ಮೈಸೂರು:28 ನವೆಂಬರ್ 2021
ನಂದಿನಿ
ಇಂದು ಮೈಸೂರಿನ ರಾಯಲ್ ಇನ್ ಹೋಟೆಲ್ ನಲ್ಲಿ ನಡೆದ ನಾಯಕ ಸಮುದಾಯದ ಮುಖಂಡರ ಸಭೆಯಲ್ಲಿ ಮೈಸೂರು ವಿಭಾಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಶಾಖಾ ಮಠ ಮತ್ತು ನಾಯಕ ಸಮುದಾಯದ ಮುಂದಿನ ರಾಜಕೀಯ ನಡೆಯ ಬಗ್ಗೆ ಸಭೆಯಲ್ಲಿ ಹಲವು ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ದಿಸಿರುವ ಪಕ್ಷೇತರ ಅಭ್ಯರ್ಥಿ ಆರ್ ಮಂಜುನಾಥ್ ರವರಿಗೆ ಹಲವು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಒಮ್ಮತದಿಂದ ಮತ ನೀಡುವುದ್ದಾಗಿ ಜೊತೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯಿತಿ ಸದಸ್ಯರ ಮತ ಕೊಡಿಸುವುದ್ದಾಗಿ ತೀರ್ಮಾನ ಮಾಡಿದರು..
★ಮುಂದಿನ ತಿಂಗಳು ಜಾತ್ರೆ ಪ್ರಯುಕ್ತ ಮೈಸೂರು ಭಾಗಕ್ಕೆ ಪ್ರವಾಸ ಕೈಗೊಂಡಿರುವ ಸ್ವಾಮೀಜಿ ರವರಿಗೆ ಯಾವ ರೀತಿಯ ಬೆಂಬಲ ನೀಡಬೇಕು ಹಾಗೂ *ಶಾಖಾ ಮಠದ ಬಗ್ಗೆ ಸ್ವಾಮೀಜಿ ರವರು ತಮ್ಮ ತೀರ್ಮಾನ ತಿಳಿಸಬೇಕು* ಎಂದು ಸಭೆಗೆ ಆಗಮಿಸಿದ ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸಿದರು.
★ *ಸ್ವಾಮೀಜಿ ರವರು ಪ್ರವಾಸಕ್ಕೂ ಮುನ್ನ ಶಾಖಾ ಮಠ ಮಾಡುತ್ತೇವೆ ಎಂದು ಘೋಷಿಸಿದ ನಂತರ ಮೈಸೂರು ಭಾಗದಲ್ಲಿ ಪ್ರವಾಸ ಮಾಡಲಿ ಎಂದು ಸಭೆಯಲ್ಲಿ ನಿರ್ಣಯ* ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರ್, ಪಿರಿಯಾಪಟ್ಟಣ ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷರಾದ ಪುಟ್ಟಯ್ಯ ರವರು, ಹುಣಸೂರು ತಾಲ್ಲೂಕು ನಾಯಕರ ಸಂಘದ ಗೌರವ ಅಧ್ಯಕ್ಷರಾದ ಅಣ್ಣಯ್ಯ ನಾಯಕರು,
KR ನಗರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀನಿವಾಸ ನಾಯಕರು, ತಿಮ್ಮನಾಯಕರು, ತಿಪ್ಪೂರು ಮಾದೇವ್, ನವಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಣ್ಣಮ್ಮ, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಯಜಮಾನರಾದ ಲೋಕೇಶ್ ರವರು, ದೇವದತ್, ಕಾಳಿದಾಸ ನಾಯಕರು, ರೈಲ್ವೆ ವೆಂಕಟೇಶ್ ನಾಯಕರು, ರೈಲ್ವೆ ಸಿದ್ದಯ್ಯ ರವರು, ಟಿ ನರಸೀಪುರ ಮೂಗೂರು ಕುಮಾರ್, ರಮ್ಮನ ಹಳ್ಳಿ ಜವರಪ್ಪ, ವೆಂಕಟಯ್ಯ, ಮಯೂರ ಹುಣಸೂರ್, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶಿವಕುಮಾರ್, ಶಿವಪ್ರಸಾದ್ ರವರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಸವರಾಜು, ರೇವಣ್ಣ, ನಿಂಗರಾಜು,
ರಾಜು ಕೃಷ್ಣಪುರ, ವೆಂಕಟೇಶ್, ಶಿವಕುಮಾರ್, ಸುರೇಶ್, ಲೋಕೇಶ್, ಸ್ವಾಮಿ ರವರು, ಶಿವರಾಜು, ನಾಗರಾಜು, ಮಹದೇವ ನಾಯಕ, ಉಪಾಧ್ಯಕ್ಷರಾದ ನಾಗಮ್ಮ, ಕಾವ್ಯ ಲಕ್ಷ್ಮಣ, ರೇವಣ್ಣ, ಆನಂದ ನಾಯಕ, ಗೀತ ನಿಂಗನಾಯಕ, ಲಕ್ಷ್ಮಣ ನಾಯಕ, ಪ್ರಕಾಶ್ ನಾಯಕ, ಹಾಗೂ ಯುವ ಮುಖಂಡರಾದ ಡಾ. ಬಂಡಳ್ಳಿ ಕುಮಾರ್, ಚನ್ನನಾಯಕ ಕೋಟೆ, ಶಿವು ನಾಗವಾಲ, ಹದಿನಾರು ಪ್ರಕಾಶ್, ವಿನೋದ್ ನಾಗವಾಲ, ಮಹೇಶ್ ಮಾಚಬಾಯನಹಳ್ಳಿ, ರವಿ, ಪ್ರಕಾಶ್, ವಕೀಲರು ರವಿ, ರಾಜು ಮಾರ್ಕೆಟ್, ಮಾದೇಶ್, ಸುರೇಶ್, ಮದಕರಿ ಮಂಜು, ಜಯಕುಮಾರ್, ವೆಂಕಟೇಶ್ ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.