ನಂದಿನಿ ಮೈಸೂರು
ಮೈಸೂರು: ಭ್ರಷ್ಟಾಚಾರದ ವಿರುದ್ಧ, ಬಡವರ ಪರ ಧ್ವನಿಯೆತ್ತಲು ಅಸ್ಥಿತ್ವಕ್ಕೆ ಬಂದ ವಾಯ್ಸ್ ಆಫ್ ಪೀಪಲ್ ಸಂಸ್ಥೆ.
ಭ್ರಷ್ಟಾಚಾರದ ವಿರುದ್ಧ, ಬಡವರ ಪರ ಧ್ವನಿಯೆತ್ತಲು ಮತ್ತು ನೊಂದವರಿಗೆ ನೆರವಿನ ಹಸ್ತ ಚಾಚುವ ಉದ್ದೇಶದಿಂದ ಸ್ಥಾಪಿತವಾಗಿರುವ ವಾಯ್ಸ್ ಆಫ್ ಪೀಪಲ್ ಸಂಸ್ಥೆ ಉದ್ಗಾಟನೆಗೊಂಡಿತು.
ಮೈಸೂರಿನ ವಿಜಯನಗರದ ರೈಲ್ವೇ ಬಡಾವಣೆ, ಕಾರ್ಪೋರೇಷನ್ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಚಾಮರಾಜ ಕ್ಷೇತ್ರದ ಪುಟ್ಟ ಮಕ್ಕಳು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಹಲವು ಮಂದಿ ರಕ್ತದಾನ ಮಾಡಿದ್ದು, ಉಚಿತವಾಗಿ ಬಿ,ಪಿ ಮತ್ತು ಶುಗರ್ ಪರೀಕ್ಷೆ ಮಾಡಿಸಿಕೊಂಡರು.
ಈ ವೇಳೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ವಸಂತ್ ರಾವ್ ಚೌವ್ಹಾಣ್ ನಾವು ಭ್ರಷ್ಟಾಚಾರದ ವಿರುದ್ದ ಮತ್ತು ನೊಂದವರಿಗೆ ನೆರವಾಗುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಂಸ್ಥೆಗೆ ಸದಸ್ಯರಾಗುವ ಮೂಲಕ ನಮ್ಮ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಈ ವೇಳೆ ಪಾಲಿಕೆ ಸದಸ್ಯರಾದ ಕೆ,ವಿ ಶ್ರೀಧರ್, ಸಿಜಿ ಗಂಗಾಧರ್, ತೇಜೇಸ್ ಲೋಕೇಶ್ ಗೌಡ, ಜೀವಾಧಾರ ಕೇಂದ್ರದ ರಶ್ಮಿ ಎನ್ ರಾಜ್, ಹಾಗೂ ಪದಾಧಿಕಾರಿಗಳಾದ ರಾಕೇಶ್ ಪಿ, ಮಧುಸೂದನ್, ಶ್ವೇತ ,ಶಿಲ್ಪ ವಿ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.