ನಂದಿನಿ ಮೈಸೂರು
ತಿ.ನರಸೀಪುರ. ನ.20:- ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ನ.21ರ ಸೋಮವಾರ ದಂದು ಶ್ರೀ ಕ್ಷೇತ್ರ ಆಲಗೂಡು ಗ್ರಾಮದಲ್ಲಿ ಜರುಗಲಿದೆ ಎಂದು ಆಲಗೂಡು ಗ್ರಾಮಸ್ಥರು, ಯಜಮಾನರು ಹಾಗೂ ಆಲಗೂಡು ಶ್ರೀ ಸಿದ್ದೇಶ್ವರ ಸೇವಾ ಸಮಿತಿ ತಿಳಿಸಿದೆ.
ಪಟ್ಟಣದ ಆಲಗೂಡು ಗ್ರಾಮದಲ್ಲಿ ಪುರಾತನ ಪುಣ್ಯ ಪ್ರಸಿದ್ಧ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಗೊಂಡು ಎರಡು ವರ್ಷ ತುಂಬಿರುವ ಹಿನ್ನಲೆಯಲ್ಲಿ ದೇವಸ್ಥಾನದ ಎರಡನೇ ವರ್ಷದ ವಾರ್ಷಿಕೋತ್ಸವ ಜೊತೆಗೆ ,ಸಿದ್ದೇಶ್ವರ ಜಾತ್ರೆ ನಡೆಸುವುದರ ಜೊತೆಗೆ ಅದೇ ದಿನ ದೇವಸ್ಥಾನದ ರಾಜಗೋಪುರ ಮತ್ತು ಪ್ರಸಾದ ಭವನವಕ್ಕೆ ಭೂಮಿ ಪೂಜೆ ಸಹ ಜರುಗಲಿದೆ ಎಂದು ತಿಳಿಸಿದ್ದಾರೆ.
ಕಡೆ ಕಾರ್ತಿಕ ಮಾಸದ ಸೋಮವಾರ ನವೆಂಬರ್ 21ರಂದು ಬೆಳಿಗ್ಗೆ 9 ಗಂಟೆಗೆ ಕುಂಭ ಕಳಸ ತರುವುದು,11 ಗಂಟೆಗೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ರವರಿಂದ ದೇವಸ್ಥಾನದ ರಾಜಗೋಪುರ ಮತ್ತು ಪ್ರಸಾದ ಭವನಕ್ಕೆ ಭೂಮಿ ಪೂಜೆ, ಮಧ್ಯಾನ 1 ಗಂಟೆಗೆ ಪ್ರಸಾದ ವಿನಿಯೋಗ. ಸಾಯಂಕಾಲ 5 ಗಂಟೆಗೆ ಸಿದ್ದೇಶ್ವರ ಸ್ವಾಮಿಯವರ ಉತ್ಸವ ಸಂಜೆ 6 ಗಂಟೆಗೆ ದೀಪೋತ್ಸವ ಕಾರ್ಯಕ್ರಮ ನಡಯಲಿದೆ.
ಈ ಒಂದು ದಾರ್ಮಿಕ ಕಾರ್ಯಕ್ಕೆ ಹಾಗೂ
ದೇವಸ್ಥಾನದ ರಾಜಗೋಪುರ ಮತ್ತು ಪ್ರಸಾದ ಭವನ ನಿರ್ಮಾಣಕ್ಕೆ ದೇಣಿಗೆ ನೀಡುವ ಭಕ್ತರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬನ್ನೂರು ಶಾಖೆ A/C ನಂ 64052644483- IFSC :SBIN0040268 ಇಲ್ಲಿಗೆ ಸಂದಾಯ ಮಾಡಬಹುದು ಅಥವಾ ದೇವಸ್ಥಾನದಲ್ಲಿ ದೇಣಿಗೆ ನೀಡಿ ರಶೀದಿ ಪಡೆಯಬಹುದಾಗಿದ್ದು ಭಕ್ತರು ಸಹಕಾರ ನೀಡಬೇಕೆಂದು ಸೇವಾ ಸಮಿತಿ ಹಾಗೂ ಆಲಗೂಡು ಗ್ರಾಮಸ್ಥರು ಮನವಿ ಮಾಡಿದ್ದಾರೆ.