ಮೈಸೂರು:13 ಸೆಪ್ಟೆಂಬರ್ 2021
ನ@ದಿನಿ
ಅವತ್ತೆಲ್ಲಾ ವಿಶ್ವವಿಖ್ಯಾತ ನಾಡ ಹಬ್ಬ ದಸರ ಮಹೋತ್ಸವಕ್ಕೆ ಬರ್ತ್ತೀರೋ ಆನೆಗಳು ಎಂಟು ಅಂತಿದ್ರೂ.ಇಲ್ಲೋಡಿದ್ರೇ 7 ಆನೆ ಮಾತ್ರ ಕಾಣ್ತೀದೆ ಅಂತ ಜನ ಕನ್ಫೋಜ್ ಆಗಿದ್ರು.ಇನ್ನೊಂದು ಆನೆ ಎಲ್ಲೋಗಿತ್ತು ಅಂತಾ ನಾವ್ ಹೇಳ್ತೀವಿ ಕೇಳಿ.
ಎಡದಿಂದ ಬಲಕ್ಕೆ ಲಕ್ಷ್ಮೀ ,ಧನಂಜಯ,ಚೈತ್ರ ಅಭಿಮನ್ಯು ,ಕಾವೇರಿ
ಅಶ್ವತ್ಥಾಮ,ಗೋಪಾಲಸ್ವಾಮಿ ಆನೆ ನಿಂತುಕೊಂಡಿದ್ರು.ಆ ಸಾಲಿನಲ್ಲಿ ವಿಕ್ರಮ ಮಿಸ್ ಆಗಿದ್ದ.2015 ರಿಂದ ಪಟ್ಟದ ಆನೆಯಾಗಿ ಅರಮನೆಯ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿದ್ದ ವಿಕ್ರಮನಿಗೆ ಮದ ಬಂದ ಕಾರಣ ಗಜಪಯಣದ ಪೂಜೆಗೆ ಗೈರಾಗಿತ್ತು.
ಸಾಮಾನ್ಯವಾಗಿ 14 ಆನೆಗಳು ಪ್ರತಿ ವರ್ಷ ದಸರ ಮಹೋತ್ಸವಕ್ಕೆ ಆಗಮಿಸುತ್ತಿದ್ದವು .ಆದರೆ ಈ ಬಾರಿ ಕೋರೋನಾ ಅಲೆಯಿಂದ ಆನೆಗಳ ಸಂಖ್ಯೆಯನ್ನ ಖಡಿತಗೊಳಿಸಲಾಗಿದೆ.
ಒಟ್ಟಾರೆ ಹೇಳುವುದಾದರೆ ಅಂಬಾರಿ ಹೊರುವ ಅಭಿಮನ್ಯು ನೇತ್ರತ್ವದಲ್ಲಿ ಮೈಸೂರಿನತ್ತ ಹೊರಟ ಗಜಪಡೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಬೀಡು ಬಿಡಲಿವೆ.ಒಂದು ಸಾಲು ಹೇಳ್ತಾರಲ್ಲ ಪೂಜೆಗೆ ಗೈರಾಗಿದ್ದ ವಿಕ್ರಮ ಲೇಟಾಗಿದ್ರೂ ಲೇಟೆಸ್ಟಾಗಿ ಎಂಟ್ರಿ ಕೊಡ್ತೀದ್ದಾನೆ.