ಮೈಸೂರು.22 ಸೆಪ್ಟೆಂಬರ್ 2022
ನಂದಿನಿ ಮೈಸೂರು
ಸೆಪ್ಟೆಂಬರ್ 28 ರಂದು ಗ್ರಾಹಕರಿಗೆ ತಕ್ಕಂತೆ ರುಚಿ ರುಚಿಯಾದ ಊಟ ತಿಂಡಿ ಉಣ ಬಡಿಸಲು ಹೋಟೆಲ್ ಕರುನಾಡು ಎಂಬ ಶೀರ್ಷಿಕೆ ಯಲ್ಲಿ ಪ್ರಾರಂಭವಾಗುತ್ತಿದೆ ಎಂದು ತಗಡೂರು ಗೌರಿ ಶಂಕರ್ ಮಾಹಿತಿ ನೀಡಿದರು.
ಮೈಸೂರಿನ ಮಹಾರಾಜ ಹೋಟೆಲ್ ನ ಒಂದು ಭಾಗದಲ್ಲಿ ಆರಂಭವಾಗಿರುವ ಹೋಟೆಲ್ ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್ ನಾಗೇಂದ್ರ,ಮಾಜಿ ಸಚಿವ ವಿಜಯಶಂಕರ್ ಸೇರಿದಂತೆ ಗಣ್ಯರು ಚಾಲನೆ ನೀಡಲಿದ್ದಾರೆ .ನಾನು ಸಮಾಜ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದೆ ಇದೀಗ ಹೋಟೆಲ್ ಉದ್ಯಮಕ್ಕೆ ಹೆಜ್ಜೆ ಹಾಕಿದ್ದೇನೆ .ನನ್ನ ಮಗನ ಸಹಾಯ, ಕುಟುಂಬದವರ ಸಹಾಯ, ನುರಿತ ಉದ್ಯಮಿಗಳ ಸಲಹೆ ಮೇರೆಗೆ ಕನ್ನಡಿಗನಾಗಿ ಕರುನಾಡು ಎಂಬ ಶೀರ್ಷಿಕೆ ಯಲ್ಲಿ ಹೋಟೆಲ್ ಆರಂಬಿಸಿದ್ದೇನೆ .ಇತರೆ ಹೋಟೆಲ್ ಗಳಿಗಿಂತ ಜನ ಸಾಮನ್ಯರಿಗೂ ತಲುಪುವಂತೆ ಕಡಿಮೆ ದರದಲ್ಲಿ ತಿಂಡಿ ದೊರೆಯುತ್ತದೆ.ನುರಿತ ಬಾಣಸಿಗರು ಹಾಗೂ ಸಿಬ್ಬಂದಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದ್ದಾರೆ. ಹಳೆ ಆಹಾರ ಪದ್ದತಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ.ಗ್ರಾಹಕರು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದರು.
ಇದೇ ಸಂಧರ್ಭದಲ್ಲಿ ಜಗದೀಶ್ , ಪುನೀತ್, ಗೋವರ್ಧನ್, ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.