*ಸಿದ್ಧರಾಮಯ್ಯ ಹಿಂದಿನಿಂದಲೂ ಲಿಂಗಾಯತರನ್ನು ಅವಮಾನಿಸುತ್ತ ಬಂದಿದ್ದಾರೆ – ಅಮಿತ್ ಶಾ*
ದಿನಗಳದಂತೆ ಕರ್ನಾಟಕದ ಚುನಾವಣಾ ಕಣ ರಂಗೇರುತ್ತಿದ್ದು, ಎಲ್ಲಾ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರೊಂದಿಗೆ ಮತದಾರ ಪ್ರಭುಗಳನ್ನು ಆಕರ್ಷಿಸಲು ಬಗೆ ಬಗೆಯ ವೇಷಭೂಷಣಗಳನ್ನು ಹಾಕುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ತನ್ನ ರಾಷ್ಟ್ರೀಯ ನಾಯಕರ ಮುಂದಾಳತ್ವದಲ್ಲಿ ತಮ್ಮ ಜನಪರ ಅಭಿವೃದ್ಧಿ ಕಾರ್ಯಗಳ ಮೂಲಕ ಕರ್ನಾಟಕದ ಪ್ರಜ್ಞಾವಂತ ಮತದಾರರನ್ನು ತಲುಪುತ್ತಿದ್ದಾರೆ. ಕರ್ನಾಟಕ ಚುನಾವಣೆಗೆ ರೂಪುರೇಷೆಗಳನ್ನು ನಿರ್ಮಿಸಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ, ಚುನಾವಣಾ ಚಾಣಕ್ಯರಂದೆ ಖ್ಯಾತಿ ಪಡೆದ ಶ್ರೀ ಅಮಿತ್ ಶಾ ಈ ಬಾರಿ ಕರ್ನಾಟಕದಲ್ಲಿ ಪೂರ್ಣ ಬಹುಮತದ ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ರಚಿಸಲು ಸಕಲ ಸಿದ್ಧತೆಗಳೊಂದಿಗೆ ಕೆಲ ದಿನಗಳಿಂದ ಕರ್ನಾಟಕದಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ವರ್ಷದ ಆರಂಭದಿಂದ ಕರ್ನಾಟಕದಲ್ಲಿ ಸುಮಾರು 20 ದಿನಗಳಿಗೂ ಹೆಚ್ಚು ಬಾರಿ ಸಾರ್ವಜನಿಕ ಸಭೆ ಮತ್ತು ರೋಡ್ ಶೋಗಳ ಮೂಲಕ ಭಾಜಪದ ಪರವಾಗಿ ಅದ್ದೂರಿ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕದ ತಳಮಟ್ಟದ ಸಮಸ್ಯೆಗಳನ್ನು ಅರಿತಿರುವ ಅಮಿತ್ ಷಾ ಅವರು ಕರ್ನಾಟಕದ ಎಲ್ಲಾ ಭಾಗಗಳನ್ನು ಸುತ್ತುತ್ತಾ ಭಾಜಪದ ಪರವಾಗಿ ಜನಸ್ಪಂದನೆ ಮಿಡಿಯುವಂತೆ ಮಾಡುತ್ತಿದ್ದಾರೆ. ನಿನ್ನೆ ಮಂಗಳವಾರದಂದು, ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿರವ ವರುಣಾ ವಿಧಾನಸಭೆ ಕ್ಷೇತ್ರದಲ್ಲಿ, ಸಾರ್ವಜನಿಕ ಸಭೆಯ ಮೂಲಕ ಸಿದ್ದರಾಮಯ್ಯನವರ ಲಿಂಗಾಯತ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
ಪ್ರಚಾರ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದ್ದ ‘ಲಿಂಗಾಯತರೇ ಭ್ರಷ್ಟಚಾರ ಮಾಡಿದ್ದಾರೆ’ ಎಂಬ ಹೇಳಿಕೆಯನ್ನು ಖಂಡಿಸುತ್ತಾ, ಸಿದ್ದರಾಮಯ್ಯ ಕೊನೆಗೂ ತಮ್ಮ ಲಿಂಗಾಯತ ದ್ವೇಷವನ್ನು ಸಾರ್ವಜನಿಕವಾಗಿ ಹೊರಹಾಕಿ ತಮ್ಮ ನಿಜ ಸ್ವರೂಪವನ್ನು ತೋರಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ಸಿನ ಈ ಲಿಂಗಾಯತ ವಿರೋಧಿ ದೋರಣೆ ಹೊಸತೇನಲ್ಲ ಎಂದ ಶಾ, ಈ ಹಿಂದೆ ಲಿಂಗಾಯತ ಸಮುದಾಯದ ಬಹುದೊಡ್ಡ ನಾಯಕರಾಗಿದ್ದ ನಿಜಲಿಂಗಪ್ಪನವರನ್ನು ಇಂದಿರಾಗಾಂಧಿ ಅವಮಾನಿಸಿ ಅಧಿಕಾರದಿಂದ ಕೆಳಗಿಳಿಸಿದ್ದರು. ಹಾಗೆಯೇ ಮತ್ತೊಬ್ಬ ಶ್ರೇಷ್ಠ ನಾಯಕರಾಗಿದ್ದ, ವೀರೇಂದ್ರ ಪಾಟೀಲ್‌ರವರನ್ನು ರಾಜೀವ್ ಗಾಂಧಿ, ವಿಮಾನ ನಿಲ್ದಾಣದಲ್ಲಿಯೇ ಅವಮಾನಿಸಿ ಮುಖ್ಯಮಂತ್ರಿ ಪದವಿಯಿಂದ ತೆಗೆದು ಹಾಕಿದ್ದರು. ಕಾಂಗ್ರೆಸ್ ಸಮುದಾಯದ ಲಿಂಗಾಯತ ವಿರೋಧಿ ಧೋರಣೆಗಳನ್ನು ಸೇರಿದ್ದ ಜನಸಮೂಹಕ್ಕೆ ಅಮಿತ್ ಶಾ ಉದಾಹರಣೆಗಳ ಮೂಲಕ ತೆರೆದಿಟ್ಟರು.
ಪ್ರತಿ ಬಾರಿ ಚುನಾವಣೆ ಬಂದಾಗಲೂ ಸಿದ್ದರಾಮಯ್ಯನವರಿಗೆ ಕ್ಷೇತ್ರಗಳನ್ನು ಹುಡುಕುವ ಅನಿವಾರ್ಯತೆ ಬರುತ್ತದೆ ಎಂದು ವ್ಯಂಗ್ಯವಾಡಿದ ಅಮಿತ್ ಶಾ, ಸಿದ್ಧರಾಮಯ್ಯನವರಿಗೆ ಇದರ ಕಾರಣವನ್ನು ಹೇಳಲು ಪ್ರಶ್ನಿಸಿದರು. ವರುಣಾದಿಂದ ಚಾಮುಂಡೇಶ್ವರಿಗೆ, ಚಾಮುಂಡೇಶ್ವರಿಯಿಂದ ಬಾದಾಮಿಗೆ, ಬಾದಾಮಿಯಿಂದ ಮತ್ತೆ ವರುಣಾಗೆ, ಹೀಗೆ ಪ್ರತಿಬಾರಿಯೂ ಸಿದ್ದರಾಮಯ್ಯನವರ ಮತಕ್ಷೇತ್ರ ಹುಡುಕಾಟ ಸಾಗುತ್ತದೆ. ಇದಕ್ಕೆ ಕಾರಣ ವಿವಿರಿಸಿದ ಶಾ ‘ಸಿದ್ದರಾಮಯ್ಯ ಯಾವುದೇ ಕ್ಷೇತ್ರಕ್ಕೆ ಹೋದರು, ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾರಣ, ಪ್ರತಿ ಬಾರಿ ಜನತೆಯೇ ಅವರನ್ನು ಕ್ಷೇತ್ರದಿಂದ ಓಡಿಸುವ ಪ್ರಮೇಯ ಬರುತ್ತದೆ. ಕಾಂಗ್ರೆಸ್ಸಿನ ಮುಖ್ಯ ನಾಯಕ, ಮುಖ್ಯಮಂತ್ರಿ ಅಕಾಂಕ್ಷಿಯೊಬ್ಬರ ಕಥೆಯೇ ಹೀಗಾದರೆ, ಅವರ ಗ್ಯಾಂರಂಟಿಗಳ ಯಾವದೇ ಅರ್ಥವಿಲ್ಲ ಎಂದು ಕುಹಕವಾಡಿದರು. ಸಿದ್ಧರಾಮಯ್ಯನವರ ಐದು ವರ್ಷಗಳ ಕಾಂಗ್ರೆಸ್ ಸರ್ಕಾರ ದೇಶದೆಲ್ಲೆಡೆ ತನ್ನ ಭ್ರಷ್ಟಾಚಾರದಿಂದ ಅಪಖ್ಯಾತಿ ಪಡೆದಿತ್ತು.
ಹೀಗೆ ಕಾಂಗ್ರೆಸ್ಸಿನ ಮೇಲೆ ತಮ್ಮ ದಾಳಿಯನ್ನು ಮುಂದುವರಿಸುತ್ತಾ ಅಮಿತ್ ಷಾ, ದೇಶದೆಲ್ಲೆಡೆ ಸಂಪೂರ್ಣವಾಗಿ ನಾಮಾವಶೇಷವಾಗಿರುವ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ತನ್ನ ಎಟಿಎಂಅನ್ನು ಹುಡುಕುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಕರ್ನಾಟಕ ದೆಹಲಿಯ ಎಟಿಎಂ ಆಗಲಿದೆ ಎಂದ ಶಾ ಮತದಾರರನ್ನು ಜಾಗರೂಕರಾಗಿರಿ ಎಂದು ಮನವಿ ಮಾಡಿದರು.
ವರುಣಾ ನಂತರ ಚಾಮರಾಜನಗರದ ಹನೂರು, ಕೊಳ್ಳೆಗಾಲ್ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಅಮಿತ್ ಶಾ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಅಧಿಕಾರ ನೀಡುವುದು ಎಂದರೆ ಕರ್ನಾಟಕವನ್ನು ರಿವರ್ಸ್ ಗೇರ್‌ನಲ್ಲಿ ಚಲನೆಗೆ ಅವಕಾಶ ನೀಡಿದಂತೆ. ಭಾರತೀಯ ಜನತಾ ಪಕ್ಷಕ್ಕೆ ಮತ ನೀಡುವುದು ಎಂದರೆ, ಕರ್ನಾಟಕದ ಸುರಕ್ಷತೆಗೆ, ಕರ್ನಾಟಕದ ರೈತರ ಉದ್ಧಾರಕ್ಕೆ, ಕರ್ನಾಟಕದ ಸುವರ್ಣ ಭವಿಷ್ಯಕ್ಕೆ ಮತ ನೀಡಿದಂತೆ ಎಂದರು. ಈ ಚುನಾವಣೆ ವಿಕಾಸ ಮತ್ತು ರಿವರ್ಸ್ ಗೇರ್ ಕಾಂಗ್ರೆಸ್ ನಡುವಿನ ಆಯ್ಕೆ. ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಪೂರ್ಣ ಬಹುಮತ ಸರ್ಕಾರ ರಚಿಸಲು ಅವಕಾಶ ನೀಡಿ, ಮೋದಿಯವರ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಕರ್ನಾಟಕವನ್ನು ಸಮಗ್ರ ಭಾರತದಲ್ಲಿಯೇ ನಂಬರ್ ಒನ್ ಆಗಿ ಮಾಡಲಿದೆ ಮತದಾರರಲ್ಲಿ ಮನವಿ ಮಾಡಿದರು.