ನಂದಿನಿ ಮನುಪ್ರಸಾದ್ ನಾಯಕ್
📚 ಪುಸ್ತಕಮನೆ ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ: ಡಾ.ಈ.ಸಿ.ನಿಂಗರಾಜ್ ಗೌಡ ಅಭಿನಂದನೆ🌸
ಪುಸ್ತಕ ಸಂಸ್ಕೃತಿಯನ್ನು ಮನೆಮನೆಗೆ ತಲುಪಿಸುವ ಮಹತ್ತರ ಸೇವೆಯ ಮೂಲಕ
ವಾಚನದ ದೀಪ ಬೆಳಗಿಸಿದ ಪುಸ್ತಕಮನೆ ಅಂಕೇಗೌಡರು
ಪಡೆದಿರುವ ಪದ್ಮಶ್ರೀ ಗೌರವ
ಕನ್ನಡ ನಾಡಿಗೆ, ಸಾಹಿತ್ಯ ಲೋಕಕ್ಕೆ ಮತ್ತು ಪುಸ್ತಕ ಪ್ರೇಮಿಗಳಿಗೆಲ್ಲ
ಅಪಾರ ಹೆಮ್ಮೆಯ ವಿಷಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡರವರು ತಿಳಿಸಿದ್ದಾರೆ.
ಮನೆಗೊಂದು ಗ್ರಂಥಾಲಯ ಎಂಬ ಕನಸಿಗೆ ಜೀವ ತುಂಬಿ,
ಪುಸ್ತಕವನ್ನು ಜೀವನದ ಅವಿಭಾಜ್ಯ ಭಾಗವಾಗಿಸಿರುವ ಅಂಕೇಗೌಡರ ಪರಿಶ್ರಮ, ನಿಸ್ವಾರ್ಥ ಸೇವೆ ಮತ್ತು ಪುಸ್ತಕ ಪ್ರೀತಿಗೆ
ಈ ರಾಷ್ಟ್ರಮಟ್ಟದ ಗೌರವ ಸಂಪೂರ್ಣ ಯೋಗ್ಯವಾಗಿದೆ. ಆದಕ್ಕಾಗಿ ಅಂಕೇಗೌಡರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇನೆ.
ಇನ್ನಷ್ಟು ವರ್ಷಗಳು ಪುಸ್ತಕ ಬೆಳಕು ಸಮಾಜವನ್ನು ಬೆಳಗಿಸಲಿ ಎಂದು ಹಾರೈಸುತ್ತೇನೆ.
ಅಂಕೇಗೌಡರವರ ಸೇವೆಯನ್ನೂ ಗುರುತಿಸಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಮಾಡಿದ ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರ ಸರ್ಕಾರಕ್ಕೂ ನಾಡಿನ ಜನತೆಯ ಪರವಾಗಿ ಕೃತಜ್ಞತೆಯನ್ನೂ , ಧನ್ಯವಾದಗಳನ್ನೂ ಸಲ್ಲಿಸುವುದಾಗಿ ಡಾ.ಈ.ಸಿ. ನಿಂಗರಾಜ್ ಗೌಡರವರು ತಿಳಿಸಿದ್ದಾರೆ.
ವಂದನೆಗಳೊಂದಿಗೆ,
ಡಾ.ಈ.ಸಿ.ನಿಂಗರಾಜ್ ಗೌಡ.
Mobile 📱: 9980184789