ನಂಜನಗೂಡು:26 ಏಪ್ರಿಲ್ 2022
ನಂದಿನಿ ಮೈಸೂರು
ಕಣ್ಣಾ ಮುಚ್ಚಾಲೆ ಆಟವಾಡುವಾಗ ಐಸ್ವಕ್ರೀಂ ಬಾಕ್ಸ್ ನಲ್ಲಿ ಸಿಲುಕಿದ ಇಬ್ಬರು ಬಾಲಕಿಯರ ಧಾರುಣವಾಗಿ ಸಾವನ್ನಪ್ಪಿದ ಘಟನೆ ನಂಜನಗೂಡಿನ ಮಸಗೆ ಗ್ರಾಮದಲ್ಲಿ ನಡೆದಿದೆ.
ಕಣ್ಣಾ ಮುಚ್ಚಾಲೆ ಆಟ ಆಡುವಾಗ ಐಸ್ ಕ್ರೀಮ್ ಬಾಕ್ಸ್ ನಲ್ಲಿ ಬಚ್ಚಿಟ್ಟುಕೊಂಡ ಬೇಳೆ ಬಾಗಿಲು ಲಾಕ್ ಆಗಿದೆ. ಬಾಗಿಲು ತೆರೆಯಲಾಗದೆ ಉಸಿರು ಗಟ್ಟಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ.
ಮಸಗೆ ಗ್ರಾಮದ ನಾಗರಾಜು ಮತ್ತು ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ (12) ಹಾಗೂ
ರಾಜನಾಯಕ ಮತ್ತು ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತ ಬಾಲಕಿಯರು.
ತಗಡೂರು ಗ್ರಾಮದ ಹನುಮಂತನಾಯಕ ಎಂಬುವರಿಗೆ ಸೇರಿರುವ ಯಮಸ್ವರೂಪಿ ಐಸ್ ಕ್ರೀಮ್ ಬಾಕ್ಸ್.
ಬೆಳಿಗ್ಗೆ 12 ಗಂಟೆ ಸಮಯದಲ್ಲಿ ಕಣ್ಣಾಮುಚ್ಚಾಲೆ ಆಟ ಆಡುವಾಗ ಐಸ್ ಕ್ರೀಮ್ ಬಾಕ್ಸ್ ಒಳಗೆ ಬಚ್ಚಿಟ್ಟುಕೊಂಡಿದ್ದಾರೆ.
ಸುಮಾರು ಅರ್ಧ ಗಂಟೆ ಸಮಯ ಕಳೆದರೂ ಹೊರ ಬರದ ಕಾರಣ ಬಾಗಿಲು ತೆರೆದು ನೋಡಿದಾಗ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ. ಬಾಲಕಿಯರು
ಈ ಪ್ರಕರಣದ ವಿಚಾರವಾಗಿ ಯಾವುದೇ ದೂರು ದಾಖಲಾಗಿಲ್ಲ.
ನಂಜನಗೂಡು ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿರುವ ಮಸಗೆ ಗ್ರಾಮ.
ಯಾವುದೇ ದೂರು ದಾಖಲಿಸದೆ ಮೃತ ಬಾಲಕಿಯರಿಬ್ಬರ ಶವ ಸಂಸ್ಕಾರ ನಡೆಸಲಾಗಿದೆ.