ಮೈಸೂರಿನಲ್ಲಿ ಡಿ. 28 ಹಾಗೂ 29 ಎರಡು ದಿನ ರಾಷ್ಟ್ರೀಯ ಕಾರ್ಯಾಗಾರ:ಪ್ರೋ.ಸಿ ಬಸವರಾಜು

ನಂದಿನಿ ಮೈಸೂರು

ಮೈಸೂರಿನಲ್ಲಿ ಡಿಸೆಂಬರ್ 28 ಹಾಗೂ 29 ಎರಡು ದಿನದ ರಾಷ್ಟ್ರೀಯ ಕಾರ್ಯಾಗಾರ: ಎಸ್.ಬಿ.ಆರ್.ಆರ್. ಮಹಾಜನ ಕಾನೂನು ಮಹಾವಿದ್ಯಾಲದಲ್ಲಿ : ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೋ.ಸಿ ಬಸವರಾಜು ಮಾಹಿತಿ.

ಮೈಸೂರು : 2009ರಲ್ಲಿ ಅಸ್ಥಿತ್ವಕ್ಕೆ ಬಂದಂತಹ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಕಾನೂನು ಜ್ಞಾನವನ್ನು ವಿದ್ಯಾರ್ಥಿಗಳಿಗೆ ಪಸರಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿದೆ.ಕಾನೂನಿಗೆ ಸಂಬಂಧಿಸಿದಂತಹ ಹತ್ತು ಹಲವಾರು ಕೋರ್ಸ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ. ಸುಮರು 150ಕ್ಕೂ ಹೆಚ್ಚು ಕಾನೂನು ಮಹಾವಿದ್ಯಾಲಯಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಡಿಯಲ್ಲಿ ಅಭಿಸಂಯೋಜನೆ ಹೊಂದಿ ಕಾಯಕ ನಿರ್ವಹಿಸುತ್ತಿದೆ. ಸರ್ವರಲ್ಲು ಕಾನೂನು ಜ್ಞಾನವನ್ನು ಹರಡುವ ದೃಷ್ಟಿಯಿಂದ ಹಾಗೂ ಎಲ್ಲಾ ಕಾನೂನು ಮಹಾವಿದ್ಯಾಲಯಗಳನ್ನು ಒಂದೆಡೆ ಸೇರಿಸುವ ದೃಷ್ಟಿಯಿಂದ 4 ವಲಯ ಮಟ್ಟದ ರಾಷ್ಟ್ರೀಯ ಕಾರ್ಯಾಗಾರವನ್ನು ನಡೆಸುವ ಉದ್ದೇಶವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹೊಂದಿದೆ. ಬೆಂಗಳೂರು ವಲಯ ಮಟ್ಟದಲ್ಲಿ 2 ರಾಷ್ಟ್ರೀಯ ಕಾರ್ಯಾಗಾರಗಳು, ಮಂಗಳೂರು ವಲಯ ಮಟ್ಟದಲ್ಲಿ ಒಂದು ರಾಷ್ಟ್ರೀಯ ಕಾರ್ಯಾಗಾರವನ್ನು ಯಶಸ್ವಿಯಾಗಿ ನೆರವೇರಿಸಿ ಪ್ರಸ್ತುತ ಮೈಸೂರು ವಲಯ ಮಟ್ಟದಲ್ಲಿ ಏಳು ಕಾನೂನು ಮಹಾವಿದ್ಯಾಲಯಗ ಸಹಯೋಗದೊಂದಿಗೆ ಡಿಸೆಂಬರ್ 28 ಹಾಗೂ 29ಕ್ಕೆ ಎರಡು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಎಸ್.ಬಿ.ಆರ್.ಆರ್. ಮಹಾಜನ ಕಾನೂನು ಮಹಾವಿದ್ಯಾಲದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಸುವ ಉದ್ದೇಶವನ್ನು ಹೊಂದಿದೆ ಎಂದು ಕುಲಪತಿಗಳಾದ ಪ್ರೋ.ಸಿ ಬಸವರಾಜು ತಿಳಿಸಿದರು.

ಇನ್ನೂ ಈ ರಾಷ್ಟ್ರೀಯ ಕಾರ್ಯಾಗಾರದ ಮುಖ್ಯ ವಸ್ತು ವಿಷಯವೇನೆಂದರೆ, “ಸಮಕಾಲೀನ ಯುಗದಲ್ಲಿ ಸಾಮಾಜಿಕ ನ್ಯಾಯದ ಬದಲಾದ ಮಜಲುಗಳು” ಸತತ ಎರಡು ದಿನಗಳವರೆಗೆ ಜರುಗುವ ಈ ರಾಷ್ಟ್ರೀಯ ಕಾರ್ಯಾಗಾರದ ಮೊದಲನೇ ದಿನವಾದ ದಿನಾಂಕ : 28-12-2024ರಂದು ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಇಂದಿರೇಶ್‌ರವರು ನೆರವೇರಿಸಿದರೆ, ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚನ್ಯಾಯಾಲಯದ ಹಿಂದಿನ ನ್ಯಾಯಾಧೀಶರು ಹಾಗೂ ಪ್ರಸ್ತುತ ಕರ್ನಾಟಕ ಕಾನುನೂ ಆಯೋಗದ ಮುಖ್ಯಸ್ಥರಾದ ಗೌರವಾನ್ವಿತ ನ್ಯಾಯಯಮೂರ್ತಿಗಳಾದ ಡಾ. ಅಶೋಕ ಬಿ. ಹಿಂಜಗೇರಿ ಹಾಗೂ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಟಿ.ಜ ಶಿವಶಂಕರೇ ಗೌಡರವರು ಪಾಲ್ಗೊಳ್ಳಲ್ಲಿದ್ದಾರೆ. ಅಲ್ಲದೇ ಮತ್ತೋರ್ವ ಮುಖ್ಯ ಅತಿಥಿಗಳಾಗಿ ಸಾಮಾಜಿಕ
ಕಾರ್ಯಕರ್ತರಾದ ಶ್ರೀ ವಾದೀರಾಜ್‌ರವರು ಕೂಡ ಪಾಲ್ಗೊಳ್ಳಲ್ಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಡಾ. ಸಿ. ಬಸವರಾಜುರವರು ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕಾನೂನು ಮಹಾವಿದ್ಯಾಲಯದಿಂದ ಬಂದಂತಹ ಪ್ರಾಧ್ಯಾಪಕರು. ಸಹಾಯಕ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು “ಸಾಮಾಜಿಕ ನ್ಯಾಯ” ವಿಷಯದಡಿಯಲ್ಲಿ ತಮ್ಮ ಸಂಶೋಧನಾ ಪತ್ರಿಕೆಗಳನ್ನು ಮಂಡಿಸಲಿದ್ದಾರೆ. ಮುಂದುವರೆದು ದಿನಾಂಕ : 29-12-2024ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭವು ನೆರವೇರಲಿದ್ದು, ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಶ್ರೀ ಜಿ.ಎಸ್. ಸಂಗ್ರೇಶಿರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ.ಡಾ. ಶರಣಪ್ಪ ವಿ. ಹಲ್ಲೆರವರು, ಮೈಸೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಲೋಕನಾಥ 23. ಕೆರವರು, ಗದಗಿನ ಕೆ.ಎಸ್.ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಹಾಲಿ ಉಪಕುಲಪತಿಗಳಾದ ಪ್ರೊ.ಡಾ. ಸುರೇಶ್ ವಿ. ನಾಡಗೌಡರ್‌ರವರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಡಾ. ಸಿ. ಬಸವರಾಜುರವರು ವಹಿಸಲಿದ್ದಾರೆ ಎಂದು ತಿಳಿಸಿದರು.

ಒಟ್ಟಾರೆ ಕಾನೂನು ಕ್ಷೇತ್ರದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಕಾನೂನು ಜ್ಞಾನವನ್ನು ಎಲ್ಲೆಡೆಯಲ್ಲಿಯೂ ಹರಡಲು ಅವಿರತವಾಗಿ ಶ್ರಮಿಸುತ್ತಿದೆ ಹಾಗಾಗಿ ಮೈಸೂರು ಭಾಗದ ಎಲ್ಲಾ ಕಾನೂನು ವಿಶ್ವವಿದ್ಯಾಲಯ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *