ಹಾಡುಹಗಲೆ ಹುಲಿ ದಾಳಿ ಹಸು ಬಲಿ

ಹಾಡುಹಗಲೆ ಹುಲಿ ದಾಳಿ ಹಸು ಬಲಿ

ಮಲ್ಕುಂಡಿ:- ಹಾಡಾಗಲ್ಲೇ ಹಸುಗಳ ಮೇಲೆ ಹುಲಿ ದಾಳಿ ಮಾಡಿ ಒಂದು ಹಸುವನ್ನು ಬಲಿ ಪಡೆದು 2 ಹಸುಗಳಿಗೆ ಗಾಯವಾಗಿರುವ ಘಟನೆ ಸಮೀಪದ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿಜಲಿಂಗಮೂರ್ತಿ ಹಾಗೂ ಮಹೇಶ್ ಎಂಬುವವರು ಗ್ರಾಮದ ಹೂರ ವಲಯದಲ್ಲಿ ತಮ್ಮ ಜಾನುವಾರುಗಳನ್ನು ಮೇಯುಸುತ್ತಿದ್ದ ವೇಳೆ ಪಕ್ಕದಲ್ಲೇ ಪೊದೆಯಲ್ಲಿದ ಹುಲಿ ಏಕಾಏಕಿ 3 ಹಸುಗಳ ಮೇಲೆ ದಾಳಿ ಮಾಡಿ ಒಂದು ಹಸುವನ್ನು ಬಲಿ ಪಡೆದು 2 ಹಸುಗಳನ್ನು ಅರೇಬರೆ ತಿಂದು ಬಿಸಾಡಿ ಹೋಗಿದೆ ಗಾಬರಿಯಾದ ಸಾರ್ವಜನಿಕರು ಚಿರಾಡಿದ್ದಾಗ ಹುಲಿ ಪಾರಾರಿಯಾಗಿದೆ.ಈಗಾಗಲೇ ಮುಂಗಾರು ಮಳೆಯಿಂದ ರೈತರು ತಮ್ಮ ಫಸಲುಗಳನ್ನು ರಕ್ಷಣೆ ಮಾಡಲು ತಮ್ಮ ಜಮೀನಿಗೆ ತೆರಳುತ್ತಿದ್ದಾರೆ ಈ ಘಟನೆಯಿಂದ ರೈತರು ತಮ್ಮ ಜಮೀನಿಗೆ ಹೋಗಿ ಕೆಲಸ ಮಾಡಲು ಭಯಬೀತರಾಗಿದ್ದಾರೆ ರೈತರು ಕಷ್ಟ ಪಟ್ಟು ಹಸುಗಳನ್ನು ಮೇಯಿಸಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಅದರೆ ಹಾಡಾಗಲ್ಲೇ ಹುಲಿ ದಾಳಿ ಮಾಡಿದ್ದರಿಂದ ರೈತರು ಕಂಗಲಾಗಿದ್ದಾರೆ.ತಕ್ಷಣದಲ್ಲೇ ಹುಲಿಯನ್ನು ಸೆರೆ ಹಿಡಿದು ರೈತರ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿ ಸೆರೆ ಹಿಡಿಯಲು ಬೋನ್ ಹಾಗೂ ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿದೆ ತಕ್ಷಣವೇ ಹುಲಿಯನ್ನು ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಅಧಿಕಾರಿಗಳು ಭರವಸೆ ನೀಡಿದರು

Leave a Reply

Your email address will not be published. Required fields are marked *