ಮೈಸೂರು:6 ಏಪ್ರಿಲ್ 2022
ನಂದಿನಿ ಮೈಸೂರು
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪರಮಪೂಜ್ಯ ಶ್ರೀ ಶ್ರೀ ಸುಬುದೇಂದ್ರ ತೀರ್ಥ ಮಹಾಸ್ವಾಮಿ ರವರು ಇಂದು ನಂಜನಗೂಡಿಗೆ ಆಗಮಿಸಿದ್ದು ಅವರನ್ನು ಮೈಸೂರಿನ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು ಮೈಸೂರಿನ ಮುಖ್ಯ ದ್ವಾರದ ಬಳಿ ಅವರ ಅಪಾರ ಗುರು ಬಂಧುಗಳೊಂದಿಗೆ ಸ್ವಾಗತಿಸಿ ಅವರೊಂದಿಗೆ ನಂಜನಗೂಡಿಗೆ ಭೇಟಿ ನೀಡಿ ಫಲತಾಂಬೂಲ ಸಮರ್ಪಣೆ ಮಾಡಿ ಆಶೀರ್ವಾದ ಪಡೆದರು. ಶ್ರೀಗಳು ನೆರೆದಿದ್ದ ಭಕ್ತಾದಿಗಳಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ನಂತರ ಶ್ರೀ ನಂಜುಂಡೇಶ್ವರನ ದರ್ಶನ ಪಡೆದರು.