ಮೈಸೂರು:13 ಸೆಪ್ಟೆಂಬರ್ 2022
ನಂದಿನಿ ಮೈಸೂರು
ಥಿಯರಮ್ ಇಂಡಿಯಾ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತದ್ದು ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಯೂಟರ್ ವಿತರಣೆ ಮಾಡಿದೆ.
ಥಿಯರಮ್ ಇಂಡಿಯಾ, ತನ್ನ CSR ಅಭಿಯಾನದ ಭಾಗವಾಗಿ ಮೈಸೂರಿನ ವನಿತಾ ಸದನ ಸಂಸ್ಥೆಗೆ ಸುಮಾರು 15 ಕಂಪ್ಯೂಟರ್ ಗಳನ್ನು ವಿತರಿಸಿದೆ.
ಥಿಯರಮ್ ನ ಸಂಸ್ಥಾಪಕ ಮತ್ತು ಸಿಇಒ ಜಯ್ ಕುಲಕರ್ಣಿ ಮಾತನಾಡಿ ಥಿಯರಮ್ ಇಂಡಿಯಾ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತದ್ದು ವನಿತಾ ಸದನ ಶಾಲೆಗೆ ಉಚಿತವಾಗಿ 15 ಕಂಪ್ಯೂಟರ್ ವಿತರಿಸಿದ್ದೇವೆ ಎಂದರು.
ಭಾರತದ ವಿಪಿ ಆನಂದ್ ಸುಬ್ರಮಣಿಯನ್ ಮತ್ತು ಥಿಯರಮ್ ಸ್ವಯಂಸೇವಕರು “ಮಿತ್ರ್ ತಂಡ” ಇವರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಜೊತೆ ಈ ಕಾರ್ಯಕ್ರಮದ ಕುರಿತು ಸಂವಾದ ನಡೆಸಿದರು.