ಮೈಸೂರು:13 ಸೆಪ್ಟೆಂಬರ್ 2021
*ನ@ದಿನಿ*
ನಾನು ಲಕ್ಷ್ಮೀ,ನಾನು ಧನಂಜಯ,ನಾನು ಚೈತ್ರ,ನಾನು ಅಂಬಾರಿ ಹೊರುವ ಅಭಿಮನ್ಯು,ನಾನು ಕಾವೇರಿ, ನಾನು ಅಶ್ವತ್ಥಾಮ ಅಂತ ಈ ವರ್ಷ ನಾನು ಮೊದಲ ಬಾರಿಗೆ ದಸರೆಗೆ ಬರ್ತ್ತೀದ್ದಿನಿ.ನಾನು ನಿಮಗೆ ಗೊತ್ತಲ್ವಾ ಗೋಪಾಲಸ್ವಾಮಿ. ದಸರಾಗೆ ಭಾಗವಹಿಸುವ ಆನೆಗಳು ಈಗೇ ತಮ್ಮ ಪರಿಚಯ ಮಾಡಿಕೊಡವು.
ಕೋರೋನಾ ಮೂರನೇ ಅಲೆ ನಡುವೆಯೂ ಸರಳ ಸಾಂಪ್ರದಾಯಿಕ ದಸರೆಗೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದ್ದು,
ನಾವು ದಸರಾ ಮಹೋತ್ಸವಕ್ಕೆ ಹೋಗ್ತೀದ್ದೇವೆ ಎಂದು ಅಭಿಮನ್ಯು ಟೀಂ ಬೆಳಗ್ಗೆಯೇ ಹೊಸ ಬಟ್ಟೆ,ಆಭರಣ ತೊಟ್ಟು ಭರ್ಜರಿಯಾಗಿ ರೆಡಿಯಾಗಿದ್ರು.
ಮೈಸೂರು ಜಿಲ್ಲಾ ಹುಣಸೂರು ತಾಲೂಕಿನ ನಾಗರಹೊಳೆ ವೀರನಹೊಸಹಳ್ಳಿಯಲ್ಲಿ
ದಸರೆಯ ಮೊದಲ ಕಾರ್ಯಕ್ರಮ ಆಯೋಜನೆಗೊಂಡಿತ್ತು. ತುಲಾ ಲಗ್ನದಲ್ಲಿ
ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ,ಸಂಸದ ಪ್ರತಾಪ್ ಸಿಂಹ,ಶಾಸಕ ಎಚ್.ಪಿ ಮಂಜುನಾಥ್ ,ಮೇಯರ್ ಸುನಂದಾ ಪಾಲನೇತ್ರ,
ಎಸ್ ಪಿ ಆರ್.ಚೇತನ್ ಡಿಸಿಎಫ್ ಕರಿಕಾಳನ್
ಅಭಿಮನ್ಯು ನೇತೃತ್ವದ 8 ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ಕಬ್ಬು, ಬೆಲ್ಲ ,ಹಣ್ಣು ತಿನ್ನಿಸಿ ನೀಡಿ ಗಜಪಯಣಕ್ಕೆ ಚಾಲನೆ ನೀಡಿದರು.
ವಿಶ್ವವಿಖ್ಯಾತ ದಸರಾ ಮಹೋತ್ಸವದ ಆಕರ್ಷಣೀಯ ಕೇಂದ್ರ ಬಿಂದು ಗಜ ಪಡೆ.ದಸರೆಗೆ ತಮ್ಮ ಆನೆಗಳನ್ನ ಕರೆದಂದು ದಸರಾ ಯಶಸ್ವಿ ಮಾಡಿಕೊಡುವಂತೆ ಜಿಲ್ಲಾಡಳಿತ ಕಾವಾಡಿ ಮಾವುತರಿಗೆ ಹೊಸ ಬಟ್ಟೆ, ಫಲ ತಾಂಬೂಲ ನೀಡಿ ಆಹ್ವಾನಿಸಿದರು.
ಒಟ್ಟಾರೆ ಹೇಳೋದಾದರೇ ವಿಜಯ ದಶಮಿಗೆ ಇನ್ನೊಂದು ತಿಂಗಳು ಬಾಕಿ ಇದೆ.ದಸರೆ ಜವಾಬ್ದಾರಿ ನೀವು ನಮ್ಮ ಹೆಗಲ ಮೇಲಾಕಿದ್ದೀರಾ ದಸರವನ್ನ ಯಶಸ್ವಿಯಾಗಿ ನಡೆಸಿಕೊಟ್ಟು ನಾವು ನಿಮಗೆ ಕೊಟ್ಟಿರೋ ಮಾತನ್ನ ಉಳಿಸಿಕೊಳ್ಳುತ್ತೇ .ನಮ್ಮ ಮೇಲೆ ನಂಬಿಕೆ ಇಡುವಂತೆ ಅಭಿಮನ್ಯು ಟೀಂ ಮೈಸೂರಿನತ್ತ ಹೆಜ್ಜೆ ಹಾಕಿವೆ.