ಮೈಸೂರು:4 ಮಾರ್ಚ್ 2022
ನಂದಿನಿ ಮೈಸೂರು
ಬಹು ನಿರೀಕ್ಷಿತ ಬೊಮ್ಮಾಯಿರವರ ಚೊಚ್ಚಲ ಬಜೆಟ್ ಜನರ ಪಾಲಿಗೆ ಹುಸಿಯಾಗಿದೆ ಎಂದು ವಕೀಲರಾದ ಪುನೀತ್ .ಎನ್ ಬೇಸರ ವ್ಯಕ್ತಪಡಿಸಿದರು.
ಅಭಿವೃದ್ಧಿ ಪದಕ್ಕೆ ಮೂಲ ತತ್ವವಾದ ಶಿಕ್ಷಣ ಆರೋಗ್ಯ ನಿರುದ್ಯೋಗ ನಿವಾರಣೆಗೆ ಈ ಸಾಲಿನ ಬಜೆಟ್ ಒತ್ತು ನೀಡಿಲ್ಲ. ಕಳೆದ ವರ್ಷಕ್ಕಿಂತಲು ಈ ವರ್ಷದ ಬಜೆಟ್ ವೆಚ್ಚ ಕಡಿಮೆಯಾಗಿದೆ. ಜನ ಕಲ್ಯಾಣ ಇಲಾಖೆಗೆ ಇಡಬೇಕಿರುವ ಮೊತ್ತದಲ್ಲೂ ಕಡಿವಾಣ ಮಾಡಿದ್ದಾರೆ .
ಶಿಕ್ಷಣವನ್ನು ಇನ್ನಷ್ಟು ಖಾಸಗೀಕರಣ ಮತ್ತು ದುಬಾರಿ ಮಾಡಿ ಬಡವರ ಪಾಲಿಗೆ ಸಿಗದಂತೆ ಮಾಡಿದ್ದಾರೆ, ಇದೇ ರೀತಿ ಅಭಿವೃದ್ಧಿಯ ಖಾಲಿ ಹಾಳೆ ಬಜೆಟ್ ಮಂಡಿಸುತ್ತಾ ಹೋದರೆ ಬಜೆಟ್ ಪದಕ್ಕೆ ಅರ್ಥವನ್ನು ಕಳಚಿದಂತಾಗುತ್ತದೆ ಎಂದರು.