ಮೈಸೂರು:7 ಜನವರಿ 2022
ನಂದಿನಿ
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಆಗುತ್ತಿರುವ ಹಿನ್ನೆಲೆ ಯಲ್ಲಿ ಬಾವಲಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಕೋರೋನ ವೈರಸ್ ಬಗ್ಗೆ ಪರಿಶೀಲಿಸಿದರು ಮತ್ತು ಮೇಲ್ವಿಚಾರಣೆ ನಡೆಸಲಾಯಿತು.
ಕೇರಳ ಮತ್ತು ಕರ್ನಾಟಕ ಗಡಿಭಾಗವಾದ ಬಾವಲಿ ಚೆಕ್ ಪೋಸ್ಟ್ ಗೆ ತಾಲೂಕು ಆರೋಗ್ಯಾಧಿಕಾರಿ ಗಳಾದ ಡಾ”ಟಿ. ರವಿಕುಮಾರ್ ರವರು ಭೇಟಿ ನೀಡಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು
ಕೋವಿಡ್ ವೈರಸ್ ಮತ್ತು ಒಮೀಕ್ರೇನ್ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದೇವೆ ಮತ್ತು 72 ಗಂಟೆಗಳಲ್ಲಿ ಕೋವಿಡ್ ಟೆಸ್ಟ್ ಆಗಿ ನೆಗೆಟಿವ್ ರಿಪೋರ್ಟ್ ಇರುವವರನ್ನು Q R ಬಾರ್ ಕೋಡಿಂಗ್ ನ್ನು ಪರಿಶೀಲನೆ ನಡೆಸುತ್ತಿದ್ದೇವೆ ಹಾಗು ಬೆಳ್ಳಗೆ 6 ಗಂಟೆ ಯಿಂದ ಸಂಜೆ 6 ತನಕ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದೇವೆ ಮತ್ತು ವಾಹನದಲ್ಲಿ ಓಡಾಡುವ ಎಲ್ಲ ಜನರುಗಳ ಹೆಸರುಗಳನ್ನು ನೊಂದಣಿ ಮಾಡುತ್ತಿ ದೇವೆ . ಹಾಗು ಬಿಗಿ ಬಂದು ಬಸ್ತೋ ಮಾಡಲಾಗಿದೆ ಮತ್ತು ವಾರದ ಅಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಇರುವುದರಿಂದ ಜನರ ಮತ್ತು ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗು ಅವಶ್ಯಕತೆ ಇದ್ದಲ್ಲಿ ಮಾತ್ರ ಗೂಡ್ಸ್ ವಾಹನ , ತುತ್ತು ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಆದುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.