ಮೈಸೂರು:29 ಮೇ 2022
ನಂದಿನಿ ಮೈಸೂರು
*ದೇಶದಲ್ಲೇ ಮೊದಲ ಬಾರಿಗೆ ರೋಬೋಟ್ ಮೂಲಕ ಮಕ್ಕಳಿಗೆ ಶಿಕ್ಷಣ: ವಿನೂತನ ಪ್ರಯೋಗಕ್ಕೆ ಮುಂದಾದ ಮೈಸೂರಿನ ಶಾಲೆ*
*ಮೈಸೂರಿನ ರೋಬೋಟ್ ಪ್ರಯೋಗಾಲಯಕ್ಕೆ ಚಾಲನೆ ನೀಡಿದ ಶಿಕ್ಷಣ ಸಚಿವ ಬಿ. ಸಿ ನಾಗೇಶ್*
ದೇಶದಲ್ಲೇ ಮೊದಲ ಬಾರಿಗೆ ರೋಬೋಟ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವ ವಿನೂತನ ಪ್ರಯೋಗಕ್ಕೆ ಸಂಸ್ಕೃತಿಕ ನಗರಿ ಮೈಸೂರಿನ ಶಾಂತಲ ವಿದ್ಯಾ ಪೀಠ ಶಾಲೆ ಮುಂದಾಗಿದೆ ನೂತನವಾಗಿ ನಿರ್ಮಿಸಿರುವ ರೋಬೋಟ್ ಪ್ರಯೋಗಳಯವನ್ನು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ರವರು ಉದ್ಘಾಟನೆ ಮಾಡಿ ರೋಬೋಟ್ ಯಂತ್ರಗಳ ಬಗ್ಗೆ ಮಾಹಿತಿ ಪಡೆದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಮಕ್ಕಳಿಗೆ ಉನ್ನತ ಶಿಕ್ಷಣ ಜ್ಞಾನಾರ್ಜನೆ ಹೆಚ್ಚಿಸುವ ಉದ್ದೇಶ ದಿಂದ ಶಿಕ್ಷಣ ದಲ್ಲಿ ಹಲವಾರು ವಿವಿಧ ಹೊಸ ಹೊಸ ಅವಿಸ್ಕಾರ ಬದಲಾವಣೆಗಳನ್ನು ರೂಪಿಸಲಾಗುತ್ತಿದೆ.
ಈ ರೀತಿಯ ಪ್ರಯೋಗಾಲಯದ ಮಕ್ಕಳಲ್ಲಿ ಬೌದಿಕ ಮಟ್ಟ ಹೆಚ್ಚಾಗುತ್ತದೆ ಸರ್ಕಾರಿ ಶಾಲೆಗಳಲ್ಲಿ ಈ ರೀತಿಯ ಪ್ರಯೋಗಾಲಯ ಮಾಡಲಾಗಿದೆ ಕೇಂದ್ರ ಸರ್ಕಾರದಿಂದ 20 ಲಕ್ಷ ಅನುದಾನ ನೀಡಲಾಗಿದೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಈ ರೀತಿಯ ಪ್ರಯೋಗಾಲಯ ನಿರ್ಮಿಸಲಾಗುವುದು ಎಂದು ಶಾಂತಲ ವಿದ್ಯಾ ಪೀಠ ಕಾರ್ಯದರ್ಶಿ ಸಂತೋಷ್ ತಿಳಿಸಿದರು.
ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ನಮ್ಮ ಶಾಲೆ, ಮಕ್ಕಳಲ್ಲಿ ಕಲಿಕೆ ಗುಣಮಟ್ಟ ಹೆಚ್ಚಿಸಲು ಎಜುಕೇಷನ್ ರೋಬೋಟ್ ಮೊರೆ ಹೋಗಿದ್ದು, ಪೂರ್ವ ಪ್ರಾಥಮಿಕ ಶಿಕ್ಷಣದಿಂದ 9ನೇ ತರಗತಿವರೆಗೆ ರೋಬೋಟ್ ಭೋದನೆ ಮಾಡಲಿದೆ. ಜಪಾನ್ ನಿಂದ ಎರಡು ರೋಬೋಟ್ ತರಿಸಿಕೊಳ್ಳಲಾಗಿದ್ದು, ಒಂದೊಂದು ರೋಬೋಟ್ ಗೆ ತಲಾ ಎರಡು ಲಕ್ಷ ರೂಪಾಯಿ ಖರ್ಚಾಗಿದೆ.
ಈ ರೋಬೋಟ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಈ ಮೂಲಕ ಮೈಸೂರಿನ ಶಾರದಾ ವಿದ್ಯಾ ಪೀಠ ಶಾಲೆ ದೇಶದಲ್ಲೇ ಮೊದಲ ರೋಬೋಟಿಕ್ ಲ್ಯಾಬ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ರೋಬೋಟ್ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಶಾರದಾ ವಿದ್ಯಾ ಪೀಠ ಶಾಲೆ ಮುಂದಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಂತಲ ವಿದ್ಯಾ ಪೀಠ ಶಾಲಾ ವಿದ್ಯಾರ್ಥಿಗಳಾದ ಸುವಂತ್ ಸಂಪ್ರೀತ್ , ಪ್ರೀತಿ ವೈ. ರೋಬೋಟ್ ಲ್ಯಾಬ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.