ಮೈಸೂರು:28 ಫೆಬ್ರವರಿ 2022
ನಂದಿನಿ ಮೈಸೂರು
ಕೆ ಆರ್ ಎಂ ಫೌಂಡೇಶನ್ ವತಿಯಿಂದ ಭಾನುವಾರ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನಬಳಗ ಶಾಲೆ ಆವರಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆದ
ದೇಸಿ ಆಟದ ಸ್ಪರ್ಧೆ ವಿಜೇತರಿಗೆ ಇಂದು ಶಾಲೆಯ ಆವರಣದಲ್ಲಿ 100ಕ್ಕೂ ಹೆಚ್ಚು ಹಿರಿಯರು ಕಿರಿಯರು ಅಲಗುಳಿ ಮನೆ, ಚೌಕಾಬಾರ, ಕೆರೆ ದಡ, ಕುಂಟೆಬಿಲ್ಲೆ, ಹಾವು ಏಣಿ ಆಟ, ಚದುರಂಗ, ಕೇರಂ, ಹಗ್ಗ ಜಗ್ಗಾಟ ಸೇರಿದಂತೆ ಹತ್ತಾರು ಸ್ಪರ್ಧೆ ಗೆ ಭಾಗವಹಿಸಿದ್ದರು.
ವಿವಿಧ ಭಾಗ ಹಾಗೂ ವಿವಿಧ ವಯೋಮಿತಿ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಪಾರಿತೋಷಕ ಫಲಕ ಹಾಗೂ ಬಹುಮಾನ ಪತ್ರ ನೀಡಲಾಯಿತು ಆನಂತರ ಸ್ಪರ್ಧಿಸಿದ ಎಲ್ಲ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ಹಾಗೂ ಅಭಿನಂದನಾ ಪತ್ರ ವಿತರಿಸಿದ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ರವರು
ನಂತರ ಮಾತನಾಡಿದ ಅವರು
ಕೈಗೊಂದು ಮೊಬೈಲ್ ಸಿಗುತ್ತಲೇ ಫೆಸ್ಬುಕ್, ವಾಟ್ಸಾಪ್, ಲೂಡೋ ಗೇಮ್, ಪಬ್ಜಿ ಅಂತೆಲ್ಲಾ ಕೂತಲ್ಲೆ ನಾನಾ ರೋಗಗಳನ್ನ ಮೈಗಂಟಿಸಿಕೊಂಡು ನರಳಾಡುವ ಈ ಕಾಲದಲ್ಲಿ ಹಳ್ಳಿ ಆಟಗಳ ಮೂಲಕ ದೇಹ ಮನಸ್ಸಿಗೆ ಮುದ ನೀಡುವ ಗ್ರಾಮೀಣ ಸೊಗಡಿನ ಆಟಗಳನ್ನ ಮುನ್ನೆಲೆಗೆ ತರಲೆಂದು ನಡೆಯುತ್ತಿರುವ ಇಂತಹ ಪ್ರಯತ್ನಕ್ಕೆ ಹಿರಿಯರಿಂದ ಕಿರಿಯರು ಉತ್ಸಾಹದಿಂದ ಸ್ಪರ್ಧೆಗೆ ಭಾಗಿಯಾಗಿರುವುದು ನಿಜಕ್ಕೂ
ಸಂತೋಷ ತಂದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜೇಶ ,ಅಮ್ರಿನ್ ತಾಜ್ ,ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣವತಿ ಎಂ ಜಿ,
ವಿನಯ್ ಕುಮಾರ್ ,ರಾಕೇಶ್ ಕುಂಚಿಟಿಗ ,ಎಸ್ ಎನ್ ರಾಜೇಶ್ ,ವಿನೂತನ ,ಹಾಗೂ ಇನ್ನಿತರರು ಹಾಜರಿದ್ದರು.