ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಜಿಟಿಡಿ ಚಾಲನೆ

ಮೈಸೂರು:6 ನವೆಂಬರ್ 2021

ನಂದಿನಿ

ಶಾಸಕರಾದ ಶ್ರೀ ಜಿ.ಟಿ.ದೇವೇಗೌಡರು ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿದರು.

ಚಾಮುಂಡೇಶ್ವರಿ ಕ್ಷೇತ್ರದ ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ, ರಸ್ತೆ, ಚರಂಡಿ ಹಾಗೂ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಗೆ ಶಾಸಕ ಜಿಟಿಡಿ ಚಾಲನೆ ನೀಡಿದರು.

ಅವರು ಇಂದು ರೂ. 30.00 ಲಕ್ಷ ವೆಚ್ಚದಲ್ಲಿ ಹೂಟಗಳ್ಳಿಯ ಕೆ.ಹೆಚ್.ಬಿ. ಬಡಾವಣೆಯ ವಿಜಯ ಬ್ಯಾಂಕ್ ಸರ್ಕಲ್‌ನಿಂದ ನಾರಾಯಣಪ್ಪನವರ ಪೆಟ್ರೂಲ್ ಬಂಕ್ ವರೆಗೆ ಒಳಚರಂಡಿ ನಿರ್ಮಾಣ ಕಾಮಗಾರಿ,ನಂತರ ರೂ.30 ಲಕ್ಷ ವೆಚ್ಚದಲ್ಲಿ ಹೂಟಗಳ್ಳಿ ಗ್ರಾಮದಿಂದ ಕೆ.ಐ.ಎ.ಡಿ.ಬಿ.ಗೆ ಹೋಗುವ ರಸ್ತೆಯಲ್ಲಿ ಚರಂಡಿ ಮತ್ತು ಡೆಕ್ ನಿರ್ಮಾಣ ಕಾಮಗಾರಿಿ.
ರೂ 50 ಲಕ್ಷ ವೆಚ್ಚದಲ್ಲಿ ಕೂರ್ಗಳ್ಳಿ ಗ್ರಾಮದ ಕೆ.ಆರ್.ಎಸ್. ರಸ್ತೆಯಿಂದ ನಂಜುಂಡೇಗೌರ ಮನೆಯ ಕಡೆ ಸೇತುವೆ ವಿಸ್ತರಣೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಕೆ.ಆರ್.ಎಸ್. ಡಬಲ್ ರಸ್ತೆಯಿಂದ ಮೌನೇಶ್ ಕುಮಾರ್ ಮನೆವರೆ ಚರಂಡಿ ನಿರ್ಮಾಣ ಮತ್ತು ರಸ್ತೆ ಎತ್ತರಿಸುವ ಕಾಮಗಾರಿಗೆ ಚಾಲನೆ ನೀಡಿದರು.

ರೂ. 1 ಕೋಟಿ 52 ಲಕ್ಷ ವೆಚ್ಚದಲ್ಲಿ ಕೂರ್ಗಳ್ಳಿ ಗ್ರಾಮಕ್ಕೆ ಶಾಶ್ವತವಾಗಿ ಶುದ್ದವಾದ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಕೆ.ಐ.ಬಿ.ಡಿ.ಎ. ಯಿಂದ ನೀಡುವ ನೀರನ್ನು ಶುದ್ದಿಕರಿಸಿ, ಗ್ರಾಮಕ್ಕೆ ನೀಡುವ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಕೂರ್ಗಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ ರೂ ಲಕ್ಷ ವೆಚ್ಚದಲ್ಲಿ ಅಂಗನವಾಡಿ ನಿರ್ಮಾಣ ಮಾಡುವ ಕಾಮಗಾರಿಗೆ ಚಾಲನೆ‌ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ‌ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೂರ್ಗಳ್ಳಿ ಮಹದೇವು, ಮಾಜಿ ಜಿ.ಪಂ. ಸದಸ್ಯೆ ಚಂದ್ರಿಕ ಸುರೇಶ್, ಮಾಜಿ ತಾ.ಪಂ.ಸದಸ್ಯರಾದ ವಿಜಯ್ ಕುಮಾರ್, ರಾಣಿ ಸತೀಶ್,ಮುಖಂಡರಾದ ಹೂಟಗಳ್ಳಿ ಸುರೇಶ್, ದೇವರಾಜು, ಮಂಚೇಗೌಡ, ಲೋಕೇಶ್, ಕೃಷ್ಣ, ಮಹೇಶ್ ಮಹದೇವು, ಸಿದ್ದರಾಜು, ಲಲಿತ ನಾಗೇಶ್, ಕೂರ್ಗಳ್ಳಿಯ ಯ!ರಾಮಣ್ಣ, ನಂಜುಂಡೇಗೌಡ, ಮೈದನಹಳ್ಳಿ ಶಿವಣ್ಣ, ಬೋರೇಗೌಡ, ಚನ್ನೇಗೌಡ, ಸತೀಶ್, ರಾಮು, ಜಿಮ್ ರಾಮು, ಮಾದೇಶ್, ಭಕ್ತ ವತ್ಸಲ, ದನು, ದೀಪು, ಡಿ.ಎಸ್.ಎಸ್.ಮುಖಂಡ ಮಂಜು, ಮುರುಗೇಶ್ ಹಾಗೂ ಗ್ರಾಮದ ಯಜಮಾರು, ಮುಖಂಡರು, ಪೌರಾಯುಕ್ತರಾದ ನರಸಿಂಹಮೂರ್ತಿ, ಎಇಇ ನಾಗರಾಜು, ಡಿ.ಟಿ.ಕುಬೇರ್ ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು,

Leave a Reply

Your email address will not be published. Required fields are marked *