ಮೈಸೂರು:27 ಮಾರ್ಚ್ 2022
ನಂದಿನಿ ಮೈಸೂರು
ಹಿಸ್ಟರಿಯಲ್ಲಿರೋ ಎಲ್ಲಾ ಹೀರೋಗಳು ವಿಲ್ಲನ್ ಗಳೇ ಎಂಬ ಟ್ಯಾಗ್ ಲೈನ್ ಹೊಂದಿರುವ
ಶ್ರೀ ಕಲ್ಲೂರು ಆಂಜನೇಯ ಮೂವೀಸ್ ಬ್ಯಾನರ್ ನಡಿ ನಿರ್ಮಾಪಕ ವಿಜೇಂದ್ರ ಬಿ.ಎ ರವರ ಚೊಚ್ಚಲ ಚಿತ್ರದ ಕೌಟಿಲ್ಯ ಸಿನಿಮಾದ ಹಾಡುಗಳು ಬಿಡುಗಡೆಗೊಂಡಿತು.
ಮೈಸೂರು ವಿಶ್ವವಿದ್ಯಾನಿಲಯದ ಲಲಿತಾ ಕಲೆ ಕಾಲೇಜು ಸಭಾಂಗಣದಲ್ಲಿ
ಟಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್ ಕೌಟಿಲ್ಯ
ಸಿನಿಮಾ ಹಾಡು ಬಿಡುಗಡೆ ಮಾಡಿ ಚಿತ್ರ ತೆರೆಯ ಮೇಲೆ ಅದ್ಬುತ ಯಶಸ್ವಿ ಕಾಣಲಿ ಎಂದು ಶುಭ ಹಾರೈಸಿದರು.
ರಾಜಕೀಯದವರ ಮನೆಯ ಗೋಡೆಯಲ್ಲಿ ಬ್ಲ್ಯಾಕ್ ಮನಿ ಇಡಲು ಪ್ಲಾನ್ ಕೊಡೋ ಆರ್ಕಿಟೆಕ್ಟ್ ಇಂಜಿನಿಯರ್ ಅವರು ನಮ್ಮ ದೇಶವನ್ನ ಹೇಗೆ ರೂಪಿಸಬಹುದು ಅನ್ನೋ ಸಾರಾಂಶವನ್ನು ಹೊಂದಿರೋ ಕಥೆಯನ್ನು ಎಣೆದಿರೋ ಸಿನಿಮಾ ನಿರ್ದೇಶಕ ಪ್ರಭಾಕರ್ ಶೇರ್ ಖಾನೆಯವರು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ .
ಕೌಟಿಲ್ಯ ನ ಫಸ್ಟ್ ಲುಕ್ ಜನವರಿ ೧೫ ರಂದು
ರಿಲೀಸ್ ಆಗಿದ್ದು ಜೋರಾಗಿಯೇ ಸದ್ದು ಮಾಡುತ್ತಿದೆ.
ಆಚಾರ ವಿಲ್ಲದ ನಾಲಿಗೆ ಹಾಡನ್ನ ಗೌಸ್ ಪೀರ್ ಅವರು ಬರೆದಿದ್ದು, ಅನಿರುಧ್ ಶಾಸ್ತ್ರೀ ಯವರು ಹಾಡಿದ್ದಾರೆ.ಇಂದು ಬಿಡುಗಡೆಯಾದ
ಫಿಕ್ಸ್ ಆದ್ರೆ ಲವ್ವಲ್ಲಿ ಹಾಡು ಅರ್ಜುನ್ ರಮೇಶ ಅವರು ಬರೆದಿದ್ದು ನವೀನ್ ಸಜ್ಜು ಹಾಡಿದ್ದಾರೆ.
ಕೌಟಿಲ್ಯ ಚಿತ್ರದ ನಿರ್ಮಾಪಕ ವಿಜೇಂದ್ರ ರವರು ಈ ಸಿನಿಮಾ ಮಾಡೋಕೆ ತುಂಬ ಶ್ರಮಪಟ್ಟಿದ್ದಾರೆ.ಅವರ ಪತ್ನಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಸಹ ಎಷ್ಟೇ ಸಮಸ್ಯೆ, ಕಷ್ಟ ಆದರೂ ಸಿನಿಮಾ ಪೂರ್ಣ ಮಾಡಿದ್ದಾರೆ. ಕೌಟಿಲ್ಯ ಸಿನಿಮಾ ಯಶಸ್ವಿಯಾಗುವಂತೆ ಮಾಡಿ ಹೊಸ ಕಲಾವಿದರನ್ನು ಪ್ರೋತ್ಸಾಹಿಸಿ ಕನ್ನಡ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ ಎಂದು ಅರ್ಜುನ್ ರಮೇಶ್ ಮನವಿ ಮಾಡಿದರು.
ನಿರ್ಮಾಪಕ ವಿಜೇಂದ್ರ,
ನಿರ್ದೇಶಕ ಪ್ರಭಾಕರ್ ಶೇರ್ ಖಾನ ,ನಟಿ ಪ್ರಿಯಾಂಕ ಚಿಂಚೋಳ್ಳಿ ಸಿನಿಮಾದ ಬಗ್ಗೆ ಮನಬಿಚ್ಚಿ ಮಾತನಾಡಿದರು.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು