ನಂದಿನಿ ಮೈಸೂರು
ಬಸವಮಾರ್ಗ ಫೌಂಡೇಶನ್ ಹಾಗೂ ಇಂಡಿಯನ್ ಟಿವಿ ವತಿಯಿಂದ ಸಿದ್ದಗಂಗಾ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಗಳಿಗೆ ಪಾದ ಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೈಸೂರಿನ ಹೆಬ್ಬಾಳ್ ರಿಂಗ್ ರಸ್ತೆಯಲ್ಲಿರುವ ಬಸವ ಮಾರ್ಗ ವ್ಯಾಸನ ಮುಕ್ತ ಕೇಂದ್ರದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಬಸವಣ್ಣ ಮತ್ತು ಅವರ ಕುಟುಂಬದವರಿಂದ ಪಾದ ಪೂಜೆ ಮಾಡಲಾಯಿತು.
ಪಾದ ಪೂಜೆ ಬಳಿಕ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಶಿವಲಿಂಗ ಸ್ವಾಮೀಜಿ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.47 ನೇ ವ್ಯಸನಮುಕ್ತ ಫೋಸ್ಟರ್ ಬಿಡುಗಡೆ ಮಾಡಲಾಯಿತು.
ಶ್ರೀಗಳು ಶಿಬಿರರ್ಥಿಗಳು ಹಾಗೂ ಸಾರ್ವಜನಿಕರಿಗೆ ಧಾರ್ಮಿಕ ಉಪನ್ಯಾಸ ನೀಡಿದರು.ತದನಂತರ ಶಿಭಿರಾರ್ಥಿಗಳಿಗೆ ಫಲ ನೀಡುವ ಮೂಲಕ ಆಶಿರ್ವದಿಸಿದರು
ಆಹ್ವಾನಿತ ಸ್ವಾಮೀಜಿಗಳು,ಗಣ್ಯರು ಮಾತಾಡಿ ಪ್ರತಿ ಮನುಷ್ಯನಿಗೂ ಒತ್ತಡ ನೋವು ಇದ್ದೇ ಇರುತ್ತದೆ.ಮನ ನೊಂದು ಕುಡಿತಕ್ಕೆ ದಾಸರಾಗಿರುತ್ತೀರಿ,ಕುಡಿತ ಬಿಡಿಸೋಕೋ ಒಂದು ಮಾರ್ಗ ರೂಪಿಸಿದವರು
ಬಸವ ಮಾರ್ಗ.ಈ ಸಂಸ್ಥೆ ಸಾವಿರಾರು ಜನರಿಗೆ ಉಚಿತವಾಗಿ ಕುಡಿತ ಬಿಡಿಸಿದ್ದಾರೆ. ಮುಂದೆಯೂ ಇನ್ನೂ ಎರಡು ಕೇಂದ್ರ ಸ್ಥಾಪಿಸಲು ನಿರ್ಧರಿಸಿದ್ದಾರೆ. ಕುಡಿಯುವ ವ್ಯಕ್ತಿ ಕುಟುಂಬಕ್ಕೆ ಬಸವ ಮಾರ್ಗ ಜೀವನದ ದಾರಿ ತೋರಿಸಿದೆ.ಕುಡಿತ ಬಿಟ್ಟು ಜೀವನ ಸಾಗಿಸಿ ಎಂದು ಬಸವಣ್ಣರವರ
ಕಾರ್ಯ ವೈಖರಿಗೆ ತಮ್ಮದೇ ಆದ ಭಾಷಣ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಣ್ಣ ಮಾತನಾಡಿ ನಾನು ಕುಡಿಯುತ್ತಿದ್ದೆ.ಕುಡಿತದ ದಾಸನಾಗಿ ನೂರಾರೂ ಸಮಸ್ಯೆಗಳನ್ನ ಎದುರಿಸಿದ್ದೇನೆ.ಕುಡಿದರೇ ನಮಗೆ ಎಲ್ಲೂ ಗೌರವ ಸಿಗೋದಿಲ್ಲ.ಸಮಾಜ ನಮ್ಮನ್ನ ಕೀಳಾಗಿ ನೋಡುತ್ತಿತ್ತು.
ಈಗ ಕುಡಿಯುವ ಅಭ್ಯಾಸ ಬಿಟ್ಟಿದ್ದೇನೆ.ಸುತ್ತೂರು ಶ್ರೀಗಳು ಒಂದು ಮಾತು ಹೇಳಿದ್ರೂ.ನೀನು ಕುಡಿತದ ದಾಸನಾಗಿದ್ದಕ್ಕೆಯೇ ಈ ಬಸವ ಮಾರ್ಗ ಆರಂಭವಾಗಿರೋದು ನೀನು ಕುಡಿಯದಿದ್ದರೇ ಈ ಸಂಸ್ಥೆ ಹೇಗೆ ಹುಟ್ಟುತ್ತಿತ್ತು. ನೀನು ಇಂತಹ ಸೇವೆಯಲ್ಲಿಯೇ ನಿರಂತರವಾಗಿ ತೊಡಗಿರು ಎಂದು ತಿಳಿಸಿದ್ರು.ಆಗ ನನಗೆ ಮತ್ತೆ ಚೈತನ್ಯ ಬಂತು.ಈಗ 47 ನೇ ವ್ಯಸನಮುಕ್ತ ಶಿಬಿರ ಮಾಡುತ್ತಿದ್ದೇನೆ.ಇದಕ್ಕೆಲ್ಲ ಅವರ ಸ್ಪೂರ್ತಿದಾಯಕ ಮಾತೇ ಕಾರಣ.
ಶಿಭಿರಾರ್ಥಿಗಳು ಕುಡಿತ ಬಿಟ್ಟು ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಡೆಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ
ಬೇಬಿ ಬೆಟ್ಟದ ಪರಮಪೂಜ್ಯ ಶ್ರೀ ಶಿವ ಬಸವ ಸ್ವಾಮೀಜಿ,
ವಿಜಯಪುರದ ಸದಾಶಿವ ಸ್ವಾಮೀಜಿ ,
ಕಾಯಕಯೋಗಿ ಪತ್ರಿಕೆ ಸಂಪಾದಕ ಶಿವಕುಮಾರ್, ಎಂ ಎಸ್ ಮಂಜುನಾಥ್,
ಮದ್ದೂರು ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಭಾಗಿಯಾಗಿದ್ದರು.