ನಂದಿನಿ ಮೈಸೂರು
ಎಚ್ ಡಿ ಕೋಟೆ ಪಟ್ಟಣದಲ್ಲಿರುವ ಮುಸ್ಲಿಂ ಬ್ಲಾಕ್ ಹಾಗೂ ಇತರ ಕಡೆ ರಸ್ತೆಯಲ್ಲಿ ಗುಂಡಿಗಳಿದ್ದು ಗುಂಡಿಗಳಿಗೆ ಮಣ್ಣು ತುಂಬಿಸುವ ಕಾರ್ಯ ಜರುಗಿತು.
ಗುಂಡಿಬಿದ್ದಿರುವ ರಸ್ತೆಗಳು ಅಪಾಯದ ಅಂಚಿನಲ್ಲಿದ್ದು ತಿರುಗಾಡುವ ಸಾರ್ವಜನಿಕರಿಗೆ ವಾಹನ ಸವಾರರಿಗೂ ತುಂಬಾ ತೊಂದರೆಯಾಗುತ್ತಿತ್ತು. ಸಾರ್ವಜನಿಕರ ಒತ್ತಾಯ ಮೇರೆಗೆ ಎಚ್ ಡಿ ಕೋಟೆ ರಕ್ಷಣಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಿಕಾ ದೊರೆಸ್ವಾಮಿ ಎ ಎಸ್ ಐ ರವರು ರಸ್ತೆಯಲ್ಲಿರುವ ಗುಂಡಿಗಳಿಗೆ ಮಣ್ಣನ್ನು ಮುಚ್ಚಿಸಿದ್ದಾರೆ.
ರಸ್ತೆ ಎಲ್ಲಾ ಗುಂಡಿ ಮಯವಾಗಿತ್ತು.ವಾಹನ ಸವಾರರಿಗೆ, ಸಾರ್ವಜನಿಕರಿಗೆ ಮುಂದಾಗುವ ಸಾವು ನೋವು ಗಳು ತಪ್ಪಿದೆ. ಅಪಾಯದ ಅಂಚಿನಿಂದ ಬಚಾವ್ ಆದಂತೆ ಆಗಿದೆ ಎಂದು ಅಲ್ಲಿನ ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.