ನಂದಿನಿ ಮೈಸೂರು
ಡೇರಿಂಗ್ ಸ್ಟಾರ್ ಎಸ್ ಜಯಪ್ರಕಾಶ್ (ಜೆಪಿ) ನಾಯಕರಾಗಿ ನಟಿಸಿರೋ ಬಹು ನಿರೀಕ್ಷಿತ ಚಿತ್ರ ಭಗೀರಥ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರದಶನ ಕಾಣ್ತಿದೆ. ಫೆ. 7 ರಂದು ತೆರೆಕಂಡ ಭಗೀರಥ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರೋ ಹಿನ್ನಲೆ ಇಂದು ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಭಾ ಸಿನಿಮಾ ಮಂದಿರಕ್ಕೆ ಭಗೀರಥ ಚಿತ್ರತಂಡ ಭೇಟಿ ನೀಡಿದೆ. ನಟ ಎಸ್. ಜಯಪ್ರಕಾಶ್ (ಜೆಪಿ), ಚಿತ್ರ ನಟಿಯರು ಆಗಮಿಸಿಸುತ್ತಿದ್ದಂತೆ, ಪ್ರಭಾ ಥಿಯೇಟರ್ ಮುಂಭಾಗ ಪಟಾಕಿಸಿಡಿಸಿ, ಹೂಮಳೆ ಗೈದು ಅಭಿಮಾನಿಗಳು ನೆಚ್ಚಿನ ನಟನನ್ನು ಭರಮಾಡಿಕೊಂಡ್ರು. ಇದೇ ವೇಳೆ ಮಾತನಾಡಿದ ನಟ ಎಸ್.ಜಯಪ್ರಕಾಶ್( ಜೆಪಿ) ಕನ್ನಡ ಸಿನಿಮಾವನ್ನ ಪ್ರೇಕ್ಷಕರು ಥಿಯೇಟರ್ ಗೆ ಬಂದು ನೋಡಬೇಕು. ಇದು ನನ್ನ ಎರಡನೇ ಸಿನಿಮಾ ಸಿನಿಮಾದಲ್ಲಿ ಉತ್ತಮವಾಗ ಸಂದೇಶ ಇದ್ದು, ರಾಜ್ಯಾದ್ಯಂತ ಸಖತ್ ರೆಸ್ಪಾನ್ಸ್ ಸಿಕ್ಕಿದೆ ಎಂದ್ರು.
ಎಸ್ ಜಯಪ್ರಕಾಶ್ (ಜೆಪಿ) ನಟ.
ಚೇತನ್ ಎಸ್ ರಮೇಶ್ ,ನಿರ್ಮಾಪಕ.