ಮಹದೇವ / ನಂದಿನಿ ಮೈಸೂರು
*ತಿ.ನರಸೀಪುರ*
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ 63ನೇ ವರ್ಷದ ಹುಟ್ಟುಹಬ್ಬವನ್ನು ವರುಣಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ತಿ.ನರಸೀಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸುವ ಮೂಲಕ ಅರ್ಥ ಪೂರ್ಣ ಅರ್ಥಪೂರ್ಣವಾಗಿ ಆಚರಿಸಿದರು.
ಪಟ್ಟಣದ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಜೆಡಿಎಸ್ ಕಾರ್ಯ ಕರ್ತರು ಹಾಗು ಹೆಚ್ ಡಿಕೆ ಅಬಿಮಾನಿಗಳು ಕುಮಾರಸ್ವಾಮಿಯವರಿಗೆ ಹೆಚ್ಚಿನ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಆನಂತರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಹೊರ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.
ಈ ವೇಳೆ ಮಾತನಾಡಿದ ಪಕ್ಷದ ಹಿರಿಯ ಮುಖಂಡರುಗಳು ರಾಜ್ಯದ ಮುಖ್ಯಮಂತ್ರಿ ಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ
ಯವರು ಬಡವರು ಮತ್ತು ದೀನದಲಿತರ ಆಶಾಕಿರಣವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯದ ಅಭಿವೃದಿಗಾಗಿ ಅನೇಕ ಹೊಸಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಈ ರಾಜ್ಯವನ್ನು ಅಭಿವೃದ್ದಿಪಥದತ್ತ ಕೊಂಡೊಯ್ದಿದ್ದರು.ರಾಜ್ಯದ ಬಡಜನತೆಯ ಆಶಾಕಿರಣವಾಗಿದ್ದ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಯಾಗಬೇಕು.ಮತ್ತೆ ಗ್ರಾಮ ವಾಸ್ತವ್ಯದಂತಹ ಜನಪ್ರಿಯ ಕಾರ್ಯಕ್ರಮಗಳು,ಸಾಲ ಮನ್ನಾದಂತಹ ಜನೋಪಯೋಗಿ ಕಾರ್ಯ ಕ್ರಮಗಳು ಜಾರಿಯಾಗಬೇಕು.ಆಮೂಲಕ ಬಡ ಜನತೆ ನೆಮ್ಮದಿಯ ಜೀವನ ನಡೆಸುವಂತಾಗಬೇಕು ಎಂದರು.ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯವೈಖರಿಯನ್ನು ಗಮನಿಸಿರುವ ರಾಜ್ಯದ ಜನತೆ ಮತ್ತೆ ಜೆಡಿಎಸ್ ಪಕ್ಷಕ್ಕೆ ಅವಕಾಶ ನೀಡಲಿದ್ದು,ಪಕ್ಷವು ಮೂರಂಕಿ ಸ್ಥಾನ ಪಡೆದು ರಾಜ್ಯದ ಗದ್ದುಗೆ ಹಿಡಿಯಲಿದ್ದು,ಮುಖ್ಯ ಮಂತ್ರಿಯಾಗಿ ಕುಮಾರ ಸ್ವಾಮಿ ಯವರೇ ರಾಜ್ಯವನ್ನು ಮುನ್ನಡೆಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ವರುಣಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ತಾಯೂರು ಪ್ರಕಾಶ್,ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ,ಜಿ.ಪಂ.ಮಾಜಿ ಸದಸ್ಯ ಜಯಪಾಲ್ ಭರಣಿ, ಕೆಂಪಯ್ಯನಹುಂಡಿ ಚನ್ನೇಗೌಡ,ಎಂ.ಶಿವಪ್ರಸಾದ್, ಆರ್.ಬಸವರಾಜು, ಯಡದೊರೆ ಸತೀಶ್,ಅಬೀದ್ ಹುಸೇನ್,ಆಲಗೂಡು ಸತೀಶ್, ಹುನಗನ ಹಳ್ಳಿ ಚಂದ್ರು,ಮರಿದೇವೇಗೌಡ,ಹಿಟ್ಟುವಳ್ಳಿ ಪ್ರಭು,ವೆಂಕಟೇಶ್ ಪಾವು,ವೀರೇಂದ್ರ, ಮೂಗೂರು ಬಲ್ಲಯ್ಯ,ಬೈರಾಪುರ ಎಂ.ರಮೇಶ್, ತಿರುಮಕೂಡಲು ರವಿ,ಇಂಡವಾಳು ಸತೀಶ್,ಶಂಕರ, ಮಲ್ಲಿಕಾ,ಕೃಷ್ಣಾಪುರ ರಾಮಣ್ಣ,ಮರಿಸ್ವಾಮಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.