ಮೈಸೂರು:22 ಜೂನ್ 2022
ನಂದಿನಿ ಮೈಸೂರು
ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಇದ್ದರೆ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಎಂಜಿನಿಯರ್ ಬಿ.ಸಿ ನಾಗರಾಜು ಹೇಳಿದರು.
ದಟ್ಟಗಳ್ಳಿಯಲ್ಲಿರುವ ತಮ್ಮ ವಿ.ಬಿ ಇಂಜಿನಿಯರ್ಸ್ ವತಿಯಿಂದ ಶಿಕ್ಷಕರು ಮತ್ತು ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು, ಯಾವುದೇ ಕೆಲಸ ಮಾಡುವಾಗ ನಿಖರ ಗುರಿ ಇಟ್ಟುಕೊಂಡು ಆತ್ಮಸ್ಥೈರ್ಯ ಕಳೆದುಕೊಳ್ಳದೆ ತಾಳ್ಮೆಯಿಂದ ಮುನ್ನುಗ್ಗಿದಾಗ ಮಾತ್ರ ಯಶಸ್ಸು ಗಳಿಸಬಹುದು, ನಾವು ಗಳಿಸಿದ ಸಂಪಾದನೆಯಲ್ಲಿ ಸಾಧಕರನ್ನು ಗುರುತಿಸಿ ತಮ್ಮ ಕೈಲಾದ ಸಹಾಯ ಮಾಡಿದಾಗ ಅವರ ಕೆಲಸಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಗುತ್ತದೆ ಎಂದರು.
ಈ ಸಂದರ್ಭ ಬಿ.ಸಿ ನಾಗರಾಜ್ ಅವರ ಪತ್ನಿ ಪ್ರಜಾಪಿತ ಸೊಸೈಟಿ ಸಿಇಒ ಸವಿತಾ ನಾಗರಾಜ್, ನಿವೃತ್ತ ಸೈನಿಕ ಕುಮಾರ್ ಇದ್ದರು.