ಮೈಸೂರು:18 ಡಿಸೆಂಬರ್ 2021
ನಂದಿನಿ
ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ವಿವೇಕಾನಂದ ನಗರ ವೃತ್ತ ದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ರಸಮಂಜರಿ ಕಾರ್ಯಕ್ರಮ ಹಾಗು ಪುನೀತ್ ರಾಜಕುಮಾರ್ ನುಡಿನಮನ ಕಾರ್ಯಕ್ರಮ,ವಿವಿಧ ಕ್ಷೇತ್ರದಲ್ಲಿ ಸಾಧನೈದ ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿತ್ತು.
ನೂತನ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ” ಕನ್ನಡ ರಾಜ್ಯೋತ್ಸವವನ್ನು ಪ್ರತಿಯೊಬ್ಬ ಕನ್ನಡಿಗರು ಆಚರಿಸಬೇಕು. ಕನ್ನಡ ರಾಜ್ಯೋತ್ಸವದ ಆಚರಣೆ ಬರೀ ಒಂದು ದಿನಕ್ಕೆ, ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿತ್ಯ ನಿರಂತರವಾಗಿ ಬರವಣಿಗೆಯಲ್ಲಿ, ಆಡುವ ಮಾತಿನಲ್ಲಿ ಹೆಚ್ಚು ಹೆಚ್ಚು ಕನ್ನಡವನ್ನು ಬಳಸಿ ಬೆಳೆಸಬೇಕು ಎಂದರು ಎಂದರು.
ಜತೆಗೆ ಪುನೀತ್ ರಾಜಕುಮಾರ್ ರವರು ಎಲೆ ಮರಿ ಕಾಯಿಯಂತೆ ಇದ್ಧಂತಹ ನಟ. ಬಹುಶಃ ಅವರು ಇರುವ ತನಕ ಅವರು ಮಾಡುತ್ತಿದಂತಹ ಸಮಾಜ ಸೇವಾ ಕಾರ್ಯಗಳು ಯಾರಿಗೂ ತಿಳಿದಿರಲಿಲ್ಲ. ಅವರು ದೈವಾಧೀನರಾದ ನಂತರ ಅವರು ಸಂಪಾದಿಸಿದ್ದ ಅಭಿಮಾನಿ ಬಳಗ ಹಾಗು ಅವರು ಮಾಡಿರುವ ಧಾನಧರ್ಮದ ಕೆಲಸಗಳು ಬೆಳಕಿಗೆ ಬಂದವು. ದೇಶದ ಇತಿಹಾಸದಲ್ಲಿಯೇ ನಟನೊಬ್ಬನ ಅಂತಿಮ ದರ್ಶನಕ್ಕೆ ಸುಮಾರು 30 ಲಕ್ಷಕ್ಕಿಂತ ಅಧಿಕ ಜನರು ಬಂದಿದ್ದದ್ದು ಗಿನ್ನೀಸ್ ದಾಖಲೆಯಾದಂತಿದೆ. ಜನರು, ಪ್ರತಿಯೊಬ್ಬರೂ ಪುನೀತ್ ರಂತೆ ಸರಳ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದರು.
ಪ್ರತಿ ವರ್ಷ ಕರ್ನಾಟಕ ಸೇನಾ ಪಡೆ ವತಿಯಿಂದ ಕೊಡಮಾಡುವ ” ಕರುನಾಡ ಶ್ರೀ ಹಾಗು ಕೊರೊನಾ ವಾರಿಯರ್ ಪ್ರಶಸ್ತಿ ” ಯನ್ನು ಈ ಬಾರಿ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಬಡವರು, ನಿರ್ಗತಿಕರುಗಳಿಗೆ ತಿಂಗಳುಗಟ್ಟಲೆ ತಿಂಡಿ, ಊಟ, ಆಹಾರ ಕಿಟ್ ಗಳನ್ನು ವಿತರಣೆ ಮಾಡಿ ಜನಸೇವೆ ಮಾಡಿದ್ದ ನಾಡಪ್ರಭು ಕೆಂಪೇಗೌಡ ಸಹಕಾರ ಸಂಘದ ಅಧ್ಯಕ್ಷ ಶ್ರೀ ಗಂಗಾಧರ್ ಸಿ ಜಿ ರವರಿಗೆ ಪ್ರಧಾನ ಮಾಡಲಾಯಿತು.
ಈ ವರ್ಷದಿಂದ ಪುನೀತ್ ರವರ ಹೆಸರಿನಲ್ಲಿ ” ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ ” ಯನ್ನು ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ, ಆಡಳಿತ ಸೇವಾ ರತ್ನ, ಸಮಾಜ ಸೇವಕರಾದ ಡಾ. ಬಿ ಆರ್ ನಟರಾಜ್ ಜೋಯಿಸ್ ರವರಿಗೆ ನೂತನ ವಿಧಾನ ಪರಿಷತ್ ಸದಸ್ಯರಾದ ಡಾ. ಡಿ ತಿಮ್ಮಯ್ಯ ರವರು ಪ್ರಧಾನ ಮಾಡಿಧರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ( ಶಂಕರಪ್ಪ – ಶಿಕ್ಷಣ ಕ್ಷೇತ್ರ, ಎಸ್ ಉದಯ್ ಶಂಕರ್ – ಪತ್ರಿಕೋದ್ಯಮ ಕ್ಷೇತ್ರ, ಜಗದೀಶ್ ಮಾಯ- ಸಮಾಜ ಸೇವಾ ಕ್ಷೇತ್ರ , ಲಯನ್ಸ್ ಗಿರೀಶ್ – ವೈದ್ಯಕೀಯ ಸೇವಾ ಕ್ಷೇತ್ರ, ಮಡ್ಡೀಕೆರೆ ಗೋಪಾಲ್- ಕನ್ನಡ ಸಂಘಟನೆ ಕ್ಷೇತ್ರ, ಡಾ. ಪುಷ್ಪಾ ಅಯ್ಯಂಗಾರ್- ಸಾಹಿತ್ಯ ಕ್ಷೇತ್ರ, ಸಿ. ನಾರಾಯಣ ಗೌಡ- ಹೋಟೆಲ್ ಕ್ಷೇತ್ರ, ದಿನೇಶ್ ಕೊಪ್ಪಲು- ಸೇವಾ ಕ್ಷೇತ್ರ, ನಾಗರಾಜು- ಆಟೋ ಸಾರಿಗೆ ಕ್ಷೇತ್ರ ದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಡಾ ಅಧ್ಯಕ್ಷರಾದ ಶ್ರೀ ಹೆಚ್. ವಿ ರಾಜೀವ್ ರವರು ವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನಿಕಟ ಪೂರ್ವ ಅಧ್ಯಕ್ಷರಾದ ಹೆಚ್ ಕೆ ರಾಮು, ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷರಾದ ಶ್ರೀ ಎನ್ ವಿ ಪಣೀಶ್, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ರಾಜ್ಯಾಧ್ಯಕ್ಷ ಶ್ರೀನಿವಾಸ್ ಗೌಡ ಇನ್ನೂ ಇತರರು ಉಪಸ್ಥಿತರಿದ್ದರು.