ನಂದಿನಿ ಮೈಸೂರು
*ರೈಲಿನ ಎಸಿ ಕೋಚ್’ನ ಮೇಲ್ಛಾವಣಿ ಸೋರಿಕೆ: ಇಲಾಖೆ ವಿರುದ್ಧ ವ್ಯಾಪಕ ಆಕ್ರೋಶ*
***************************** ನವದೆಹಲಿ: ರೈಲಿನ ಮೇಲ್ಛಾವಣಿನಿಂದ ನೀರು ಸೋರುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದೆ.
ಪ್ಯಾಸೆಂಜರ್ ರೈಲು ಕೋಚ್ ನ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಇದೀಗ ಭಾರತೀಯ ರೈಲ್ವೇಯು ಅಪಹಾಸ್ಯಕ್ಕೆ ಕಾರಣವಾಗಿದೆ. ಆವಂತಿಕಾ ಎಕ್ಸ್ ಪ್ರೆಸ್ ನ ಪ್ರಯಾಣಿಕರೊಬ್ಬರು ಮಳೆಯ ಸಮಯದಲ್ಲಿ ಎಸಿ ಕೋಚ್ ನ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿರುವುದನ್ನು ವೀಡಿಯೊ ಮಾಡಿದ್ದಾರೆ.
ಈ ವೀಡಿಯೊವನ್ನು ಕಾಂಗ್ರೆಸ್ ಟ್ವಿಟರ್ ನಲ್ಲಿ ಮರುಹಂಚಿಕೊಂಡಿದ್ದು, “ರೈಲ್ವೆಗೆ ಸಂಬಂಧಿಸಿದಂತೆ ಪೊಳ್ಳು ಪ್ರಚಾರದ ಬದಲು ಒಂದಿಷ್ಟು ಕೆಲಸ ಮಾಡಿದ್ದರೆ ಒಳ್ಳೆಯದು ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದೆ. ಹೊಸ ರೈಲು ಬಂದಾಗ ಅನಾವರಣಗೊಳಿಸುವ ವ್ಯಕ್ತಿ (ಪ್ರಧಾನಿ)ಪ್ರಸ್ತುತ ವಿದೇಶದಲ್ಲಿದ್ದಾರೆ, ಈ ಬಗ್ಗೆ ರೈಲ್ವೆ ಸಚಿವರು ಗಮನಹರಿಸಬೇಕು, ಜತೆಗೆ ಇಲ್ಲಿಯವರೆಗೆ 18 ವಂದೇ ಭಾರತ್ ಎಕ್ಸ್ ಪ್ರೆಸ್ ನನ್ನು ಫ್ಲ್ಯಾಗ್ ಆಫ್ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರೇ ನೀವು ಆಗಮಿಸಿಬೇಕು ಎಂದು ಅವರಿಗೂ ಟ್ಯಾಗ್ ಮಾಡಿದೆ..