ಮೈಸೂರು:14 ಜೂನ್ 2022
ನಂದಿನಿ ಮೈಸೂರು
ಜೂನ್ 21 ರಂದು ಪ್ರಧಾನಿ ನರೇಂದ್ರ ಮೋದಿರವರು ಯೋಗ ಮಾಡುವ ವೇದಿಕೆಯಲ್ಲಿ ಮೈಸೂರು ಮಹಾರಾಜರಿಗೆ ಅವಕಾಶ ನೀಡಿಲ್ಲದಿರೋದು ಬೇಸರದ ಸಂಗತಿ ಎಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೈಸೂರಿನ ಅರಮನೆ ಆವರಣದಲ್ಲಿ ಜೂನ್ 21 ರಂದು ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಮೋದಿ ಆಗಮಿಸಲಿದ್ದಾರೆ.ಯೋಗ ನಡೆಯುವ ವೇದಿಕೆಯಲ್ಲಿ
ಮೋದಿ ಸೇರಿ 5 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಮೈಸೂರಿನ ಮಹಾರಾಜರಾದ ಯದುವೀರ್ ರವರಿಗೆ ಅವಕಾಶ ನೀಡಿದಿರುವುದು ಮೈಸೂರಿಗೆ ಅವಮಾನವಾದಂತೆ.ಭಾರತಕ್ಕೆ ಹೇಗೆ ಮೋದಿ ಪ್ರಧಾನಿಯೋ ಮೈಸೂರಿಗೆ ಯದುವೀರ್ ರವರೇ ಪ್ರಧಾನಿಗಳು ಎಂದರು.