ನಂದಿನಿ ಮನುಪ್ರಸಾದ್ ನಾಯಕ್
ಮೈಸೂರಿನಲ್ಲಿ ಪರಿಸರ ಸ್ನೇಹಿ ‘ಇಕೋ-ವೀಲ್ಸ್’ಗೆ ಚಾಲನೆ: 75 ಮಹಿಳೆಯರ ಬದುಕಿಗೆ ಎಲೆಕ್ನಿಕ್ ಆಟೋಗಳ ಆಸರೆ
ಹಸಿರು ಮೈಸೂರು, ಸ್ವಚ್ಚ ಮೈಸೂರು’ ಅಭಿಯಾನದ ಭಾಗವಾಗಿ ಮಹಿಳಾ ಸಬಲೀಕರಣಕ್ಕೆ ಮಹತ್ವದ ಹೆಜ್ಜೆ ಹರ್ಬಲೈಫ್ ಇಂಡಿಯಾ, ಶಿಶು ಮಂದಿರ (ಬೆಂಗಳೂರು) ಮತ್ತು ಸಾವಿಯೋ ಟ್ರಸ್ಟ್ (ಮೈಸೂರು) ಸಹಯೋಗ

ಮೈಸೂರು, ಜನವರಿ 16, 2026: ಜಾಗತಿಕ ಆರೋಗ್ಯ ಮತ್ತು ಕ್ಷೇಮ ಸಂಸ್ಥೆಯಾದ ಹರ್ಬಲೈಫ್, ಕಳೆದ ಮೂರು ದಶಕಗಳಿಂದ ಸಮಾಜದ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸುತಿರುವ ಬೆಂಗಳೂರಿನ ‘ಶಿಶು ಮಂದಿರ’ ಹಾಗೂ ಮೈಸೂರಿನ ‘ನಾವಿಯೋ ಟ್ರಸ್ಟ್’ ಸಹಯೋಗದೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ‘ಇಕೋ-ವೀಲ್ಸ್ ‘ ಮಹಿಳಾ ಸಬಲೀಕರಣ ಯೋಜನೆಗೆ ಚಾಲನೆ ನೀಡಿತು.
ಈ ಮಹತ್ವದ ಯೋಜನೆಯಡಿ ಮೈಸೂರಿನ 75 ಮಹಿಳೆಯರಿಗೆ ಎಲೆಕ್ನಿಕ್ ಆಟೋಗಳನ್ನು ವಿತರಿಸುವ ಮೂಲಕ ಅವರಿಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸಲಾಯಿತು. ನಗರದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ಜೊತೆಗೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಇದೇ ಸಂದರ್ಭದಲ್ಲಿ ಮಹಿಳೆಯರನ್ನು ಹಸಿರು ಸಾರಿಗೆಯ ರಾಯಭಾರಿಗಳನ್ನಾಗಿ ಬಿಂಬಿಸುವ ವರ್ಷಪೂರ್ತಿ ನಡೆಯಲಿರುವ “ಹಸಿರು ಮೈಸೂರು, ಸ್ವಚ್ಛ ಮೈಸೂರು” ಅಭಿಯಾನಕ್ಕೂ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎನ್. ಶ್ರೀವತ್ಸ, ಹರ್ಬಲೈಫ್ ಇಂಡಿಯಾದ ಉಪಾಧ್ಯಕ್ಷ (ಮಾರುಕಟ್ಟೆ ತಂತ್ರ ಮತ್ತು ಅನುಷ್ಠಾನ) ಉದಯ್ ಪ್ರಕಾಶ್ ಹಾಗೂ ಇತರ ಗಣ್ಯರು ಉದ್ಘಾಟಿಸಿದರು.
ಯೋಜನೆಯ ಹಿನ್ನೆಲೆ ಮತ್ತು ಉದ್ದೇಶ
ಫಲಾನುಭವಿಗಳ ಬದುಕಿನಲ್ಲಿ ಆಶಾಕಿರಣವಾಗಿದ್ದ ‘ಇಕೋ-ವೀಲ್ಸ್’ ಯೋಜನೆಯನ್ನು 2024ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆರಂಭಿಸಲಾಗಿತ್ತು. ಅಲ್ಲಿ 115ಕ್ಕೂ ಹೆಚ್ಚು ಹಿಂದುಳಿದ ವರ್ಗದ ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ (LGBTQ+) ಇ-ಆಟೋ, ಕೌಶಲ್ಯ ತರಬೇತಿ ಮತ್ತು ಲೈಸೆನ್ಸ್ ಪಡೆಯಲು ನೆರವು ನೀಡಲಾಗಿತ್ತು. ಇದರ ಪರಿಣಾಮವಾಗಿ, ಫಲಾನುಭವಿಗಳ ಮಾಸಿಕ ಆದಾಯ 10,000 ರೂ.ನಿಂದ 30,000 ರೂ.ಗಿಂತಲೂ ಹೆಚ್ಚಾಗಿದೆ. ಬೆಂಗಳೂರಿನ ಈ ಯಶಸ್ಸಿನಿಂದ ಪ್ರೇರಿತಗೊಂಡು, ಈಗ ಮೈಸೂರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಮೈಸೂರಿನಲ್ಲಿ ಒಂಟಿ ಪೋಷಕರು, ವಿಧವೆಯರು, ದೌರ್ಜನ್ಯ ಸಂತ್ರಸ್ತರು ಮತ್ತು ತೃತೀಯ ಲಿಂಗಿಗಳು ಸೇರಿದಂತೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಇ-ಆಟೋಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ವ್ಯವಸ್ಥಿತ ವಾಹನಚಾಲನಾ ತರಬೇತಿ, ಲೈಸೆನ್ಸ್ ಮಾಡಿಸಿಕೊಡುವುದು, ವಾಹನ ನಿರ್ವಹಣೆ ಮತ್ತು ಮೂಲಭೂತ ಉದ್ಯಮಶೀಲತಾ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತಿದೆ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಟಿ.ಎಸ್, ಶ್ರೀವತ್ಸ, “ಮಹಿಳೆಯರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಮತ್ತು ನಗರದ ಹಸಿರು ನಾರಿಗೆ ವ್ಯವಸ್ಥೆಗೆ ಕೊಡುಗೆ ನೀಡಲು ಇಕೋ-ವೀಲ್ಸ್ ಯೋಜನೆ ಉತ್ತಮ ವೇದಿಕೆ ಸಮಾನತೆ ಮತ್ತು ಸಾಮಾಜಿಕ ಪ್ರಗತಿ ಪ್ರತಿಪಾದಿಸುವ ಇಂತಹ ಕಾರ್ಯಗಳಿಗೆ ಮೈಸೂರು ಸದಾ ಬೆಂಬಲ ನೀಡುತ್ತದೆ.” ಎಂದರು.
ಹರ್ಬಲೈಫ್‌ನ ಉಪಾಧ್ಯಕ್ಷ ಉದಯ್ ಪ್ರಕಾಶ್ ಮಾತನಾಡಿ, ನುಸ್ತಿದ ಪ್ರಗತಿ ಮತ್ತು ಸಮುದಾಯದ ಏಳಿಗೆಗೆ ಹರ್ಬಲೈಫ್ ಬದ್ಧವಾಗಿದೆ. ಬೆಂಗಳೂರಿನ ಯಶಸ್ಸಿನ ನಂತರ ಮೈಸೂರಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಸಂತಸ ತಂದಿದೆ. ಇದು ಕೇವಲ ಮಹಿಳೆಯರಿಗೆ ಆಟೋ ನೀಡುವ ಯೋಜನೆಯಲ್ಲ, ಬದಲಾಗಿ ಅವರ ಕುಟುಂಬ ಮತ್ತು ಸಮುದಾಯವನ್ನು ಉಜ್ವಲ ಭವಿಷ್ಯದತ್ತ ಮುನ್ನಡೆಸುವ ಪ್ರಯತ್ನವಾಗಿದೆ,” ಎಂದು ಹೇಳಿದರು.
ಶಿಶು ಮಂದಿರದ ನಿರ್ದೇಶಕ ಆನಂದ್ ಸಿ. ಅವರು ಮಾತನಾಡಿ. ‘ಮೂರು ದಶಕಗಳಿಂದ ನಾವು ಗೌರವಯುತ ಜೀವನೋಪಾಯ ಮಾರ್ಗ ಕಲ್ಪಿಸಲು ಶ್ರಮಿಸುತ್ತಿದ್ದೇವೆ. ಇಕೋ-ವೀಲ್ಸ್ ಕೇವಲ ಒಂದು ಯೋಜನೆಯಲ್ಲ, ಇದೊಂದು ಆತ್ಮವಿಶ್ವಾಸದ ಅಂದೋಲನ. ಮೈಸೂರಿನಲ್ಲಿ ಹೆಚ್ಚಿನ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಸಮಾಜದಲಿ ಗೌರವಯುತ ಸ್ಥಾನ ಪಡೆಯಲು ಇದು ನೆರವಾಗಲಿದೆ,” ಎಂದು ಅಭಿಪ್ರಾಯಪಟ್ಟರು.
ಸಾವಿಯೋ ಟ್ರಸ್ಟ್ ಸಂಸ್ಥಾಪಕ ವಿಜಯ್ ಮಾತನಾಡಿ, ಸುಸ್ತಿರ ಜೀವನೋಪಾಯವು ಹೇಗೆ ಇಡೀ ಸಮುದಾಯವನ್ನು ಬದಲಾಯಿಸಬಲ್ಲದು ಎಂಬುದಕ್ಕೆ ಇಕೋ-ವೀಲ್ಸ್ ಸಾಕ್ಷಿಯಾಗಿದೆ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ ನೀಡುವ ಈ ಸಹಭಾಗಿತ್ವದ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ,” ಎಂದರು.
ಫಲಾನುಭವಿ ಹಾಗೂ ಆಟೋ ಚಾಲಕಿ ನಾಗವೆಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ, ‘ಈ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದು ನನಗೆ ಮಾತ್ರವಲ್ಲ, ಅನೇಕ ಮಹಿಳೆಯರಿಗೆ ಕನಸು ಕಾಣಲು ಮತ್ತು ಉತ್ತಮ ಜೀವನ ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಅಸಾಧ್ಯವೆಂದುಕೊಂಡಿದ್ದ ಕನಸು ಈಗ ನನಸಾಗುತ್ತಿದೆ,” ಎಂದು ಭಾವುಕರಾದರು.
ಬೆಂಗಳೂರಿನಲ್ಲಿ ಇ-ಅಟೋಗಳ ಬಳಕೆಯಿಂದ ನಗರದ ಮಾಲಿನ್ಯ ತಡೆಗಟ್ಟುವಲ್ಲಿ ಮತ್ತು ಕೇಂದ್ರ ಸರ್ಕಾರದ FAME-II ಗುರಿಗಳನ್ನು ತಲುಪುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಿದೆ. ಮೈಸೂರಿನಲ್ಲಿಯೂ ಈ ಬದಲಾವಣೆಯು ವಾರ್ಷಿಕವಾಗಿ 500 ಮರಗಳನ್ನು ನೆಡುವುದಕ್ಕೆ ಸಮಾನವಾದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಮೈಸೂರು ಯೋಜನೆ: ಸ್ಥಳೀಯ ಅಗತ್ಯಕ್ಕೆ ತಕ್ಕ ತರಬೇತಿ ಮತ್ತು ಉತ್ತಮ ಆದಾಯದ ಮಾರ್ಗಗಳು