ಸಾಹಿತ್ಯ ಯಜಮಾನ್ ( ಹಿರಿಯ ಪತ್ರಕರ್ತರು)
ಸಾಮಾನ್ಯವಾಗಿ ರಕ್ತದಾನ,ದೇಹದಾನ,ಅಂಗಾಂಗ ದಾನ ಮಾಡೋದುಂಟು ಆದರೆ ಇಲ್ಲೊಬ್ಬಾಕೆ ತನ್ನ ಉದ್ದನೇಯ ಕೇಶರಾಶಿಯನ್ನ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಹೆಣ್ಣಿನ ಅಂದ ಹೆಚ್ಚಿಸೋದು ಆಕೆಯ ಕೇಶರಾಶಿ.ತಲೆ ಕೂದಲನ್ನು ಬೆಳೆಸೋಕೆ ಹೆಣ್ಮಕ್ಳು ವಿವಿಧ ತೈಲವನ್ನ ಬಳಸಿ ಹೆಚ್ಚು ಪೋಷಣೆ ಮಾಡ್ತಾರೆ.ಆದರೇ ಈಗಷ್ಟೆ ಸ್ನಾತಕೋತ್ತರ ಪದವಿ ಪೂರೈಸಿ ಯಶ್ಟೆಲ್ ವಾಹಿನಿಯಲ್ಲಿ ವೃತ್ತಿ ಆರಂಭಿಸಿರುವ ಸ್ವರ್ಣ ಎಂದ ಯುವತಿ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಉದ್ದನೆಯ ತಲೆಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾಳೆ.
ಸದಾ ನೊಂದವರ ಪರವಾಗಿ ನಿಲ್ಲಬೇಕು, ಕೈಲಾದ ಸಹಾಯ ಮಾಡಬೇಕು ಎಂಬ ಬಯಕೆ ಹೊಂದಿರುವ ಆದರ್ಶ ಯುವತಿ ಸ್ವರ್ಣ. ಕ್ಯಾನ್ಸರ್ ಪೀಡಿತರಿಗೆ ತನ್ನ ಕೇಶವನ್ನು ದಾನ ಮಾಡುತ್ತೇನೆ ಎಂದಾಗ ಆಕೆಯ ಪೋಷಕರು ಕೂಡ ಸಮ್ಮತಿ ಸೂಚಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕೂದಲಿನ ಆರೈಕೆ ಮಾಡಿದ್ದ ಸ್ವರ್ಣ, ಬೆಂಗಳೂರು ಹೇರ್ ಡೊನೇಷನ್ ಸೆಂಟರ್ ಎಂಬ ಎನ್ ಜಿ ಓ ಗೆ ತನ್ನ ಕೂದಲನ್ನು ದಾನ ಮಾಡಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿರುವ ಬೆಂಗಳೂರು ಹೇರ್ ಡೊನೇಷನ್ ಸಂಸ್ಥೆ ಕೂದಲನ್ನು ಸಂಗ್ರಹಿಸಿ ಅದರಿಂದ ವಿಗ್ ತಯಾರಿಸಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ನೀಡುತ್ತದೆ. ಕೂದಲನ್ನು ದಾನ ಮಾಡುವ ಮೂಲಕ ಕ್ಯಾನ್ಸರ್ ಪೀಡಿತರ ನೆರವಿಗೆ ನಿಂತಿರುವ ಸ್ವರ್ಣಳ ಆದರ್ಶ ಇತರರಿಗೆ ಮಾದರಿಯಾಗಿದೆ.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು