ನಂದಿನಿ ಮೈಸೂರು
ವಿಧಾನಸಭಾ ಚುನಾವಣೆ ಹಿನ್ನೆಲೆ ಕೆಆರ್ ಕ್ಷೇತ್ರ ಅಶೋಕಪುರಂ ನಲ್ಲಿ
ಗುರುವಾರ ಬಿಜೆಪಿ ಅಭ್ಯರ್ಥಿ ಟಿ ಎಸ್ ಶ್ರೀವತ್ಸ ಪ್ರಚಾರ ನಡೆಸಿ ಮತಯಾಚಿಸಿದರು.
‘ಸಬಕಾ ಸಾಥ್, ಸಬಕಾ ವಿಕಾಸ’ ಎಂಬ ಧೇಯ ವಾಕ್ಯದೊಂದಿಗೆ ದೇಶದಲ್ಲಿಯ ಎಲ್ಲ ಸಮಾಜದವರ ಸಮಗ್ರ ಪ್ರಗತಿ ಬಿಜೆಪಿಯ ಮೂಲ ಗುರಿಯಾಗಿದೆ’ ಎಂದು ಅಭ್ಯರ್ಥಿ ಟಿಎಸ್ ಶ್ರೀವತ್ಸ ಹೇಳಿದರು.
ಅಶೋಕಪುರಂ ನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ಗ್ರಾಮೀಣ ಭಾಗದ ನಾಗರಿಕರ ಜೀವನ ಮಟ್ಟ ಸುಧಾರಣೆ ಮಾಡುವತ್ತ ವಿನೂತನ ಯೋಜನೆಗಳು ರೂಪಿಸಿಕೊಂಡು ಬರುತ್ತಿದೆ’ ಎಂದು ತಿಳಿಸಿದರು.
ಚುನಾವಣೆ ಪ್ರಚಾರಕೂ ಮುನ್ನ ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು
ನಗಾರಿ ಬಾರಿಸುವ ಮುಖಾಂತರ ಪಾದಯಾತ್ರೆ ಮೂಲಕ ಮತದಾರರ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಅಶೋಕಪುರಂನ ನಾಗರಿಕರು ಮೆರವಣಿಗೆ ಮೂಲಕ ಸ್ವಾಗತಿಸಿದರು.
ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್,
ನಗರಪಾಲಿಕ ಸದಸ್ಯರಾದ ಪಿ ಟಿ ಕೃಷ್ಣ, ಸಿ ಈಶ್ವರ್, ಮಾಜಿ ಮೂಡ ಸದಸ್ಯರಾದ ವಿಶ್ವ,
ಮಾಜಿ ಉಪ ಮಹಾಪೂರದ ಶಲೇಂದ್ರ, ಎಸ್ ಸಿ ಮೋರ್ಚ ನಗರ ಉಪಾಧ್ಯಕ್ಷರಾದ ನಾಗರಾಜ್ ಬೆಲ್ಲಯ್ಯ, ಎಸ್ ಸಿ ಮೋರ್ಚಾ ನಗರ ಉಪಾಧ್ಯಕ್ಷರುಸತ್ಯ ಪ್ರಕಾಶ್, ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಧೀರಜ್ ಪ್ರಸಾದ್, ಮಿರ್ಲೆ ಶ್ರೀನಿವಾಸ್ ಗೌಡ ಹಾಗೂ ಇನ್ನಿತರರು ಭಾಗವಹಿಸಿದರು.