*ಪವಿತ್ರಾ ಲೋಕೇಶ್-ನರೇಶ್ ‘ಮತ್ತೆ ಮದುವೆ’ಗೆ ಗೆಲುವು..ರಮ್ಯಾ ರಘುಪತಿ ಶಾಕ್ ಕೊಟ್ಟ ಕೋರ್ಟ್*
ಪವಿತ್ರಾ ಲೋಕೇಶ್ ಹಾಗೂ ತೆಲುಗಿನ ನರೇಶ್ ನಟನೆಯ ಮಳ್ಳಿ ಪೆಳ್ಳಿ ಸಿನಿಮಾ ಎಂಬ ಸಿನಿಮಾ ಮಾಡಿದ್ದರು. ಕನ್ನಡದಲ್ಲಿ ಮತ್ತೆ ಮದುವೆ ಎಂಬ ಟೈಟಲ್ ನಡಿ ತೆರೆಕಂಡಿದ್ದ ಈ ಚಿತ್ರ ಎರಡು ಭಾಷೆಯಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ತಮ್ಮನ್ನ ಟಾರ್ಗೆಟ್ ಮಾಡಿಯೇ ಮತ್ತೆ ಮದುವೆ ಸಿನಿಮಾವನ್ನು ಮಾಡಿರುವುದಾಗಿ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲೇರಿದ್ದರು. ಚಿತ್ರವನ್ನು ಥಿಯೇಟರ್ ಹಾಗೂ ಓಟಿಟಿಯಲ್ಲಿ ಪ್ರದರ್ಶನ ಮಾಡದಂತೆ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಬೆಂಗಳೂರಿನ ಸಿವಿಲ್ ಕೋರ್ಟ್ 1 ಆಗಸ್ಟ್ 2023 ರಂದು ತೀರ್ಪು ಪ್ರಕಟಿಸಿದೆ. ರಮ್ಯಾ ರಘುಪತಿ ಸಲ್ಲಿಸಿದ ಮೊಕದ್ದಮೆಯನ್ನು ಅರ್ಹತೆಗಳಿಲ್ಲ ಎಂದು ವಜಾಗೊಳಿಸಿತು. ಹೀಗಾಗಿ ಒಟಿಟಿಯಲ್ಲಿ ಸಿನಿಮಾ ತಡೆಗೆ ಇದ್ದ ನಿರ್ಬಂಧಗಳು ನಿವಾರಣೆಯಾಗಿದೆ.
‘ಮಳ್ಳಿ ಪೆಳ್ಳಿ’ ಸಿನಿಮಾ ಓಟಿಟಿ ಪ್ರದರ್ಶನಕ್ಕೆ ಕೋರ್ಟ್ ಸೂಚನೆ ಕೊಟ್ಟಿರುವುದರ ಜೊತೆಗೆ ಮತ್ತೊಂದು ಕೇಸ್ನಲ್ಲೂ ನರೇಶ್ ಗೆ ಜಯ ಸಿಕ್ಕಿದೆ. ತಮ್ಮ ಮನೆಗೆ ರಮ್ಯಾ ರಘುಪತಿ ಬರದಂತೆ ನರೇಶ್ ಮತ್ತು ಅವರ ಕುಟುಂಬ ಸದಸ್ಯರು ಸಲ್ಲಿಸಿದ ತಡೆಯಾಜ್ಞೆ ಮೊಕದ್ದಮೆಯನ್ನು ನ್ಯಾಯಾಲಯವು ಅಂಗೀಕರಿಸಿದೆ. ಅಕ್ರಮವಾಗಿ ರಮ್ಯಾ ನರೇಶ್ ನಿವಾಸ ಪ್ರವೇಶಿಸದಂತೆ ನಿಷೇಧ ಹೇರಿದೆ. ನರೇಶ್ ಕುಟುಂಬಸ್ಥರು ನೀಡಿರುವ ಸಾಕ್ಷ್ಯಾಧಾರದ ಮೇರೆಗೆ ರಮ್ಯಾ ರಘುಪತಿ ವಿರುದ್ಧ ಕೋರ್ಟ್ ತೀರ್ಪು ಪ್ರಕಟಿಸಿದೆ. ಅಷ್ಟೇ ಅಲ್ಲದೇ ನರೇಶ್ ಅವರ ಆಸ್ತಿಯನ್ನು ರಮ್ಯಾ ವ್ಯಾಪಾರ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ನ್ಯಾಯಾಲಯ ದೃಢಪಡಿಸಿದೆ.
ತೆಲುಗಿನ ನಟ ನರೇಶ್ ಕರ್ನಾಟಕದ ಮೂಲದ ರಮ್ಯಾ ರಘುಪತಿಯನ್ನು ಮದುವೆಯಾಗಿದ್ದರು. ಮೂರನೇ ಪತ್ನಿಯಾಗಿರುವ ರಮ್ಯಾಗೆ ವಿಚ್ಛೇದನ ನೀಡದ ಪವಿತ್ರಾ ಲೋಕೇಶ್ ಅವರಟ್ಟೊಗೆ ಇದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಆ ಬಳಿಕ ಈ ವಿಷ್ಯ ಒಂದಷ್ಟು ಹಾದಿ ಬೀದಿ ರಂಪಾವಾಗಿತ್ತು.