“ಅಂದು ಇಂದು “ಪುನಶ್ಚೇತನಗೊಂಡ 299ನೇ ಕೆರೆ ಬಾಗೀನ ಅರ್ಪಿಸಿ ಗ್ರಾಮಸ್ಥರಿಗೆ ಕೆರೆ ಹಸ್ತಾಂತರಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ

ಮೈಸೂರು:16 ಡಿಸೆಂಬರ್ 2021

ನಂದಿನಿ

ಸಾಮಾನ್ಯವಾಗಿ ಜನರಿಗೆ ಅನುಕೂಲವಾಗಲೇಂದು ಸಹಾಯ ಧನ,ವೈದ್ಯಕೀಯ ಸಲಕರಣೆಗಳನ್ನ ಹಸ್ತಾಂತರಿಸುವುದನ್ನ ನೋಡಿದ್ದೇವೆ.ಆದರೇ ಇಲ್ಲೊಂದು ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಕೆರೆಯನ್ನೇ ಹಸ್ತಾಂತರ ಮಾಡಲಾಗಿದೆ.

ಹಳ್ಳದಲ್ಲಿದ್ದ ನೀರು ಇಂಗಿಹೋಗಿ ಅಲ್ಲಿನ ನೆಲ ಹುಲ್ಲುಗಾವಲಿನಂತಾಗಿತ್ತು.ಅಂತಹ ಪ್ರದೇಶ ಈಗ ಜಲಾವೃತಗೊಂಡಂತೆ ನಳನಳಿಸುತ್ತಿದೆ.ಸತತ 300 ಗಂಟೆಗಳ ಕಾಲ ಹಮ್ಮಿಕೊಂಡ ಕೆರೆ ಅಭಿವೃದ್ಧಿ ಕಾಮಗಾರಿಯಿಂದ ಇದೆಲ್ಲವೂ ಸಾಧ್ಯವಾಗಿದೆ.ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ ಕರಕನಹಳ್ಳಿ ಗ್ರಾಮದ ಚಿಕ್ಕ ಕೆರೆಯನ್ನು ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಕೆರೆ ಅಭಿವೃದ್ಧಿಯಾಗಿದ್ದು,
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆರವರು ಕೆರೆಗೆ ಬಾಗೀನ ಅರ್ಪಿಸುವ ಮೂಲಕ ಗ್ರಾಮಸ್ಥರಿಗೆ ಕೆರೆ ಹಸ್ತಾಂತರಿಸಿದರು.

ಇದಕ್ಕೂ ಮುನ್ನ ಗ್ರಾಮದ ಮಹಿಳೆಯರು ಪೂರ್ಣ ಕುಂಭ,ವಾದ್ಯಗೋಷ್ಠಿಗಳೊಂದಿಗೆ ವೀರೇಂದ್ರ ಹೆಗಡೆಯವರನ್ನ ಸ್ವಾಗತಿಸಿದರು.

ಅಂದು ಇಂದು

ಬಾಗೀನ ಸಮರ್ಪಿಸಿದ ನಂತರ ಮಾತನಾಡಿದ ಅವರು ಕರಕನಹಳ್ಳಿಯ ಚಿಕ್ಕಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ.
4.34 ಎಕರೆ ವಿಸ್ತೀರ್ಣದ ಈ ಕೆರೆ ಕಳೆದ 20 ವರ್ಷಗಳಿಂದ ತುಂಬಿರಲಿಲ್ಲ. ಒಂದು ವರ್ಷದಲ್ಲಿ ಟ್ರಸ್ಟ್ ಈ ಕೆರೆಯನ್ನು ₹ 5.72 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ. ಈ ಕೆರೆಯಿಂದ 150 ಕುಟುಂಬಗಳಿಗೆ ಪ್ರಯೋಜ‌ನವಾಗಿದ್ದು, 20 ಬೋರ್ ವೆಲ್ ಗಳು ಜಲಮರುಪೂರ್ಣಗೊಂಡಿದೆ. ಸುಮಾರು 1 ಸಾವಿರ ಜಾನುವಾರುಗಳಿಗೆ ಕುಡಿಯಲು ಸಹಕಾರಿಯಾಗಿದೆ.
ಟ್ರಸ್ಟ್ ವತಿಯಿಂದ ಪುನಶ್ಚೇತನಗೊಳಿಸಿದ 299 ನೇ ಕೆರೆ ಇದಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 30 ಕೆರೆಗಳನ್ನು ಒಂದು ವರ್ಷದಲ್ಲಿ ಪುನಶ್ಚೇತನಗೊಳಿಸಿದ್ದು, ಈಗ ಅವುಗಳೆಲ್ಲ ನೀರಿನಿಂದ ತುಂಬಿವೆ.ಕೆರೆ ಅಭಿವೃದ್ಧಿ ಖುಷಿ ಆಗಿದೆ. ಇಲ್ಲಿಗೆ ಬಂದಾಗ ಹಿಂದೆ ಕೊಡ ಹಿಡಿದು ನೀರು ತರುತ್ತಿದರು.‌ಪ್ರತಿಯೊಂದಕ್ಕೂ ಸರ್ಕಾರದ ಕಡೆಗೆ ನೋಡುವುದು ಸರಿಯಲ್ಲ. ಗ್ರಾಮೀಣ ಭಾಗದಲ್ಲಿ ಬಾವಿ, ಕೊಳವೆ ಬಾವಿಯಲ್ಲಿ ನೀರು ಇರಬೇಕು. ಈಗ ಒಂದು ಸಾವಿರ ಅಡಿಯವರೆಗೂ ನೀರು ಬರಲ್ಲ. ಆದರೆ ಕೆರೆ ಅಭಿವೃದ್ಧಿ ಆದ ಮೇಲೆ ನೀರು ಉಕ್ಕಿ ಬರುತ್ತಿದೆ. ಈ ತರಹದ ಅನೇಕ ಉದಾಹರಣೆಗಳಿವೆ. ಗ್ರಾಮಸ್ಥರು ಸೇರಿ ಅಭಿವೃದ್ಧಿಪಡಿಸಿದ್ದಾರೆ‌. ಹಕ್ಕಿಗಳೆಲ್ಲ ಇಲ್ಲಿ ಬರುತ್ತಿವೆ. ಪ್ರಾಣಿ ಪಕ್ಷಿಗಳಿಗೆ ಸಹಕಾರಿಯಾಗಿದೆ. ಒಟ್ಟು 366 ಕೆರೆ ಅಭಿವೃದ್ದಿಪಡಿಸಲು ತೆಗೆದುಕೊಂಡಿದ್ದು, ಈ ವರ್ಷ‌ 166 ಕೆರೆ ಗುರಿ ಹೊಂದಲಾಗಿದೆ‌. ಗ್ರಾಮಸ್ಥರ ಸಹಭಾಗಿತ್ವದಿಂದ ಕಡಿಮೆ ವೆಚ್ಚದಲ್ಲಿ ಪುನಶ್ಚೇತನಗೊಂಡಿದೆ. ಕೃಷಿಕರಿಗೆ ಮಹತ್ವ ಸಿಗಬೇಕು. ಕೆರೆಯ ಸುತ್ತ ಗಿಡಗಳನ್ನು ನೆಡಬೇಕು ಎಂದರು.

ಕಾರ್ಯಕ್ರಮದಲ್ಲಿ ಎಚ್.ವಿ.ರಾಜೀವ್,ಮರಿಗೌಡ ಸೇರಿದಂತೆ ಗ್ರಾಮದ ಮುಖಂಡರು,ಗ್ರಾಮಸ್ಥರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *