ನಂದಿನಿ ಮೈಸೂರು
ಎಂ ಕೆ ಮೋಹನ್ ರವರ ನೆನಪಿನಲ್ಲಿ ಗ್ರೀನ್ ಡಾಟ್ ಟ್ರಸ್ಟ್ ಗೆ 50 ಸಾವಿರ ರೂ ದೇಣಿಗೆ ನೀಡಿದ ಎಂ ಕೆ ಸೋಮಶೇಖರ್.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ಹಿರಿಯ ಸಹೋದರರಾದ ದಿ.ಎಂ ಕೆ ಮೋಹನ್ ರವರ ಜನ್ಮ ದಿನದ ಸವಿನೆನಪಿನಲ್ಲಿ ಕುವೆಂಪುನಗರದ ಶಿವ ಸರ್ವೀಸ್ ಸ್ಟೇಷನ್ ವತಿಯಿಂದ ಮೈಸೂರಿನ ಪ್ರತಿಷ್ಠಿತ ಎನ್ ಜಿ ಓ ಗಳಲ್ಲಿ ಒಂದಾದ ಗ್ರೀನ್ ಡಾಟ್ ಟ್ರಸ್ಟ್ (ರಿ.) ಗೆ 50 ಸಾವಿರ ರೂಗಳ ಚೆಕ್ ಅನ್ನು ದೇಣಿಗೆಯಾಗಿ ನೀಡಲಾಯಿತು.ಗ್ರೀನ್ ಡಾಟ್ ಟ್ರಸ್ಟ್ ಕಳೆದ 14 ವರ್ಷಗಳಿಂದಲೂ ವಯೋವೃದ್ಧರ,ನಿರ್ಗತಿಕರ,ಮಾನಸಿಕ ಅಸ್ವಸ್ಥರ,ಹಾಸಿಗೆ ಇಡಿದ ನಿರ್ಗತಿಕ ವೃದ್ಧರ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದ್ದು ವಿಶೇಷವಾಗಿ ಮಾನಸಿಕ ಅಸ್ವಸ್ಥರಾಗಿ ಬೀದಿ ಬೀದಿ ಅಲೆಯುವ,ರಸ್ತೆ,ಬಸ್ ನಿಲ್ದಾಣಗಳಲ್ಲಿ ಬೀಳುವಂತವರನ್ನು ಗುರುತಿಸಿ ಅವರ ಟ್ರಸ್ಟ್ ಗೆ ಕರೆದೊಯ್ದು ಅವರಿಗೆ ಸ್ನಾನ,ಹಾರೈಕೆ,ಆಹಾರ,ಬಟ್ಟೆ,ವಸತಿ ನೀಡಿ ಮಾನಸಿಕ ಖಿನ್ನತೆಗೆ ಸಂಬಂಧಿಸಿದ ಚಿಕಿತ್ಸೆ,ಔಷದೋಪಚಾರ ನೀಡಿ ನಂತರ ಆ ವ್ಯಕ್ತಿಗಳು ಮೊದಲಿನಂತಾಗಿ ಸರಿಯಾದ ಜ್ಞಾನ ಬಂದಾಗ ಅವರ ನೈಜ ಸ್ಥಳಗಳಿಗೆ ಕರೆದುಕೊಂಡು ಹೋಗಿ ಬಿಡುತ್ತಾರೆ.ಸ್ವತಃ ಮಾನಸಿಕ ರೋಗಿಗಳ ತಜ್ಞರಾಗಿರುವ ಡಾ.ಸಿ.ಕೆ.ಕಾಂತರಾಜು ರವರು ಈ ಎಲ್ಲಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಗ್ರೀನ್ ಡಾಟ್ ಟ್ರಸ್ಟ್ ನ ಸಿಇಓ ಮತ್ತು ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅದರ ಉಸ್ತುವಾರಿಯನ್ನು ಹೊತ್ತಿರುವ ಡಾ.ಸಿ.ಕೆ.ಕಾಂತರಾಜು ರವರ ಮಾನವೀಯ ಕಾರ್ಯಕ್ಕೆ ಕೈಜೋಡಿಸುವ ನಿಟ್ಟಿನಲ್ಲಿ ದಿ.ಎಂ.ಕೆ.ಮೋಹನ್ ರವರ ಸವಿ ನೆನಪಿನಲ್ಲಿ 50ಸಾವಿರ ರೂ ದೇಣಿಗೆ ನೀಡಲಾಯಿತು.ಕಳೆದ 15 ದಿನಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಒಬ್ಬ ಮಾನಸಿಕ ಅಸ್ವಸ್ಥನನ್ನು ಟ್ರ್ಸ್ಟ್ ಗೆ ಕರೆದೊಯ್ದು ಹಾರೈಕೆ,ಚಿಕಿತ್ಸೆ ನೀಡಿ ನಂತರ ಆತನ ಮೂಲಸ್ಥಾನ ಒಡಿಸ್ಸಾಗೆ ಬಿಟ್ಟಿದ್ದ ಸುದ್ಧಿ ಭಿತ್ತರವಾಗಿತ್ತು.
ಈ ವೇಳೆ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್,ಎಂ ಕೆ ಮೋಹನ್ ರವರ ಪುತ್ರ ಶ್ರೀ ಶಿವಸಾಗರ್,ಗ್ರೀನ್ ಡಾಟ್ ಟ್ರಸ್ಟ್ ನ ಡಾ.ಸಿ.ಕೆ.ಕಾಂತರಾಜು,ಮಾಜಿ ಪಾಲಿಕೆ ಸದಸ್ಯರಾದ ಎಂ ಸುನೀಲ್,ಗುಣಶೇಖರ್,ಅಶೋಕಪುರಂ ಮಧು,ಫಾರುಖ್,ಚೇತನ್,ಮೊಗಣ್ಣಾಚಾರ್,ಆನಂದ್,ಗುರು,ಹೃತಿಕ್,ರಾಮು,ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.