲ್ಲಿ ಯುವಕರ ಭವಿಷ್ಯ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣಕ್ಕಾಗಿ ನರೇಂದ್ರ ಮೋದಿಯೊಬ್ಬರೇ ಆಯ್ಕೆಯಾಗಿದ್ದಾರೆ.
ಸೋನಿಯಾ-ಮನಮೋಹನ್ ಸರ್ಕಾರದ ಅವಧಿಯಲ್ಲಿ ಯಾರೂ ಬೇಕಾದರೂ ಪಾಕಿಸ್ತಾನದಿಂದ ಒಳನುಸುಳಿ ಭಯೋತ್ಪಾದನೆ ಕೃತ್ಯಗಳನ್ನು ಎಸಗಿದ್ದನ್ನು ಜನರು ನೋಡಿದ್ದಾರೆ. ಆದರೆ, ಮೋದಿ ಪ್ರಧಾನಿಯಾದಾಗ ಪಾಕಿಸ್ತಾನಕ್ಕೆ ಕೇವಲ10 ದಿನಗಳಲ್ಲಿ ತಕ್ಕ ಉತ್ತರ ನೀಡಿದರು.
ಕಳೆದ 10 ವರ್ಷಗಳಲ್ಲಿ ಮೋದಿ-ಶಾ ಜೋಡಿ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಲು 370 ನೇ ವಿಧಿಯನ್ನು ತೆಗೆದುಹಾಕುವುದು ಮಾತ್ರವಲ್ಲದೆ, ತ್ರಿವಳಿ ತಲಾಖ್ಅನ್ನು ರದ್ದುಗೊಳಿಸಿ, ಮಹಿಳಾ ಶಕ್ತಿಯನ್ನು ಗೌರವಿಸುತ್ತಾ, ರಾಜ್ಯ ಮತ್ತು ರಾಷ್ಟ್ರೀಯ ಅಸೆಂಬ್ಲಿಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಒದಗಿಸಿದೆ. ಮೋದಿಯವರು ಚಂದ್ರನ ಮೇಲೆ ಚಂದ್ರಯಾನ ಮಿಷಿನ್ಗಳನ್ನು ಉಡಾವಣೆ ಮಾಡುತ್ತಿದ್ದರೆ, ಸೋನಿಯಾಯವರು 20ನೇ ಬಾರಿಗೆ ರಾಹುಲ್ನನ್ನು ಉಡಾವಣೆ ಮಾಡುತ್ತಿದ್ದರೂ, ಪ್ರತಿ ಬಾರಿಯೂ ರಾಹುಲ್ ವಿಫಲರಾಗುತ್ತಿದ್ದಾರೆ.
ಅಯೋಧ್ಯೆಯ ರಾಮಮಂದಿರದಿಂದ ಕಾಶಿಯ ವಿಶ್ವನಾಥ ಕಾರಿಡಾರ್ವರೆಗೆ, ‘ನಲ್ ಸೇ ಜಲ್’ (ಎಲ್ಲರಿಗೂ ನೀರು)ಯೋಜನೆ, ಉಜ್ವಲ ಅನಿಲ ಯೋಜನೆ, ರೈತರಿಗೆ ಉಚಿತ ಪಡಿತರ, ವೃದ್ಧಾಪ್ಯ ಪಿಂಚಣಿ ಯೋಜನೆ, ‘ಒಂದು ಶ್ರೇಣಿ, ಒಂದು ಪಿಂಚಣಿ,’ ಕೋವಿಡ್ ಲಸಿಕೆ ಮತ್ತು ಹಲವಾರು ಜನ ಕಲ್ಯಾಣ ಉಪಕ್ರಮಗಳು, 2024 ರಲ್ಲಿ ಮೋದಿಯವರ ನಾಯಕತ್ವದಲ್ಲಿ ದೇಶಭಕ್ತ ಭಾರತೀಯ ಜನತಾ ಪಕ್ಷ ನಿಶ್ಚಿತವಾಗಿ ಗೆಲುವು ಸಾಧಿಸಲಿದೆ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ.