ನಂಜನಗೂಡು:18 ಜನವರಿ 2022
ನಂದಿನಿ ಮೈಸೂರು
ನಂಜನಗೂಡು ತಾಲೂಕು ಕಳಲೆ ಗ್ರಾಮದ ಕಾಲುವೆ ಏರಿ ರಸ್ತೆ ಮೇಲೆ ಮಹಿಳೆ ಶವ ಪತ್ತೆಯಾಗಿದ್ದು ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಕಳಲೆ ಗ್ರಾಮದ ಸಿದ್ದಮ್ಮ(45)ಮೃತ ದುರ್ದೈವಿ.ಜನವರಿ 16 ರಂದು ಮನೆ ಬಿಟ್ಟಿದ್ದ ಸಿದ್ದಮ್ಮ ಹಿಂದಿರುಗಿಲ್ಲ.ತಾಯಿ ನಾಗಮ್ಮ ಗೆ ಈ ಮಾಹಿತಿ ತಲುಪಿದ್ದು ಅಳಿಯ ನಾಗರಾಜ್ ರನ್ನ ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆತಿಲ್ಲ.ಜನವರಿ 17 ರಂದು ಸಿದ್ದಮ್ಮ ಮೃತದೇಹ ಕಾಲುವೆ ಏರಿ ಮೇಲೆ ಕಂಡುಬಂದಿದೆ.ಸಿದ್ದಮ್ಮ ಧರಿಸಿದ್ದ ಬಟ್ಟೆಗಳು ಅಸ್ತವ್ಯಸ್ತವಾಗಿ ಕಂಡು ಬಂದಿದೆ.ಈ ಹಿನ್ನಲೆ ಯಾರೋ ದುಷ್ಕರ್ಮಿಗಳು ಸಿದ್ದಮ್ಮಳನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆಂದು ತಾಯಿ ನಾಗಮ್ಮ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ಆರೋಪಿಗಳಿಗೆ ಬಲೆ ಬೀಸಿದ್ದಾರೆ .